Advertisement

ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ಗೆ ಗಾಯ

06:00 AM Apr 19, 2018 | Team Udayavani |

ಮುಂಬಯಿ: ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್‌ ತಂಡದ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅವರ ಮುಖಕ್ಕೆ ಗಾಯವಾಗಿದೆ. ತತ್‌ಕ್ಷಣ ಅವರನ್ನು ಮೈದಾನದಿಂದ ಹೊರಗಡೆ ಕೊಂಡೊಯ್ಯಲಾಯಿತು. 

Advertisement

ಆರ್‌ಸಿಬಿ ಇನ್ನಿಂಗ್ಸ್‌ನ 13ನೇ ಓವರ್‌ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. ಹಾರ್ದಿಕ್‌ ಪಾಂಡ್ಯ ಎಸೆದ ಚೆಂಡು ಒಂದು ಬೌನ್ಸ್‌ ಆಗಿ ಕಿಶನ್‌ ಅರ ಬಲ ಕಣ್ಣಿನ ಹತ್ತಿರ ಬಡಿಯಿತು. ನೋವಿನಿಂದ ಒದ್ದಾಡುತ್ತಿದ್ದ 19ರ ಹರೆಯದ ಕಿಶನ್‌ ಅವರನ್ನು ವೈದ್ಯಕೀಯ ಸಿಬಂದಿ ಮೈದಾನಕ್ಕೆ ಬಂದು ಉಪಚರಿಸಿದರು. ಆಬಳಿಕ ಹೊರಗಡೆ ಕೊಂಡೊಯ್ಯಲಾಯಿತು.  

ಕಿಶನ್‌ ಅವರ ಗಾಯ ಅಷ್ಟೊಂದು ಗಂಭೀರವಲ್ಲವೆಂದು ತಿಳಿದು ಬಂದಿದೆ. ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಕಿಶನ್‌ ಅವರನ್ನು ಮುಂಬೈ 6.2 ಕೋಟಿ ರೂ. ನೀಡಿ ಖರೀದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next