Advertisement

ನೆತನ್ಯಾಹು ಜತೆ ಉಗ್ರ ನಿಗ್ರಹ ಚರ್ಚೆ: ಇಸ್ರೇಲಿಗೆ ಮೋದಿ ತ್ರಿದಿನ ಭೇಟಿ

07:21 PM Jul 03, 2017 | udayavani editorial |

ಹೊಸದಿಲ್ಲಿ : ಭದ್ರತೆ ಮತ್ತು ಸಾರ್ವಭೌಮತೆಯ ವಿಷಯದಲ್ಲಿ ಎಂಟೆದೆಯ ರಾಷ್ಟ್ರವೆಂದೇ ಖ್ಯಾತಿವೆತ್ತಿರುವ ಇಸ್ರೇಲ್‌ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 4ರ ಮಂಗಳವಾರದಿಂದ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣ ಬೆಳೆಸಲಿದ್ದಾರೆ. 

Advertisement

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗಿನ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಪರಸ್ಪರ ಲಾಭದಾಯಕ ಎನಿಸುವ ವ್ಯಾಪಕ ವಿಷಯಗಳಿಗೆ ಸಂಬಂಧಿಸಿ ಆಳವಾದ ಚರ್ಚೆ ನಡೆಸಲಾಗುವುದು ಎಂದು ಪ್ರಧಾನಿ ಮೋದಿ ತಮ್ಮ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

“ಭಯೋತ್ಪಾದನೆಯಂತಹ ಸಮಾನ ಹಾಗೂ ಪ್ರಮುಖ ಭದ್ರತಾ ಸವಾಲುಗಳನ್ನು ನಿಭಾಯಿಸುವ ಬಗ್ಗೆಯೂ ನಾವು ಚರ್ಚಿಸಲಿದ್ದೇವೆ’ ಎಂದು ಮೋದಿ ತಿಳಿಸಿದ್ದಾರೆ. 

ಇಸ್ರೇಲಿಗೆ ಭೇಟಿ ನೀಡುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಮೋದಿ, “ಈ ಅಭೂತಪೂರ್ವ ಭೇಟಿಯನ್ನು ಕಾತರದಿಂದ ಎದುರು ನೋಡುತ್ತಿರುವ ನಾನು, ಈ ಭೇಟಿ ಉಭಯ ದೇಶಗಳನ್ನು ಹಾಗೂ ಅವುಗಳ ಜನರನ್ನು ಇನ್ನಷ್ಟು ಸನಿಹಕ್ಕೆ ತರುವಂತಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next