Advertisement
ಇಷ್ಟೆಲ್ಲಾ ಪೀಠಿಕೆಗಳಿಗೆ ಕಾರಣ ಅನ್ ಲೈನ್ ಮೂಲಕ ಸಾಗುತ್ತಿರುವ ಆಧುನಿಕ ಜೀವನ ಶೈಲಿ. ಇಲ್ಲಿ ಆರ್ಡರ್ ಮಾಡಿದ ಆಹಾರ, ತರಕಾರಿಗಳು, ಅಥವಾ ಇತರೆ ಯಾವುದೇ ವಸ್ತುಗಳು ನಿಮ್ಮ ಕೈಗೆ ತಲುಪುದು ತಡವಾದರೆ ತೊಂದರೆಯಿಲ್ಲ. ಆದರೆ ಅನ್ ಲೈನ್ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಇತ್ತೀಚಿಗೆ ಅಮೆರಿಕಾ ಮಯಾಮಿ ಮೂಲದ ‘ಕಸಾಯ’ ಸಂಸ್ಥೆಯಲ್ಲಿ ಸೈಬರ್ ಸೋರಿಕೆ ಉಂಟಾಗಿ ಜಗತ್ತಿನಾದ್ಯಂತ ಇರುವ 1500 ಕಂಪೆನಿಗಳ ಮೇಲೆ ಪರಿಣಾಮ ಬೀರಿತ್ತು ಹಾಗೂ ಬೀರುತ್ತಲೇ ಇದೆ. ಇದರ ಜೊತೆಗೆ ಹಲವಾರು ವ್ಯಕ್ತಿಗಳು, ಸಂಸ್ಥೆಗಳು ಕೂಡ ಸೈಬರ್ ಕ್ರೈಂ ಬಲೆಗೆ ಸಿಲುಕುತ್ತಿದ್ದಾರೆ.
Related Articles
Advertisement
ಹೀಗಾಗಿ ಸಾಮಾಜಿಕ ಜಾಲತಾಣಗಳ ಡೇಟಾಗಳು, ಡೇಟಿಂಗ್ ಆ್ಯಪ್ ನಲ್ಲಿ ಶೇಖರಣೆಯಾಗುವುದರಿಂದ ಡಾಕ್ಸಿಂಗ್ ಅಪರಾಧಗಳು ಹೆಚ್ಚಾಗುತ್ತವೆ. ಇಂದು ಎಲ್ಲಾ ಆ್ಯಪ್ ಗಳು ಲೊಕೇಶನ್ ಆಯ್ಕೆಯನ್ನು ಕೇಳುವುದರಿಂದ ಒಬ್ಬ ವ್ಯಕ್ತಿಯ ವಿಳಾಸವನ್ನು ಹುಡುಕುವುದು ಕೂಡ ಸುಲಭವಾದ ಕಾರ್ಯ ಎಂಬುದನ್ನು ನೆನಪಿಡಬೇಕಾಗುತ್ತದೆ. ಇಲ್ಲಿ ಲೊಕೇಶನ್, ಕೆಲಸ ಮಾಡುವ ಸ್ಥಳ, ಹೆಸರು, ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಸಿಗುವುದರಿಂದ ಸೈಬರ್ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ. ಮತ್ತೊಂದು ಗಮನಿಸಬೇಕಾದ ಅಂಶ ಎಂದರೇ, ಇಂದು ಸ್ಕ್ರೀನ್ ಶಾಟ್ ಗಳು ಅತೀ ಹೆಚ್ಚಾಗಿ ಶೇರ್ ಆಗುತ್ತವೆ. ಡೇಟಿಂಗ್ ಆ್ಯಪ್ ಗಳ ಮುಖಾಂತರ ಆಗುವ ಚಾಟ್ ಗಳು ಸ್ಕ್ರೀನ್ ಶಾಟ್ ಮೂಲಕ ಹೊರಬಂದು ಡಾಕ್ಸಿಂಗ್ ಗೆ ಕಾರಣವಾಗುತ್ತದೆ. ಮಾತ್ರವಲ್ಲದೆ ಸೈಬರ್ ಅಪರಾಧಿಗಳು ಈ ಸ್ಕ್ರೀನ್ ಶಾಟ್ ಗಳನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆಂದೇ ಬಳಸುತ್ತಿರುವುದು ಕೂಡ ವರದಿಯಾಗುತ್ತಿದೆ.
ಇದೆಲ್ಲಾವನ್ನು ಮನಗಂಡು ಇಂದು ಹಲವಾರು ಡೇಟಿಂಗ್ ಆ್ಯಪ್ ಗಳು ಪೇಯ್ಡ್ ವರ್ಷನ್ ಗಳನ್ನು ಬಳಕೆಗೆ ತಂದಿದೆ. ಅಂದರೇ ಹಣ ಪಾವತಿಸಿ ಡೇಟ್ ಮಾಡುವುದು. ಇದು ಹೆಚ್ಚಿನ ಫೀಚರ್ ಗಳನ್ನು ಒಳಗೊಂಡಿರುತ್ತದೆ. ಮಾತ್ರವಲ್ಲದೆ ಬಳಕೆದಾರರ ಭದ್ರತೆಯನ್ನು ಹೆಚ್ಚಿಸುತ್ತದೆ. ಉದಾ: ಟಿಂಡರ್ ಗೆ ನೀವು ಹಣ ಪಾವತಿ ಮಾಡಿ ಡೇಟ್ ನಲ್ಲಿ ತೊಡಗಿಕೊಂಡರೆ, ಲೊಕೇಶನ್ ಅನ್ನು ಮ್ಯಾನುವಲ್ ಆಗಿ ಆನ್ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಡೇಟಿಂಗ್ ಆ್ಯಪ್ ಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ಕೆಳಗಿನ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ.
*ಡೇಟಿಂಗ್ ಆ್ಯಪ್ ಗಳಲ್ಲಿ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವುದು ಬೇಡ. (ಉದಾ. ಕೆಲಸ ಮಾಡುವ ಸ್ಥಳ, ಸಂಸ್ಥೆ, ಸ್ನೇಹಿತರ ಜೊತೆಗಿನ ಫೋಟೋ, ರಾಜಕೀಯ ನಿಲುವುಗಳು ಇತ್ಯಾದಿ)
*ಇತರ ಸಾಮಾಜಿಕ ಜಾಲತಾಣಗಳನ್ನು ನಿಮ್ಮ ಡೇಟಿಂಗ್ ಆ್ಯಪ್ ಪ್ರೊಫೈಲ್ ಗೆ ಲಿಂಕ್ ಮಾಡಬೇಡಿ.
*ಲೊಕೇಶನ್ ಗಳನ್ನು ಮ್ಯಾನುವಲ್ ಆಗಿ ಸೆಟ್ ಮಾಡಿ.
*ಎರಡು ಹಂತದ ದೃಢೀಕರಣ ಅಥವಾ ಟು ಫ್ಯಾಕ್ಟರ್ ಅಥೆಂಟಿಕೇಶನ್ ಬಳಸಿ.
*ಡೇಟಿಂಗ್ ಆ್ಯಪ್ ಗಳನ್ನು ದೀರ್ಘಕಾಲದವರೆಗೂ ಬಳಸದಿದ್ದರೆ, ಪ್ರೊಪೈಲ್ ಡಿಲೀಟ್ ಮಾಡಿ
*ಮಿಥುನ್ ಪಿ.ಜಿ