Advertisement
ವೈದ್ಯರು ಸಾಕಷ್ಟು ಯತ್ನಿಸಿದರಾದರೂ ಅವರು ಚಿಕಿತ್ಸೆಗೆ ಸ್ಪಂದಿಸಲೇ ಇಲ್ಲ. ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿಯೇಕೊನೆಯುಸಿರೆಳೆದರು. ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಆಂಜನೇಯ, ಶಾಸಕರಾದ ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಸೇರಿದಂತೆ ಹಲವರು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬಳಿಕ, ಪಾರ್ಥಿವ
ಶರೀರವನ್ನು ವರ್ತೂರಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಕೆಲ ಹೊತ್ತು ಇಡಲಾಗಿತ್ತು. ನಂತರ, ಸ್ವಗೃಹದ ಸಮೀಪವೇ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ಪತಿ ವರ್ತೂರು ಪ್ರಕಾಶ್, ಪುತ್ರರಾದ ತೇಜಸ್, ಭರತ್ ಮತ್ತು ನಿತಿನ್‌ರನ್ನು ಅಗಲಿದ್ದಾರೆ.