Advertisement

ಸ್ಪೀಕಿಂಗ್‌ ಸ್ತ್ರೀ : ಸಂತೋಷಕ್ಕೆ ಸಿಹಿ ಹಂಚುವುದೇಕೆ?

06:38 AM May 13, 2020 | mahesh |

ಪರೀಕ್ಷೆಯಲ್ಲಿ ಪಾಸ್‌ ಆದಾಗ, ಒಳ್ಳೆಯ ಕೆಲಸ ಸಿಕ್ಕಿದಾಗ, ಮಗು ಹುಟ್ಟಿದರೆ, ಶುಭ ಸನ್ನಿವೇಶಗಳು ಒದಗಿದಾಗ, ಸಂತೋಷದೊಡನೆ ಸಿಹಿ ಹಂಚುವ ಪದ್ಧತಿ ಸಾಮಾನ್ಯ. ಸಿಹಿ
ಎಂದ ಕೂಡಲೇ, ನಾಲಿಗೆಯಲ್ಲಿ ಮಧುರ ರಸ ಜಿನುಗುತ್ತದೆ. ಹಬ್ಬ ಹರಿದಿನಗಳಲ್ಲಂತೂ, ಸಿಹಿ ಇಲ್ಲದೆ ಮುಂದಿನ ಮಾತೇ ಇಲ್ಲ. ಸಂತೋಷಕ್ಕೂ- ಸಿಹಿಗೂ, ಈ ಬಲವಾದ ನಂಟು ಏಕೆ ?
ಯಾಕೆಂದರೆ, ಸೂಕ್ತ ಪ್ರಮಾಣದಲ್ಲಿ ಸಿಹಿ ಸೇವಿಸಿದರೆ, ಮನಸ್ಸಿನ ಪ್ರಸನ್ನತೆ ಹೆಚ್ಚುತ್ತದೆ. ಸಾತ್ವಿಕರು ಸಹಜವಾಗಿಯೇ ಮಧುರ ಪ್ರಿಯರು ಎನ್ನುವ ಮಾತಿದೆ. ಈ ಸಣ್ತೀಗುಣವು
ತೃಪ್ತಿ, ಲಾಘವ, ನೆಮ್ಮದಿಗಳನ್ನೂ ತರುತ್ತದೆ. ಆದ್ದರಿಂದಲೇ ಸಿಹಿ, ಸಂತೋಷಗಳು ಒಂದೇ ಗೂಡಿನ ಹಕ್ಕಿಗಳು. ದೇವರ ದರ್ಶನವು ನಮ್ಮೊಳಗೆ ಎಣೆಯಿಲ್ಲದ ಸಂತೋಷ
ಉಂಟುಮಾಡುತ್ತದೆ ಎಂಬುದು ಋಷಿಗಳ ಮಾತು. ಸಿಹಿಯು ನಮ್ಮಲ್ಲಿ ದೇವತಾ ಕೇಂದ್ರಗಳನ್ನು ತೆರೆಯಲೂ ಸಹಾಯ ಮಾಡುತ್ತದೆಂಬುದೂ ಅವರ ಅನುಭವ. ಭಗವಂತನ
ದರುಶನದಿಂದ ಉಂಟಾದ ಆನಂದದ ರಸಕ್ಕೆ, ಸಿಹಿಯ ಆಸ್ವಾದನೆಯು ಸಮೀಪವಾಗಿದೆ ಯೆಂದು ಅರಿತು ಸಕ್ಕರೆ, ಬೆಲ್ಲ, ಜೇನು ಮುಂತಾದ ಪದಾರ್ಥ ಗಳನ್ನು, ನಿತ್ಯ ಜೀವನದ ಆಹಾರ ದಲ್ಲಿ ಅಳವಡಿಸಿ ಕೊಟ್ಟಿದ್ದಾರೆ.

Advertisement

ಸಿಹಿ ಚಪ್ಪರಿಸುವುದರಿಂದ ಎಷ್ಟು ಆನಂದವಾಗುತ್ತದೆಯೋ, ಅದರ ಹತ್ತು ಪಟ್ಟು ಆನಂದ, ಭಗವಂತನ ಸ್ಮರಣೆ ಮತ್ತು ದರ್ಶನದಿಂದ ಉಂಟಾಗುತ್ತದೆ ಎಂಬುದು ಶ್ರೀರಂಗಮಹಾಗುರುಗಳ ಮಾತು. ಇದನ್ನು ನೆನಪಿಸಲು, ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಜೊತೆಗೆ, ಬೇರೆ ಬೇರೆ ಆಕಾರದ ಸಕ್ಕರೆಯ ಅಚ್ಚಿನ ಗೊಂಬೆಗಳನ್ನು ಹಂಚುವ ಪದ್ಧತಿ ಇದೆ. ಮಕ್ಕಳು ತಮಗೆ ಕುದುರೆ ಬೇಕು, ಆನೆ ಬೇಕು, ಹುಲಿ ಬೇಕು ಎಂದು ಹೇಳುವುದುಂಟು. ಆದರೆ, ಕಣ್ಣು ಮುಚ್ಚಿಕೊಂಡು, ಯಾವುದೇ ಗೊಂಬೆಯನ್ನು ಬಾಯಿಗೆ ಹಾಕಿದರೂ, ಸಿಹಿಯೇ ಅನುಭವವಾಗು ವುದು. ನಾಮ, ರೂಪಗಳು ಬೇರೆಯಾದರೂ, ಎಲ್ಲರ ಸ್ವರೂಪವೂ ಸಿಹಿಯಾದ ಪರಮಾತ್ಮನೇ ಎಂಬ ತಣ್ತೀವನ್ನು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಸಿಹಿ ಸೇವಿಸುವಾಗ, ನಿಜ ಸಿಹಿಯಾದ ಸರ್ವೇಶ್ವರನನ್ನು
ನೆನಪಿಸಿಕೊಳ್ಳೋಣ, ಅಲ್ಲವೇ?

ಆಶಾ ಸೋಮಯಾಜಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

Advertisement

Udayavani is now on Telegram. Click here to join our channel and stay updated with the latest news.

Next