Advertisement

ಬ್ರಿಟಿಷ್‌ ಪೊಲೀಸರಿಂದ ವಿಕಿಲೀಕ್ಸ್‌ ಸ್ಥಾಪಕ ಜೂಲಿಯಾನ್‌ ಅಸಾಂಜ್‌ ಅರೆಸ್ಟ್‌

09:58 AM Apr 12, 2019 | Team Udayavani |

ಲಂಡನ್‌ : ವಿಕಿಲೀಕ್ಸ್‌ ಸ್ಥಾಪಕ ಜೂಲಿಯಾನ್‌ ಅಸಾಂಜ್‌ ಅವರನ್ನು ಬ್ರಿಟಿಷ್‌ ಪೊಲೀಸರು ಇಂದು ಗುರುವಾರ ಈಕ್ವೇಡರ್‌ ದೂತಾವಾಸದಲ್ಲಿ ಬಂಧಿಸಿದ್ದಾರೆ. ಅಸಾಂಜ್‌ ಅವರು 2012ರಿಂದ ಈಕ್ವೇಡರ್‌ ದೂತಾವಾಸದಲ್ಲಿ ಆಸರೆ ಪಡೆದಿದ್ದರು.

Advertisement

“ಜೂಲಿಯಾನ್‌ ಅಸಾಂಜ್‌, 47, ಇವರನ್ನು ಇಂದು ಗುರುವಾರ ಎಪ್ರಿಲ್‌ 11ರಂದು ಮೆಟ್ರೋಪಾಲಿಟನ್‌ ಪೊಲೀಸ್‌ ಸರ್ವಿಸ್‌ (ಎಂಪಿಎಸ್‌) ಅಧಿಕಾರಿಗಳು ಈಕ್ವೇಡರ್‌ ದೂತಾವಾಸದಲ್ಲಿ ಬಂಧಿಸಿದ್ದಾರೆ’ ಎಂದು ಅಧಿಕೃತ ಪ್ರಕಟನೆ ಹೊರಡಿಸಲಾಗಿದೆ.

ಈಕ್ವೇಡರ್‌ ಸರಕಾರ ಜೂಲಿಯನ್‌ ಅಸಾಂಜ್‌ ಗೆ ನೀಡಿದ್ದ ಆಸರೆಯನ್ನು ಹಿಂಪಡೆದಿರುವುದನ್ನು ಅನುಸರಿಸಿ, ಈಕ್ವೇಡರ್‌ ರಾಯಭಾರಿ ತಮ್ಮನ್ನು ದೂತಾವಾಸಕ್ಕೆ ಆಹ್ವಾನಿಸಿದ್ದು, ನಾವು ಆತನನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next