Advertisement

ಚೀನ ನಿರ್ಬಂಧಿಸಲು ಸಿದ್ಧ: ವಿವೇಕ್‌ ರಾಮಸ್ವಾಮಿ

11:30 PM Mar 05, 2023 | Team Udayavani |

ವಾಷಿಂಗ್ಟನ್‌: “ಚೀನದೊಂದಿಗೆ ಸವಾಲುಗಳನ್ನು ಎದುರಿಸುತ್ತಿರುವ ಅಮೆರಿಕ, ಸದ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ, ಚೀನಾದ ಜತೆಗಿನ ವ್ಯವಹಾರಗಳಿಗೆ ನಿರ್ಬಂಧ ಹೇರಬೇಕು. ನಾನು ಅಮೆರಿಕ ಅಧ್ಯಕ್ಷನಾದರೆ, ಮಾಡುವ ಮೊದಲ ಕೆಲಸವೇ ಚೀನದ ವ್ಯವಹಾರಗಳ ನಿಷೇಧ’ ಎಂದು ಭಾರತೀಯ ಮೂಲದವರಾದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಆಕಾಂಕ್ಷಿ ವಿವೇಕ್‌ ರಾಮಸ್ವಾಮಿ ಹೇಳಿದ್ದಾರೆ.

Advertisement

ರಿಪಬ್ಲಿಕನ್‌ ಪಕ್ಷದ ವಾರ್ಷಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಜನಾಂಗೀಯ ನೀತಿ, ಲಿಂಗತಾರತಮ್ಯ ಹಾಗೂ ಹವಾಮಾನವಾದ ಎನ್ನುವ 3 ಜಾತ್ಯಾತೀತ ಧರ್ಮಗಳು ಇಂದು ಅಮೆರಿಕವನ್ನು ಉಸಿರುಗಟ್ಟಿಸುತ್ತಿವೆ. ಇದರ ಜತೆಗೆ ಚೀನಾ ದೊಡ್ಡ ಸಮಸ್ಯೆ.ಅದರಿಂದ ಸ್ವತಂತ್ರ್ಯಬೇಕಾದರೆ ಕಮ್ಯೂನಿಸ್ಟ್‌ ಸರ್ಕಾರದ ಪತನವಾಗುವವರೆಗೂ ವ್ಯವಹಾರ ನಿರ್ಬಂಧಿಸಬೇಕು.ಈ ಬಗ್ಗೆ ನನಗೆ ಹಿಂಜರಿಕೆ ಇಲ್ಲ ಎಂದಿದ್ದಾರೆ.

ಹ್ಯಾಲೆ ಕಿಡಿ : ಮತ್ತೊಂದೆಡೆ ಅಧ್ಯಕ್ಷೀಯ ಚುನಾವಣೆಯ ಮತ್ತೋರ್ವ ಆಕ್ಷಾಂಕ್ಷಿಯಾಗಿರುವ ಪ್ರಖ್ಯಾತ ರಾಜಕಾರಣಿ ನಿಕ್ಕಿ ಹ್ಯಾಲೆ ಕೂಡ ಅಮೆರಿಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಈ ಹಿಂದಿನ ನಾಯಕರು ಹಾಗೂ ಈಗಿನ ಬೈಡೆನ್‌ ಅಮೆರಿಕವನ್ನು ಸಾಲಗಾರರನ್ನಾಗಿಸುತ್ತಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next