Advertisement

ಪದ್ಮಾವತಿ ಚಿತ್ರ ರಿಲೀಸ್ ಮಾಡಿದ ಟಾಕೀಸ್ ಗೆ ಬೆಂಕಿ ಹಚ್ತೇವೆ; ಶಾಸಕ

03:17 PM Nov 07, 2017 | udayavani editorial |

ತೆಲಂಗಾಣ : ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಮುಂಬರುವ ತನ್ನ “ಪದ್ಮಾವತಿ’ ಚಿತ್ರದಲ್ಲಿ ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ ಅವರು “ಪದ್ಮಾವತಿ ಚಿತ್ರವನ್ನು ಯಾವೆಲ್ಲ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗುವುದೋ ಅವುಗಳನ್ನು ನಾವು ಸುಟ್ಟು ಹಾಕುತ್ತೇವೆ’ ಎಂಬ ಬೆದರಿಕೆ ಹಾಕಿದ್ದಾರೆ. ಪದ್ಮಾವತಿ ಚಿತ್ರ ಡಿಸೆಂಬರ್‌ 1ರಂದು ತೆರೆಕಾಣಲಿದೆ. 

Advertisement

‘ಇದು ರಾಜಪೂತರ ಘನತೆ – ಗೌರವದ ಪ್ರಶ್ನೆ. ಮುಂದೇನಾಗುವುದೋ ಕಾದು ನೋಡಿ’ ಎಂದು ಸಿಕಂದರಾಬಾದ್‌ನಲ್ಲಿನ ರಾಜಸ್ಥಾನ ರಾಜಪೂತ ಸಮಾಜದ ಸಮಾವೇಶದಲ್ಲಿ ಶಾಸಕ ರಾಜಾ ಗುಡುಗಿದರು. 

“ಪ್ರತಿಯೋರ್ವ ರಾಜಪೂತ ಇಂದು ಹೇಳುತ್ತಿದ್ದಾರೆ : ರಾಜಪೂತರ ಘನತೆ ಗೌರವಗಳಿಗೆ ಚ್ಯುತಿ ತರುವ ಚಿತ್ರವನ್ನು ಬಿಡುಗಡೆ ಮಾಡಲು ನಾವು ಬಿಡೆವು. ಅದನ್ನು ಮೊದಲು ನಮಗೇ ತೋರಿಸಬೇಕು. ಅದರಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ನಮಗೆ ಖಚಿತವಾದರೆ ನಾವು ಅದರ ಬಿಡುಗಡೆಗೆ ಅವಕಾಶ ಕೊಡುತ್ತೇವೆ” ಎಂದು ಶಾಸಕ ರಾಜಾ ಹೇಳಿದರು. 

‘ಕೇವಲ ಹಣಕ್ಕಾಗಿ ನಿರ್ದೇಶಕ ಭನ್ಸಾಲಿ ಅವರು ಹೆಣ್ಣನ್ನು ತಮ್ಮ ಚಿತ್ರದಲ್ಲಿ ಅಗೌರವಿಸಿದ್ದಾರಾದರೆ ನಾವೆಲ್ಲ ಜತೆಗೂಡಿ ಆತನನ್ನು ಬಹಿಷ್ಕರಿಸುವೆವು’ ಎಂದು ಗುಡುಗಿದ ರಾಜಾ, “ಹಿಂದೂ ಧರ್ಮ ಎಲ್ಲ ರಕ್ಷಕರು ಭನ್ಸಾಲಿಯ ಚಿತ್ರವನ್ನು ಬಹಿಷ್ಕರಿಸುವುದಲ್ಲದೆ ಆತನ ಆ ಸಿನೇಮಾ ಬಿಡುಗಡೆಯಾಗುವುದನ್ನು ನಿಲ್ಲಿಸುವಂತೆ ಮಾಡಬೇಕು’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next