Advertisement
ಗುರುವಾರದಂದು ಆರಂಭವಾದ ಆಸಿಯಾನ್ ಶೃಂಗಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಮೋದಿ, ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿರುವ ರಾಷ್ಟ್ರಗಳ ಸಾರ್ವ ಭೌಮತೆಯನ್ನು ಕಾಪಾಡಲು ಆಸಿಯಾನ್ ಒಕ್ಕೂಟ ಹೊಂದಿರುವ ಆಶಯಗಳಿಗೆ ಭಾರತ ಬದ್ಧವಾಗಿದೆ. ಅದಕ್ಕನುಗುಣವಾಗಿ, ಇಂಡೋ ಪೆಸಿಫಿಕ್ ಓಶಿಯನ್ಸ್ ಇನಿಶಿಯೇಟಿವ್ಸ್ (ಐಪಿಒಐ) ಹಾಗೂ ಆಸಿಯಾನ್‌ನ ಔಟ್‌ಲುಕ್ ಫಾರ್‌ದ ಇಂಡೋ-ಪೆಸಿಫಿಕ್ ಮಾರ್ಗ ಸೂಚಿಗಳನ್ನು ಗೌರವಿಸುವುದರೊಂದಿಗೆ ಅವುಗಳ ಅನುಷ್ಠಾನಕ್ಕೆ ಗುರುತರ ಸಹಕಾರ ನೀಡಲಿದೆ ಎಂದು ತಿಳಿಸಿದರು.
Related Articles
Advertisement
ಪ್ರಧಾನಿ ಮೋದಿಯವರ ನಾಲ್ಕು ದಿನಗಳ ವಿದೇಶ ಪ್ರವಾಸ ಶುಕ್ರವಾರದಿಂದ ಆರಂಭವಾಗಲಿದೆ. ಅ.29ರಿಂದ ಅ.31ರ ವರೆಗೆ ಇಟಲಿಯ ರೋಮ್ ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅನಂತರ ನ.1, 2ರಂದು
ಯು.ಕೆ.ಯ ಗ್ಲಾಸ್ಗೊದಲ್ಲಿ ನಡೆಯಲಿರುವ ಹವಾಮಾನ ಶೃಂಗದಲ್ಲೂ ಭಾಗವಹಿಸಲಿದ್ದಾರೆ. ಈ ಕುರಿತಂತೆ ಗುರುವಾರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ರೋಮ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಕೊರೊನೋತ್ತರ ಜಗತ್ತಿನಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಸಾಧಿಸಬೇಕಿರುವ ಆರ್ಥಿಕ ಚೇತರಿಕೆ ಬಗ್ಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಚರ್ಚಿಸುತ್ತೇನೆ. ಗ್ಲಾಸೊYàದಲ್ಲಿ ಜಾಗತಿಕ ತಾಪಮಾನ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ನಡೆಯಲಿರುವ ಶೃಂಗಸಭೆಯಲ್ಲಿ ಅಂಥ ದುಷ್ಪರಿಣಾಮಗಳಿಂದ ಪಾರಾಗುವ ಬಗ್ಗೆ ಭಾರತ ಹೊಂದಿರುವ ನಿಲುವು ಹಾಗೂ ಅದಕ್ಕೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಸಿಗ ಬೇಕಾದ ಸಹಕಾರಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದೇ ಪ್ರವಾಸದ ವೇಳೆ, ಇಟಲಿಯ ಪ್ರಧಾನಿ ಮರಿಯೊ ಡ್ರಾ ಯವರ ಆಹ್ವಾನದ ಮೇರೆಗೆ ವ್ಯಾಟಿಕನ್ ಸಿಟಿಗೆ ಭೇಟಿ ನೀಡಲಿರು ವುದಾಗಿಯೂ ಪ್ರಧಾನಿ ಬರೆದುಕೊಂಡಿದ್ದಾರೆ.