Advertisement
ಆತ ಕ್ಯಾಥೋಡ್ ಕೊಳವೆಗಳಲ್ಲಿ ಕಿರಣಗಳನ್ನು ಹಾಯಿಸಿ ಒಂದಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದ. ಅಲ್ಲಿ ಉತ್ಸರ್ಜನೆಯಾಗುತ್ತಿದ್ದ ಕಿರಣಗಳು ಎದುರಿನ ಯಾವ ತಡೆಯನ್ನೂ ಹಾದು ಅಥವಾ ತೂರಿ ಹೋಗುತ್ತವೆ ಎಂಬುದನ್ನು ಪತ್ತೆ ಹಚ್ಚಿದ. ಆದರೆ, ಹೀಗೆ ಎದುರು ಇರುವ ಎಲ್ಲವನ್ನೂ ತೂರಿಕೊಂಡು ಹೋಗಬಲ್ಲ ಪ್ರಬಲ ಕಿರಣಗಳಿಂದ ಏನು ಉಪಯೋಗ ಎಂಬುದೇ ಅವನ ದೊಡ್ಡ ಚಿಂತೆಯಾಗಿತ್ತು! ಒಂದು ದಿನ ಗಂಡನ ಕೆಲಸ ಕಾರ್ಯಗಳನ್ನು ನೋಡಿಕೊಂಡು ಹೋಗೋಣ ಎಂದು ವಿಲ್ ಹೆಮ್‌ನ ಪತ್ನಿ ಅನ್ನಾ ಪ್ರಯೋಗಾಲಯಕ್ಕೆ ಬಂದಳು. ಆ ಸಮಯದಲ್ಲಿ ವಿಲ್ಹೆಮ್ ಎಕ್ಸ್ ಕಿರಣಗಳನ್ನು ಕಂಡು ಹಿಡಿದಾಗಿತ್ತು. ಆತ ಮ್ಯಾಜಿಕ್ ತೋರಿಸುತ್ತೇನೆಂದು ಹೇಳಿ ಪತ್ನಿಯನ್ನು ಕ್ಯಾಥೋಡ್ ಕೊಳವೆಯ ಮುಂದೆ ಕೂರಿಸಿ, ಆಕೆಯ ಕೈಯನ್ನು ಕೊಳವೆಯ ಬಾಯಿಗೆ ಅಡ್ಡಲಾಗಿ ಇಡಿಸಿದ. ಕಿರಣಗಳು ಹಾದು ಎದುರಿದ್ದ ಪರದೆಯ ಮೇಲೆ ಬಿದ್ದು, ಕೈಯ ಛಾಯೆ ಮೂಡುವಂತೆ ವ್ಯವಸ್ಥೆ ಮಾಡಿದ. ಎಕ್ಸ್ ಕಿರಣಗಳಿಂದ ಪರದೆಯಲ್ಲಿ ಮೂಡಿದ ಛಾಯಾಚಿತ್ರವನ್ನು ಕಂಡವಳೇ ಅನ್ನಾ ಬೆಚ್ಚಿಬಿದ್ದಳು. ಅವಳ ಕೈಯ ಅಷ್ಟೂ ಮೂಳೆಗಳು ಸ್ಪಷ್ಟವಾಗಿ ಕಾಣುವಂಥ ಫೋಟೋಗ್ರಾಫ್ ಅಲ್ಲಿತ್ತು.
Advertisement
ಸಾವಿನ ಚಿತ್ರವಲ್ಲ, ಬದುಕಿಸುವ ಚಿತ್ರ!
07:15 PM Mar 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.