ನವದೆಹಲಿ: ಕೆನ್-ಬೆಟ್ವಾ ನದಿ ಜೋಡಣೆಯಿಂದ ಮಧ್ಯಪ್ರದೇಶದಲ್ಲಿರುವ ಪನ್ನಾ ಹುಲಿ ಸಂರಕ್ಷಿತ ಅರಣ್ಯ ನಾಶವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಂ ರಮೇಶ್ ಸೋಮವಾರ(ಮಾರ್ಚ್ 22) ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೇರಳ ‘ಲವ್ ಜಿಹಾದ್’, ‘ದೇಶ ವಿರೋಧಿ ಚಟುವಟಿಕೆ’ಗಳ ಕೇಂದ್ರ : ಸದಾನಂದ ಗೌಡ
ಕೆನ್ ಮತ್ತು ಬೆಟ್ವಾ ನದಿ ಜೋಡಣೆ ಯೋಜನೆಗೆ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವ ಸಂದರ್ಭದಲ್ಲಿ ಪರಿಸರ ಖಾತೆ ಮಾಜಿ ಸಚಿವ ಜೈರಾಂ ರಮೇಶ್ ಅವರು, ಈ ಯೋಜನೆ ಬಗ್ಗೆ ಹತ್ತು ವರ್ಷಗಳ ಹಿಂದೆಯೇ ಪರ್ಯಾಯ ಸಲಹೆ ನೀಡಲಾಗಿತ್ತು. ಆದರೆ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಇಂದು ಕೆನ್ ಮತ್ತು ಬೆಟ್ವಾ ನದಿ ಜೋಡಣೆ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಇದರಿಂದ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಅರಣ್ಯ ನಾಶವಾಗಲಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳು ವಿಶ್ವ ಜಲದಿನಾಚರಣೆಯ ಅಂಗವಾಗಿ ನಡೆಯಲಿರುವ ಜಲ್ ಶಕ್ತಿ ಅಭಿಯಾನ್, ಕ್ಯಾಚ್ ದ ರೈನ್ ಅಭಿಯಾನದ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕೆನ್, ಬೆಟ್ವಾ ನದಿ ಜೋಡಣೆ ಯೋಜನೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿ ತಿಳಿಸಿದೆ.