Advertisement
ತೋಟತ್ತಾಡಿಯಲ್ಲಿ ಸೋಮವಾರ ರಾತ್ರಿಯೂ ಇಲಾಖೆಯ ಸಿಬಂದಿಯ ಕಾರ್ಯಾಚರಣೆಯ ವೇಳೆ ಮತ್ತೆ ಒಂಟಿ ಸಲಗ ಕಂಡುಬಂದಿದೆ. ಆದ್ದರಿಂದ ನೆರಿಯ ಅಣಿಯೂರಿನಲ್ಲಿ ಸೋಮವಾರ ಬೆಳಗ್ಗೆ ಕಂಡು ಬಂದ ಒಂಟಿ ಸಲಗವೂ ಇಲ್ಲಿರುವ ಸಲಗವೂ ಬೇರೆ ಬೇರೆ ಎಂಬ ಅನುಮಾನ ವ್ಯಕ್ತವಾಗಿದೆ. ರವಿವಾರ ನೆರಿಯದ ರಾಮಕುಮಾರ್ ಅವರ ತೋಟಕ್ಕೆ ದಾಳಿ ನಡೆಸಿರುವ ಒಂಟಿ ಸಲಗ ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ. ಕಡಿರುದ್ಯಾವರ ಗ್ರಾಮದ ಭಂಡಾಜೆ ಬಳಿಯೂ ಆನೆಗಳು ದಾಳಿ ನಡೆದಿರುವುದರಿಂದ ಈ ಗ್ರಾಮಗಳಲ್ಲಿ ಬೇರೆ ಬೇರೆ ಹಿಂಡು ಇರುವುದು ಸ್ಪಷ್ಟವಾಗಿದೆ.
ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಆನೆಗಳನ್ನು ಕಾಡಿಗಟ್ಟುವ ತಂಡ ಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಸಲಹೆ ಸೂಚನೆಗಳನ್ನು ನೀಡಿದರು. ಬೆಳ್ತಂಗಡಿ ವಲಯ ಅರಣ್ಯಧಿಕಾರಿ ತ್ಯಾಗರಾಜ್, ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ, ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ, ವಾಸಣ್ಣ ಹಾಗೂ ಸ್ಥಳೀಯರು ಇದ್ದರು.
Related Articles
ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ನಾಗರಹೊಳೆಯಿಂದ ನುರಿತ ಕಾವಾಡಿಗರನ್ನು ತರಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕುರಿತು ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿದ್ದು ಮುಂದಿನ ಒಂದೆರಡು ದಿನದಲ್ಲಿ ತಂಡ ಆಗಮಿಸುವ ನಿರೀಕ್ಷೆ ಇದೆ ಎಂದು ಡಿಎಫ್‌ಒ ಡಾ| ದಿನೇಶ್ ಕುಮಾರ್ ತಿಳಿಸಿದ್ದಾರೆ.
Advertisement
ಈ ಹಿಂದೆ ಮುಂಡಾಜೆಯ ಧುಂಬೆಟ್ಟು ಪ್ರದೇಶಕ್ಕೂ ನಾಗರಹೊಳೆಯಿಂದ ಕಾವಾಡಿಗರು ಆಗಮಿಸಿದ್ದರು. ಆದರೆ ಆಗ ಆನೆಗಳ ಸುಳಿವು ಪತ್ತೆಯಾಗಿರಲಿಲ್ಲ. ತಂಡ ವಾಪಸಾದ ಒಂದೆರಡು ದಿನಗಳಲ್ಲೇ ಮತ್ತೆ ಉಪಟಳ ಆರಂಭಿಸಿದ್ದವು.
ಇದನ್ನೂ ಓದಿ: ಗುಂಡ್ಲುಪೇಟೆ: ಲಾರಿ ಢಿಕ್ಕಿ ಹೊಡೆದು ಹೆಣ್ಣಾನೆ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ