ಕೈಗಾರಿಕೆಗಳಲ್ಲಿ ತಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ. ನೂರಾರು ನೀತಿ ನಿಯಮಗಳಿದ್ದರೂ ಸಾಮಾನ್ಯವಾಗಿ ಕಾರ್ಖಾನೆಗಳು ಇದನ್ನು ಪಾಲಿಸುವ ಗೋಜಿಗೆ ಹೋಗುವುದಿಲ್ಲ. ಬೀದಿಯಿಂದ ಕಸ ಎತ್ತುವುದಷ್ಟೇ ಸ್ವತ್ಛ ಭಾರತವಲ್ಲ, ಪರಿಣಾಮಕಾರಿ ತ್ಯಾಜ್ಯ ವಿಲೇವಾರಿಯೂ ಇದರ ಭಾಗ ಎಂಬುದು ನಮಗೆ ಯಾವಾಗ ಅರ್ಥವಾಗುತ್ತದೆ?
ಮೈಸೂರಿನ ಶಾದನಹಳ್ಳಿಯಲ್ಲಿ 14 ವರ್ಷದ ಬಾಲಕ ವಿಚಿತ್ರ ರೀತಿಯಲ್ಲಿ ಭೂಮಿಯಿಂದ ಎದ್ದ ತಾಪಕ್ಕೆ ಬಲಿಯಾಗಿರುವ ಘಟನೆ ಕೈಗಾರಿಕೋದ್ಯಮಗಳು ಎಷ್ಟು ಬೇಜವಾಬ್ದಾರಿಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ. ಈ ಸ್ಥಳದಲ್ಲಿ 110 ಡಿಗ್ರಿ ಸೆಲಿÏಯಸ್ ತಾಪಮಾನವಿರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಇದು ನೀರಿನ ಕುದಿಯುವ ಬಿಂದುವಿಗಿಂತಲೂ ಹೆಚ್ಚಿನ ಉಷ್ಣತೆ. ಮನುಷ್ಯರನ್ನು ಸುಡಲು ಧಾರಾಳ ಸಾಕು. ವಿಪಧಿರ್ಯಾಧಿಸವೆಂದರೆ ಈ ಪರಿಸರ ಕುದಿಧಿಯುವ ಕುಲುಮೆಯಾಗಿದೆ ಎನ್ನುವುದು ಸರಕಾರಿ ಇಲಾಖೆಗಳ ಗಮನಕ್ಕೆ ಬರಲು ದುರಂತವೊಂದು ಸಂಭವಿಸಬೇಕಾಯಿತು. ಬಾಲಕ ಬಲಿಧಿಯಾದ ಬೆನ್ನಿಗೆ ಮಾಲಿನ್ಯ, ಭೂಗರ್ಭ, ಗಣಿ, ಪರಿಸರ, ಪೊಲೀಸ್, ವಿಧಿವಿಜ್ಞಾನ ಎಂದು ಸಕಲ ಸರಕಾರಿ ಇಲಾಖೆಗಳು ಇತ್ತ ಧಾವಿಸಿ ತನಿಖೆ ನಡೆಸುತ್ತಿವೆ. ಬೆಂಗಳೂರಿನಲ್ಲಿ ಕೆರೆ ಹೊತ್ತಿ ಉರಿದ ವಿಸ್ಮಯವನ್ನು ನೋಡಿದ ಜನರು ಧರೆಯೇ ಹೊತ್ತಿ ಉರಿಯುತ್ತಿರುವ ವಿಚಿತ್ರಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಟಯರು, ರಾಸಾಯನಿಕಗಳು ಎಂದು ವಿವಿಧ ವಸ್ತುಗಳನ್ನು ಉತ್ಪಾಧಿದಿಧಿಸುವ 1000ಕ್ಕೂ ಹೆಚ್ಚು ಕಾರ್ಖಾನೆಗಳಿರುವ ನಗರದ ಹೊರ ವಲಯದ ಮೇಟಗಳ್ಳಿ ಔದ್ಯೋಧಿಗಿಕ ವಲಯದ ಸಮೀಪವೇ ಈ ಘಟನೆ ಸಂಭವಿಸಿದೆ. ಜನವಸತಿಯಿಂದ ಸುಮಾರು 3 ಕಿ. ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕಾರ್ಖಾನೆಗಳು ತಮ್ಮ ತ್ಯಾಜ್ಯ ತಂದು ಸುರಿಯುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗ ಒಣಗಿರುವ ವರುಣಾ ನಾಲೆ ಪಕ್ಕದಲ್ಲೇ ಇದೆ ಈ ತ್ಯಾಜ್ಯ ಗುಂಡಿ. ವರುಣಾ ನಾಲೆಯ ಇನ್ನೊಂದು ಬದಿಯಲ್ಲಿ ಆರ್‌ಬಿಐಯ ನೋಟು ಮುದ್ರಣಾಲಯವಿದೆ. ಘಟನೆ ಸಂಭವಿಸಿರುವ ಸ್ಥಳ ಓರ್ವ ರೈತನಿಗೆ ಸೇರಿದ ಖಾಸಗಿ ಜಮೀನು. ಇಲ್ಲಿ ಸುಮಾರು 20 ಗುಂಟೆ ವ್ಯಾಪ್ತಿಯಲ್ಲಿರುವ ಕುರುಚಲು ಗಿಡಗಳು ಮತ್ತು ಮರಗಳು ಸುಟ್ಟು ಹೋಗಿದ್ದರೂ ಇದು ಅಪಾಯಕಾರಿ ಸ್ಥಳ ಎಂಬುದು ಅರಿವಿಗೆ ಬರಲು ರವಿವಾರದ ದುರ್ಘಟನೆ ನಡೆಯಬೇಕಾಯಿತು ಅನ್ನುವುದು ವಿಷಾದನೀಯ.
ಘಟನೆ ಸಂಭವಿಸಿದ ಬೆನ್ನಿಗೆ ಜೆಡಿಎಸ್ ಮತ್ತು ಆಪ್, ಆರ್‌ಬಿಐ ಸುರಿದ ರಾಸಾಯನಿಕ ತ್ಯಾಜ್ಯದಿಂದ ನಡೆದ ದುರಂತ ಎಂದು ಆರೋಪಿಸಿವೆ. ಮುಕ್ತ ಜಾಗದಲ್ಲಿ ಸುರಿದ ಯಾವ ರಾಸಾಯನಿಕ ಪ್ರಕೃತಿಯಲ್ಲಿರುವ ಅನಿಲಗಳ ಜತೆಗೆ ವರ್ತಿಸಿ ಉಷ್ಣವನ್ನು ಬಿಡುಗಡೆ ಮಾಡಿದೆ ಎಂಬುದನ್ನು ಅಷ್ಟು ಕ್ಷಿಪ್ರವಾಗಿ ಪರೀಕ್ಷಿಸಿ ಅವರಿಗೆ ತಿಳಿಸಿದವರ್ಯಾರೋ! ಇದು ಘಟನೆಗೆ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ತಜ್ಞರು ಹೇಳುವ ಪ್ರಕಾರ ಸೋಡಿಯಂ ಮೆಟಾಲಿಕ್ ಎಂಬ ರಾಸಾಯನಿಕ ತೆರೆದ ಸ್ಥಳದಲ್ಲಿ ಇದ್ದರೆ ಆಮ್ಲಜನಕ ಮತ್ತು ತೇವಾಂಶದ ಸಂಪರ್ಕದಿಂದ ಬಿಸಿಯಾಗುತ್ತದೆ. ಇದು ಕೂಡ ಒಂದು ಊಹೆ ಮಾತ್ರ. ನಿಖರ ಕಾರಣ ಏನು ಎನ್ನುವುದು ವೈಜ್ಞಾನಿಕ ಪರೀಕ್ಷೆಯ ಬಳಿಕ ತಿಳಿಯಬಹುದು. ಅದಕ್ಕೂ ಮೊದಲೇ ಯಾರ ಮೇಲಾದರೂ ಗೂಬೆ ಕೂರಿಸುವುದು ಸರಿಯಲ್ಲ. ಇದು ಒಂದು ಸಂಸ್ಥೆಯ ತಪ್ಪು ಎನ್ನುವುದಕ್ಕಿಂತ ಒಟ್ಟು ವ್ಯವಸ್ಥೆಯ ವೈಫಲ್ಯ ಎಂದರೆ ಹೆಚ್ಚು ಸರಿಯಾಗುತ್ತದೆ.
ಕೈಗಾರೀಕರಣದಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ. ಇದಕ್ಕಾಗಿ ನೂರಾರು ನೀತಿ ನಿಯಮಗಳಿದ್ದರೂ ಸಾಮಾನ್ಯವಾಗಿ ಕಾರ್ಖಾನೆಗಳು ಇದನ್ನು ಪಾಲಿಸುವ ಗೋಜಿಗೆ ಹೋಗುವುದಿಲ್ಲ. ಲಂಚ ಮತ್ತು ವಶೀಲಿಬಾಜಿಯಿಂದ ಇಲ್ಲಿ ಎಲ್ಲವೂ ನಡೆಯುತ್ತದೆ. ಅಧಿಕಾರಿಗಳು ಕಾನೂನು ತಮ್ಮ ಕಣ್ಣೆದುರೇ ಉಲ್ಲಂಘನೆಯಾಗುತ್ತಿದ್ದರೂ ತಡೆಯುವ ಗೋಜಿಗೆ ಹೋಗುವುದಿಲ್ಲ. ಇಂತಹ ಏನಾದರೊಂದು ದುರಂತ ಸಂಭವಿಸಿದಾಗಲಷ್ಟೇ ಎಚ್ಚೆತ್ತ ನಾಟವಾಡುತ್ತಾರೆ. ಆಸ್ಪತ್ರೆ, ಕಾರ್ಖಾನೆಗಳು, ಹೊಟೇಲ್, ಮಳಿಗೆಗಳ ತ್ಯಾಜ್ಯಗಳು ಎಗ್ಗಿಲ್ಲದೆ ನದಿ, ಹಳ್ಳ ಸೇರಿ ಇನ್ನಿಲ್ಲದ ಅನಾಹುತಗಳನ್ನುಂಟು ಮಾಡುತ್ತಿವೆ. ಬರೀ ಬೀದಿಯಲ್ಲಿರುವ ಕಸ ಎತ್ತುವುದು ಮಾತ್ರ ಸ್ವತ್ಛ ಭಾರತವಲ್ಲ. ಪರಿಣಾಮಕಾರಿ ತ್ಯಾಜ್ಯ ವಿಲೇವಾರಿಯೂ ಇದರ ವ್ಯಾಪ್ತಿಗೆ ಬರುತ್ತದೆ ಎನ್ನುವುದು ನಮ್ಮನ್ನಾಳುವವರಿಗೆ ಯಾವಾಗ ಅರ್ಥವಾಗುತ್ತದೆ?