Advertisement

ಟಿ20 ವಿಶ್ವಕಪ್ ಗೆ ಯುಜಿ ಚಾಹಲ್ ಆಯ್ಕೆ ಯಾಕಿಲ್ಲ: ಕಾರಣ ಹೇಳಿದ ಆಯ್ಕೆ ಸಮಿತಿ ಮುಖ್ಯಸ್ಥ

03:16 PM Sep 09, 2021 | Team Udayavani |

ಮುಂಬೈ: ಅಕ್ಟೋಬರ್ ನಲ್ಲಿ ಯುಎಇ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಭಾರತ ತಂಡ ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಗದರ್ಶಕರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಬಿಸಿಸಿಐ ತಂಡವನ್ನು ಪ್ರಕಟ ಮಾಡಿದೆ.

Advertisement

ತಂಡದಲ್ಲಿನ ಕೆಲವು ಹೆಸರುಗಳು ಅಚ್ಚರಿಗಳಿಗೆ ಕಾರಣವಾಗಿದೆ. ಅದರಲ್ಲಿ ಪ್ರಮುಖವಾಗಿದ್ದು ಕೆಲವು ವರ್ಷಗಳಿಂದ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯುಜುವೇಂದ್ರ ಚಾಹಲ್ ಅವರ ಅವಗಣನೆ. ತಂಡದಲ್ಲಿ ಯುವ ಸ್ಪಿನ್ನರ್ ಗಳಾದ ರಾಹುಲ್ ಚಹರ್, ವರುಣ್ ಚಕ್ರವರ್ತಿಗೆ ಅವಕಾಶ ನೀಡಲಾಗಿದ್ದು, ಯುಜಿ ಚಾಹಲ್ ರನ್ನು ಕೈಬಿಡಲಾಗಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಮೆಂಟರ್ ಆಗಿ ಧೋನಿ ಆಯ್ಕೆಯಾಗಿದ್ದು ಹೇಗೆ? ಏನಿದು ಬಿಸಿಸಿಐ ತಂತ್ರ

ಚಾಹಲ್ ರನ್ನು ಕೈಬಿಟ್ಟ ವಿಚಾರ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಇದಕ್ಕೆ ಕಾರಣವನ್ನು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಹೇಳಿದ್ದಾರೆ. ನಾವು ಯುಜುವೇಂದ್ರ ಚಹಲ್ ಬಗ್ಗೆ ಚರ್ಚಿಸಿದ್ದೇವೆ. ನಮಗೆ ವೇಗವಾಗಿ ಬಾಲ್ ಹಾಕುವ ಸ್ಪಿನ್ನರ್ ಬೇಕಾಗಿತ್ತು. ಇತ್ತೀಚೆಗೆ ರಾಹುಲ್ ಚಾಹರ್ ಬೌಲಿಂಗ್, ಅವರು ಬೌಲ್ ಮಾಡುವ ವೇಗವನ್ನು ನೋಡಿದಂತೆ, ನಮಗೆ ಅಂತಹ ಆಟಗಾರ ಬೇಕು ಎಂದು ಆಯ್ಕೆಗಾರರು ಭಾವಿಸಿದ್ದರು. ಚಹಲ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು, ಆದರೆ ನಾವು ರಾಹುಲ್ ಚಹರ್ ರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್‌ ಚಹರ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.

Advertisement

ಹೆಚ್ಚುವರಿ ಆಟಗಾರರು: ಶಾರ್ದೂಲ್‌ ಠಾಕೂರ್‌, ಶ್ರೇಯಸ್‌ ಐಯ್ಯರ್‌, ದೀಪಕ್‌ ಚಹರ್‌

Advertisement

Udayavani is now on Telegram. Click here to join our channel and stay updated with the latest news.

Next