Advertisement

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

01:20 PM May 04, 2024 | Team Udayavani |

ಹಾಸನ: ‘ಅಶ್ಲೀಲ ವಿಡಿಯೋ’ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ವಿಶೇಷ ತನಿಖಾ ತಂಡ ಇಂದು ಹಾಸನದಲ್ಲಿರುವ ಜನತಾದಳ (ಜಾತ್ಯತೀತ) ನಾಯಕ ಪ್ರಜ್ವಲ್ ರೇವಣ್ಣ ಅವರ ಮನೆಗೆ ಆಗಮಿಸಿದೆ.

Advertisement

ಪ್ರಜ್ವಲ್ ರೇವಣ್ಣ ಮತ್ತು ಎಚ್‌ಡಿ ರೇವಣ್ಣ ವಿರುದ್ಧ ಎರಡನೇ ಲುಕ್‌ ಔಟ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಮನೆಯಲ್ಲಿ ತಲಾಶ್ ನಡೆಸಿದ್ದಾರೆ.

“ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರ ವಿರುದ್ಧವೂ ಲುಕ್‌ ಔಟ್ ನೋಟಿಸ್ ಜಾರಿ ಮಾಡಿದ್ದೇವೆ. ವಿದೇಶಕ್ಕೆ ತೆರಳುವ ಸಾಧ್ಯತೆ ಇರುವುದರಿಂದ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೆವು. ಆದರೆ ನಿನ್ನೆ ಎರಡನೇ ನೋಟಿಸ್ ನೀಡಲಾಗಿದೆ. ನೋಟಿಸ್‌ ಗೆ ಉತ್ತರಿಸಲು ಇಂದು ಸಂಜೆಯವರೆಗೂ ಸಮಯಾವಕಾಶವಿದೆ’ ಎಂದು ಗೃಹ ಸಚಿವ ಪರಮೇಶ್ವರ ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಎಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಲುಕ್‌ಔಟ್ ನೋಟಿಸ್ ಜಾರಿಯಾದ ಬೆನ್ನಲ್ಲೇ ತನಿಖಾ ತಂಡದ ಮುಂದೆ ಹಾಜರಾಗಲು ಸಮಯಾವಕಾಶ ಕೋರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next