ಬ್ರಿಜ್‌ಟೌನ್ (ಬಾರ್ಬ ಡಾಸ್): ವೆಸ್ಟ್ ಇಂಡೀಸ್ ಎದುರಿನ ನಿರ್ಣಾಯಕ ಪಂದ್ಯದಲ್ಲಿ ಮುನ್ನೂರು ಪ್ಲಸ್ ಮೊತ್ತವನ್ನು ಭರ್ಜ ರಿಯಾಗಿ ಚೇಸ್ ಮಾಡಿದ ಪ್ರವಾಸಿ ನ್ಯೂಜಿಲ್ಯಾಂಡ್ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿತು.
ಇದಕ್ಕೂ ಮುನ್ನ ಟಿ20 ಸರಣಿಯನ್ನೂ ಇಷ್ಟೇ ಅಂತರದಿಂದ ಗೆದ್ದಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಕೈಲ್ ಮೇಯರ್ ಅವರ ಅಮೋಘ ಶತಕ (105), ನಾಯಕ ನಿಕೋಲಸ್ ಪೂರಣ್ ಅವರ 91 ರನ್ ಸಾಹಸದಿಂದ 8 ವಿಕೆಟಿಗೆ 301 ರನ್ ರಾಶಿ ಹಾಕಿತು. ಆದರೆ ಬ್ಯಾಟರ್‌ಗಳ ಸಾಂ ಕ ಪರಾಕ್ರಮದಿಂದ ನ್ಯೂಜಿಲ್ಯಾಂಡ್ 47.1 ಓವರ್‌ಗಳಲ್ಲಿ 5 ವಿಕೆಟಿಗೆ 307 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಚೇಸಿಂಗ್ ವೇಳೆ ಮಾರ್ಟಿನ್ ಗಪ್ಟಿಲ್ 57, ಡೇವನ್ ಕಾನ್ವೆ 56, ಟಾಮ್ ಲ್ಯಾಥಂ 69, ಡ್ಯಾರಿಲ್ ಮಿಚೆಲ್ 63, ಜೇಮ್ಸ್ ನೀಶಮ್ ಅಜೇಯ 34 ರನ್ ಬಾರಿಸಿದರು.
ಕೈಲ್ ಮೇಯರ್ 110 ಎಸೆತಗಳಿಂದ 105 ರನ್ (12 ಬೌಂಡರಿ, 3 ಸಿಕ್ಸರ್), ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ನಿಕೋಲಸ್ ಪೂರಣ್ 55 ಎಸೆತಗಳಿಂದ 91 ರನ್ (4 ಬೌಂಡರಿ, 9 ಸಿಕ್ಸರ್) ಮಾಡಿದರು. ಶೈ ಹೋಪ್ ಅವರಿಂದ 51 ರನ್ ಸಂದಾಯವಾಯಿತು. ಟ್ರೆಂಟ್ ಬೌಲ್ಟ್ 3, ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಉರುಳಿಸಿದರು.
ಟಾಮ್ ಲ್ಯಾಥಂ ಅವರಿಗೆ ಪಂದ್ಯ ಶ್ರೇಷ್ಠ, ಮಿಚೆಲ್ ಸ್ಯಾಂಟ್ನರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಒಲಿಯಿತು.