Advertisement
ಕಾಡುಕೋಣ ಸಾವನ್ನಪ್ಪುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ಭರಿತ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.“ಮೊದಲು ಆ ಕಾಡುಕೋಣ ನಗರಕ್ಕೆ ಹೇಗೆ ಬಂತು ಎಂಬ ಪ್ರಶ್ನೆ ಮೂಡುತ್ತದೆ. ದಾರಿ ತಪ್ಪಿ ಬಂದಿದ್ದರೆ ಅದರ ಜೀವಕ್ಕೆ ಅಪಾಯವಾಗದಂತೆ ಹಿಡಿದು ಕಾಡಿಗೆ ಬಿಡುವುದಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಪರಿಸರವಾದಿ ದಿನೇಶ್ ಹೊಳ್ಳ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಓಡಾಡಿ ಸುಸ್ತಾಗಿದ್ದ ಕಾಡು ಕೋಣ ವನ್ನು ಪೂರ್ವಾಹ್ನ 11 ಗಂಟೆ ವೇಳೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆಹಿಡಿದು ಲಾರಿಯಲ್ಲಿ ಚಾರ್ಮಾಡಿಯ ಅರಣ್ಯಕ್ಕೆ ಕೊಂಡೊಯ್ಯಲಾಗಿತ್ತು. ಎರಡೂವರೆ ಗಂಟೆ ಬಳಿಕ ಬಿ.ಸಿ. ರೋಡ್‌ಗೆ ತಲುಪುವಾಗ ಕೋಣಕ್ಕೆ ಪ್ರಜ್ಞೆ ಬಂದಿತ್ತು. ಚಾರ್ಮಾಡಿ ತಲುಪಿದ ಬಳಿಕವೂ 2 ತಾಸು ಕಾಲ ಪ್ರಜ್ಞೆಯಿತ್ತು. ಬಳಿಕ ಅದು ಯಾವುದೇ ರೀತಿಯ ಚಲನೆ ತೋರದ ಕಾರಣ ಸಂಶಯದಿಂದ ಚಾರ್ಮಾಡಿ ಯಲ್ಲಿ ರುವ ಸರಕಾರಿ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಪರೀಕ್ಷಿಸಿದ್ದು, ಅವರು ಸಾವನ್ನು ದೃಢಪಡಿಸಿದರು. ಬಳಿಕ ನಿಡಿಗಲ್ ಸಮೀಪದ ನರ್ಸರಿಯಲ್ಲಿ ಅರಣ್ಯ ಇಲಾಖೆ ಮಾರ್ಗಸೂಚಿಯಂತೆ ಕಾಡುಕೋಣವನ್ನು ದಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ಕೋಣ ವಿಪರೀತ ಬಳಲಿತ್ತು. ಅರಣ್ಯಕ್ಕೆ ಬಿಡುವ ಮುನ್ನ 4 ಟಬ್ ನೀರು ಸುರಿದ ಬಳಿಕ ಚೇತರಿಸಿಕೊಂಡಂತೆ ಕಂಡಿತ್ತು. ಎರಡು ಬಾರಿ ಎದ್ದು ನಿಂತಿತ್ತಾದರು ಮೂರನೇ ಬಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಬಿ. ಸುಬ್ಬಯ್ಯ ನಾಯ್ಕ ತಿಳಿಸಿದ್ದಾರೆ.
Related Articles
Advertisement
ಹೈಡೋಸೇಜ್‌ನಿಂದ ಸಾವನ್ನಪ್ಪಿಲ್ಲಅರಿವಳಿಕೆ ಪ್ರಮಾಣ ಹೆಚ್ಚಳದಿಂದ ಮೃತ ಪಟ್ಟಿದೆ ಎಂಬುದು ವದಂತಿಯಷ್ಟೆ. ಮನುಷ್ಯರ ಸಂಪರ್ಕದಿಂದ ದೂರ ಇರುವ ಕಾಡುಪ್ರಾಣಿಗಳು ಒಮ್ಮಿಂದೊಮ್ಮೆಲೆ ಜನನಿಬಿಡ ಪ್ರದೇಶಕ್ಕೆ ಕಾಲಿಟ್ಟರೆ ಭಯಗೊಂಡು ಹೃದಯ ಬಡಿತ ಹೆಚ್ಚಾಗುತ್ತದೆ. ಜಿಂಕೆಯಂಥ ಜೀವಿಗಳು ಮನುಷ್ಯ ಮುಟ್ಟಿದ ಕ್ಷಣ ದಲ್ಲೇ ಸಾವನ್ನಪ್ಪುತ್ತವೆ. ಕಾಡುಕೋಣ ಆರೋಗ್ಯ ವಾಗಿದ್ದರೂ ಬಳಲಿಕೆ ಮತ್ತು ಭಯ ದಿಂದ ಹೃದಯಾ ಘಾತ ವಾಗಿದೆ ಎಂದು ಮರಣೋ ತ್ತರ ಪರೀಕ್ಷೆ ನಡೆಸಿದ ಚಾರ್ಮಾಡಿಯ ಸರಕಾರಿ ಪಶು ವೈದ್ಯಾಧಿಕಾರಿ ಮಂಜ ನಾಯ್ಕ ಮತ್ತು ಅರಿವಳಿಕೆ ನೀಡಿದ್ದ ಪಿಲಿಕುಳದ ಜೈವಿಕ ಉದ್ಯಾನವನದ ಪಶು ಅಧಿಕಾರಿ ಡಾ| ವಿಷ್ಣು ತಿಳಿಸಿದ್ದಾರೆ. ಅರಿವಳಿಕೆ ಔಷಧ ಅಧಿಕವಾಗಿ ಸಾವ ನ್ನಪ್ಪಿದೆ ಎಂಬುದು ಆರೋಪ ವಷ್ಟೆ. ಶಿಷ್ಟಾಚಾರ ದಂತೆ ಮರಣೋ ತ್ತರ ಪರೀಕ್ಷೆ, ಅಂತ್ಯ ಸಂಸ್ಕಾರ ಎಲ್ಲವೂ ನಡೆದಿವೆ. ಎಲ್ಲ ಪ್ರಕ್ರಿಯೆ ಗಳ ವೀಡಿಯೋ, ಫೋಟೋ ಗಳು ಇಲಾಖೆ ಯಲ್ಲಿವೆ. ಮರಣೋತ್ತರ ಪರೀಕ್ಷೆಯ ವರದಿ ಶುಕ್ರವಾರ ಕೈಸೇರಲಿದೆ.
– ಕರಿಕಾಳನ್,
ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ