Advertisement

ಖರ್ಗೆಯವರನ್ನು ಇಡಿ ವಿಚಾರಣೆಗೆ ಕರೆದಾಗ ಯಾಕೆ ಪ್ರತಿಭಟಿಸಲಿಲ್ಲ: ಬಿ.ಸಿ. ಪಾಟೀಲ್

07:43 PM Jun 19, 2022 | Team Udayavani |

ಧಾರವಾಡ : ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದರೆ ಪ್ರತಿಭಟನೆ ಮಾಡಿದರು, ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಇಡಿ ವಿಚಾರಣೆಗೆ ಕರೆದಿತ್ತು. ಆಗ ಒಬ್ಬರೂ ಪ್ರತಿಭಟನೆಗೆ ಬರಲಿಲ್ಲವೇಕೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

Advertisement

ಧಾರವಾಡದಲ್ಲಿ ಭಾನುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ಓರ್ವ ಹಿರಿಯ ದಲಿತ ಕಾಂಗ್ರೆಸ್ ನಾಯಕ ಖರ್ಗೆ ಅವರನ್ನು ಇಡಿ ವಿಚಾರಣೆಗೆ ಕರೆದಾಗ ಯಾರುಕೂಡಾ ಪ್ರತಿಭಟಿಸಲಿಲ್ಲ. ಆದರೆ ರಾಹುಲ್, ಸೋನಿಯಾ ಅವರನ್ನು ಕರೆದು ವಿಚಾರಣೆ ಮಾಡಬಾರದು ಎಂದರೆ ಹೇಗೆ? ಈ ದೇಶದಲ್ಲಿ ನ್ಯಾಯ, ಸಂವಿಧಾನಕ್ಕೆ ಎಲ್ಲರೂ ತಲೆ ಬಾಗಬೇಕು. ವಿಚಾರಣೆಗೆ ಕರೆಯಬಾರದು ಎಂದು ಧಮ್ಕಿ ಹಾಕಿದರೆ ಹೇಗೆ? ಎಂದು ಪ್ರಶ್ನಿಸಿದರು.

ನಾಳೆ ಯಾರೋ ಒಬ್ಬ ಕೊಲೆ ಮಾಡುತ್ತಾನೆ ಅವನನ್ನು ಬಂಧಿಸಬೇಡಿ ಎಂದು ಪ್ರತಿಭಟಿಸುತ್ತಾರೆ? ಕಾಂಗ್ರೆಸ್ ಸರಕಾರ ಇದ್ದಾಗಲೇ ಹೆರಾಲ್ಡ್ ದೂರು ದಾಖಲಾಗಿದೆ. ಇಡಿ ಪ್ರಧಾನಿ ಮಾತು ಕೇಳುತ್ತೆ ಎನ್ನುತ್ತಾರೆ. ಹಾಗಾದರೆ ಆಗ ಪಿಎಂ ಇದ್ದ ಮನಮೋಹನಸಿಂಗ್ ಕೇಸ್ ಆಗದಂತೆ ಮಾಡುತ್ತಿದ್ದರಲ್ಲವೇ. ಇಡಿ ಸ್ವತಂತ್ರವಾದ ಸಂಸ್ಥೆಯಾಗಿದೆ. ಕಾನೂನು ಬದ್ಧವಾಗಿ ಕೆಲಸ ಮಾಡಲು ಬಿಡಬೇಕು ಎಂದರು.

ಅಗ್ನಿವೀರ ಮಹತ್ವದ ಯೋಜನೆ
ಅಗ್ನಿವೀರ ಸೇನಾ ನೇಮಕಾತಿ ಮಹತ್ತರವಾದ ಯೋಜನೆಯಾಗಿದೆ. ನಾಲ್ಕು ವರ್ಷದ ಸೇವೆಯ ಬಳಿಕ ಬೇಕಾದ ನೌಕರಿ ಸೇರಬಹುದು. ಅದನ್ನು ವಿರೋಧಿಸಿ ಪ್ರತಿಭಟನೆ ಮಾಡುವವರೆಲ್ಲ ಆರ್ಮಿ ಸೇರಬಯಸುವವರೆ. ಆರ್ಮಿಗೆ ಹೋಗುವ ಉದ್ದೇಶ ದೇಶ ರಕ್ಷಣೆ. ಆದರೆ, ಪ್ರತಿಭಟನೆಯ ನೆಪದಲ್ಲಿ ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಇದೆಲ್ಲವೂ ಕಿಡಿಗೇಡಿಗಳ ಕುತಂತ್ರ ಎಂದರು.

ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕುತ್ತಾರಾ? ಕೆಲವರು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಯುವಕರು ಬಲಿಯಾಗಬಾರದು. ಕಾಂಗ್ರೆಸ್ ಪಕ್ಷ ಎಲ್ಲ ಕಡೆ ಅದೇ ಕೆಲಸ ಮಾಡುತ್ತಿದೆ ಎಂದರು.

Advertisement

ಇದನ್ನೂ ಓದಿ : ನಾನು ಒಬ್ಬ ಹಿಂದೂ, 400 ದೇವಾಲಯ ಜೀರ್ಣೋದ್ಧಾರ ಮಾಡಿಸಿದ್ದೇನೆ : ಡಿ.ಕೆ.ಶಿವಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next