Advertisement

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

01:44 AM Jul 06, 2022 | Team Udayavani |

ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿ ಯಲ್ಲಿ ಮತ್ತೆ ಮಳೆ ತೀವ್ರಗೊಂಡಿದ್ದು, ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆ ಯಾದ್ಯಂತ ಮಂಗಳವಾರ ದಿನವಿಡೀ ಭಾರೀ ಮಳೆ ಸುರಿದು ಕೆಲವು ಕಡೆಗ ಳಲ್ಲಿ ಹಾನಿ ಸಂಭವಿಸಿದೆ.

Advertisement

ಮೋರ್ಗನ್ಸ್‌ಗೆಟ್‌ ಸಮೀಪದ ಓಣಿಕೆರೆಯಲ್ಲಿ ತಡೆಗೋಡೆಯೊಂದು ಕುಸಿದು ಮನೆಯ ಮೇಲೆ ಬಿದ್ದು, ಗೋಡೆಯ ಸಮೀಪ ಮಲಗಿದ್ದ ಐವರಿಗೆ ಗಾಯಗಳಾಗಿವೆ. ಸಣ್ಣಪುಟ್ಟ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೇಡಿಹಿಲ್‌-ಲಾಲ್‌ಬಾಗ್‌ ರಸ್ತೆಯಕರಾವಳಿ ಪ್ರದರ್ಶನ ಮೈದಾನ ಮುಂಭಾಗ ಬೃಹತ್‌ ಮರವೊಂದು ಬಿದ್ದ ಪರಿಣಾಮ ವಿದ್ಯುತ್‌ ಕಂಬ ಬಿದ್ದು ಸ್ಕೂಟರ್‌ ಜಖಂಗೊಂಡಿದೆ. ಮಾಲೆ ಮಾರ್‌, ಜಪ್ಪಿನಮೊಗರು, ಕೊಡಿಯಾ
ಲಬೈಲು, ಕುಲಶೇಖರ ಸಹಿತ ವಿವಿಧೆಡೆ ಮಳೆ ನೀರು ರಸ್ತೆಯಲ್ಲೇ ಹರಿದು ಸಂಚಾರ ಅಸ್ತವ್ಯಸ್ತವಾಯಿತು.

ಕುಲಶೇಖರ ಸಮೀಪದ ತಡೆಗೋಡೆ ತೋಡಿಗೆ ಬಿದ್ದ ಪರಿಣಾಮ ತೋಡಿನ ನೀರು ಎರಡು ಮನೆಗಳ ಒಳಗಡೆಯಿಂದಲೇ ಹರಿಯಿತು. ರೈಲ್ವೇ ಅಂಡರ್‌ಪಾಸ್‌ ಸಮೀಪದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತು.

ಕೂಳೂರು: ಸಂಚಾರ ದುಸ್ತರ
ಕೂಳೂರು ಮೇಲ್ಸೇತುವೆ ಕೆಟ್ಟು ಹೋಗಿ ಕಿ.ಮೀ. ಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಮೀನಕಳಿಯ ಪ್ರದೇಶದ ಬೀಚ್‌ ಬದಿಯಲ್ಲಿ ಕಡಲ್ಕೊರೆತ ಆಗದಂತೆ ಮರಳು ಚೀಲ ಇಡಲಾಗಿದೆ. ತಡಂಬೈಲ್‌ ಬಳಿ ಬೃಹತ್‌ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಕೆಂಜಾರಿನಿಂದ ಅದ್ಯಪಾಡಿ ಪದವು ರಸ್ತೆಯಲ್ಲಿ ಗುಡ್ಡ ಕುಸಿದಿದ್ದು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಅದ್ಯ ಪಾಡಿ ಬಳಿ ಸೋಮವಾರವೇ ಗುಡ್ಡ ಕುಸಿದಿತ್ತು. ಇದೀಗ ಇಲ್ಲಿನ ಶಾಲೆಯ ಬಳಿ ಮತ್ತೆ ಕುಸಿದಿದೆ. ಏರ್‌ಪೋರ್ಟ್‌ ಕಡೆಯಿಂದ ನೀರು ಬಂದು ಇಲ್ಲಿನ ಕಾಂಕ್ರಿಟ್‌ ರಸ್ತೆ ಕೊಚ್ಚಿ ಹೋಗಿ ಅದ್ಯಪಾಡಿ-ಪದವು ನಡುವಣ ಸಂಪರ್ಕ ಕಡಿತಗೊಂಡಿದೆ.

ಪುತ್ತೂರು ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಚೆಲ್ಯಡ್ಕದಲ್ಲಿ ಸೇತುವೆ ಮುಳುಗಡೆಯಾಗಿದೆ. ಇರ್ದೆ ಯಲ್ಲಿ ಮಸೀದಿ ಆವರಣಕ್ಕೆ ನೀರು ನುಗ್ಗಿದೆ. ಬೆಳ್ತಂಗಡಿ ತಾಲೂಕಿ ನಲ್ಲಿ ನಿರಂತರ ಮಳೆಗೆ ನೇತ್ರಾ ವತಿ, ಮೃತ್ಯುಂಜಯ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಗುರು ವಾಯನ ಕೆರೆ-ಉಜಿರೆ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ಸಂಚಾರ ಅಸ್ತವ್ಯಸ್ತ ಗೊಂ ಡಿದೆ. ಸುಬ್ರಹ್ಮಣ್ಯದ ಕುಮಾರ ಧಾರೆ ಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಸ್ನಾನ
ಘಟ್ಟ ಮುಳುಗಡೆ ಯಾಗಿದೆ. ಪಂಜ- ಕಡಬ ಸಂಪರ್ಕದ ಪುಳಿಕುಕ್ಕು ಬಳಿ ಕೃತಕ ನೆರೆಯಿಂದ ರಾಜ್ಯ ಹೆದ್ದಾರಿ ಮುಳುಗುವ ಆತಂಕದಲ್ಲಿದೆ.

Advertisement

4 ಮನೆಗಳಿಗೆ ಪೂರ್ಣ
ಹಾನಿ; 15 ಭಾಗಶಃ ಹಾನಿ
ದ.ಕ. ಜಿಲ್ಲೆಯ ಮಂಗಳೂರಿನಲ್ಲಿ 1ಮನೆ ಪೂರ್ಣ ಹಾನಿ, 4 ಮನೆ ಭಾಗಶಃಹಾನಿಗೊಂಡಿದೆ. ಬಂಟ್ವಾಳ ದಲ್ಲಿ 1 ಮನೆ
ಪೂರ್ಣ ಹಾನಿ 2 ಭಾಗಶಃ, ಪುತ್ತೂರಿನಲ್ಲಿ 1 ಮನೆ ಪೂರ್ಣ ಹಾನಿ, ಸುಳ್ಯದಲ್ಲಿ 6 ಭಾಗಶಃ ಹಾನಿ, ಕಡಬದಲ್ಲಿ 2 ಭಾಗಶಃ ಹಾನಿ, ಉಳ್ಳಾಲದಲ್ಲಿ 1 ಭಾಗಶಃ, ಮೂಲ್ಕಿಯಲ್ಲಿ 1 ಮನೆಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next