ಪೂಜೆ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಆದರೆ ಆ ಪೂಜಾರಿ ಯಾವುದೇ ಮಂತ್ರವನ್ನುಚ್ಚರಿಸದೆ ಪೂಜೆ ಮಾಡುತ್ತಿದ್ದರೆ ನಮಗೆ ಈ ಪೂಜೆಯಲ್ಲಿ ಏನೋ ಕೊರತೆಯಿದೆ ಎಂದು ಅನ್ನಿಸಲು ಆರಂಭವಾಗುತ್ತದೆ. ಅಲ್ಲದೆ ನಮ್ಮ ಚಿತ್ತ ಆ ಪೂಜಾಕೈಂಕರ್ಯಗಳತ್ತ ಇರದೆ ಇನ್ನಾವುದೋ ಲೌಕಿಕ ವಿಚಾರದತ್ತ ಹೊರಳಬಹುದು.
ದೇವರ ಪೂಜೆ ಎಂದಾಕ್ಷಣ ಅದಕ್ಕೆ ಕೆಲವು ತಂತ್ರ ಮತ್ತು ಸೂಕ್ತವಾದ ಮಂತ್ರಗಳನ್ನು ಹಿಂದಿನವರು ಮಾಡಿಟ್ಟಿ¨ªಾರೆ. ಪ್ರತಿಯೊಂದು ದೇವರ ಪೂಜೆಗೂ ಒಂದೊಂದು ಬಗೆಯ ಮಂತ್ರಗಳನ್ನು ಬರೆಯಲಾಗಿದೆ. ಅದರಂತೆಯೇ ಪೂಜಾವಿಧಾನಗಳಲ್ಲೂ ಸಾಕಷ್ಟು ವಿಧಗಳಿವೆ; ಅವುಗಳಿಗೆ ತಕ್ಕುದಾದ ಮಂತ್ರತಂತ್ರಗಳೂ ಇವೆ. ಹೋಮ ಹವನಾದಿಗಳಲ್ಲೂ ಬೇರೆಬೇರೆ ಮಂತ್ರಗಳಿವೆ. ಸೂಕ್ತಗಳು, ಮೂಲಮಂತ್ರ, ಅಭಿಷೇಕಮಂತ್ರ, ಆರತಿಮಂತ್ರ, ಶ್ಲೋಕಗಳು, ಅಷ್ಟೋತ್ತರ ಸಹಸ್ರನಾಮಾದಿಗಳು ಮೊದಲಾದ ಮಂತ್ರಗಳನ್ನು ನಾವು ಕೇಳಿರುತ್ತೇವೆ. ಆದರ ಈ ಮಂತ್ರಗಳೇ ಇಲ್ಲದೇ ಭಕ್ತಿಯಿಂದಲೇ ದೇವರನ್ನು ಪೂಜಿಸಬಹುದಲ್ಲ! ಎಂಬ ವಿಚಾರ ಹಲವರಿಗೆ ಕಾಡಿರಬಹುದು.
ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ? ಎಂಬ ಮಾತು ಪ್ರಚಲಿತ. ಆದರೆ ಇದು ಲೌಕಿಕವಾಗಿ ಯಾವುದೋ ಸಂದರ್ಭದಲ್ಲಿ ಮಂತ್ರದಿಂದ ಏನೂ ಆಗದು ಎಂಬುದನ್ನು ಸೂಚಿಸುತ್ತ ಆಡಿದ ಮಾತಿರಬಹುದು. ಆದರೆ ಅಲೌಕಿಕವಾಗಿ ಇದು ಕೇವಲ ಅನರ್ಥವಾದ ಮಾತು ಅಥವಾ ತಿರಸ್ಕರಿಸಬಹುದಾದ ಮಾತು ಎಂದೇ ಹೇಳಬಹುದು. ಮಾವಿನಕಾಯಿ ಮಂತ್ರಕ್ಕುರುಳದೇ ಇರಬಹುದು. ಆದರೆ ಮಂತ್ರವಿಲ್ಲದ ಪೂಜೆ ಒಂದರ್ಥದಲ್ಲಿ ಅಪೂರ್ಣವೇ. ಮಂತ್ರಗಳು ಹುಟ್ಟಿಕೊಂಡಿರುವುದಕ್ಕೂ ಕಾರಣಗಳಿವೆ. ಪ್ರತಿಯೊಂದನ್ನೂ ನಾವು ಸರಳವಾಗಿ ಯೋಚಿಸಿ, ಅರ್ಥೈಸಿಕೊಂಡು ಆಚರಿಸುವುದನ್ನು ರೂಢಿಸಿಕೊಂಡಾಗ ನಮಗೆ ಅದರ ಶಕ್ತಿಯ ಅರಿವಾಗುತ್ತದೆ.
ಒಂದು ಪೂಜೆ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಆದರೆ ಆ ಪೂಜಾರಿ ಯಾವುದೇ ಮಂತ್ರವನ್ನುಚ್ಚರಿಸದೆ ಪೂಜೆ ಮಾಡುತ್ತಿದ್ದರೆ ನಮಗೆ ಈ ಪೂಜೆಯಲ್ಲಿ ಏನೋ ಕೊರತೆಯಿದೆ ಎಂದು ಅನ್ನಿಸಲು ಆರಂಭವಾಗುತ್ತದೆ. ಅಲ್ಲದೆ ನಮ್ಮ ಚಿತ್ತ ಆ ಪೂಜಾಕೈಂಕರ್ಯಗಳತ್ತ ಇರದೆ ಇನ್ನಾವುದೋ ಲೌಕಿಕ ವಿಚಾರದತ್ತ ಹೊರಳಬಹುದು. ಅದೇ ಮಂತ್ರೋಚ್ಚಾರಣೆ ಸರಾಗವಾಗಿದ್ದಲ್ಲಿ ನಮ್ಮ ಗಮನವೂ ಅಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಎಂಬಲ್ಲಿಗೆ ಈ ಮಂತ್ರಗಳು ನಮ್ಮ ಏಕಾಗ್ರತೆಗಾಗಿ ಅಥವಾ ನಮ್ಮ ಮನಸ್ಸನ್ನು ಕೇಂದ್ರೀಕರಿಸಲೋಸ್ಕರವೇ ಹುಟ್ಟಿಕೊಂಡಿವೆ ಎಂದಾಯಿತು. ಶುದ್ಧವಾದ ಮಂತ್ರಗಳನ್ನು ಆಲಿಸುತ್ತ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದರಿಂದ ನಮ್ಮ ಮನಸ್ಸೂ ಶುದ್ಧವಾಗುತ್ತದೆ. ಕೊಳೆಯಿರದೆ ತಿಳಿಗೊಳ್ಳುತ್ತದೆ. ಮನಸ್ಸಿನಲ್ಲಿನ ಕಲ್ಮಷಗಳು ಹೊರಹೋಗಿ ಉತ್ತಮ ಅಂಶಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ.
ಜಗತ್ತಿನಲ್ಲಿ ಅತಿಯಾದ ವೇಗವೆಂದರೆ ಮನೋವೇಗ. ಮನಸ್ಸು ಇಲ್ಲಿದ್ದಂತೆಯೇ ಅರೆಕ್ಷಣದಲ್ಲಿ ಇನ್ನಾವುದೋ ದೇಶವನ್ನೂ, ಲೋಕವನ್ನೂ ಸೇರಿ ಸಂಚರಿಸುತ್ತಿರಬಹುದು. ಮನುಷ್ಯ ಜನ್ಮತಃ ಚಂಚಲಚಿತ್ತವುಳ್ಳವನು. ಹಾಗಾಗಿ ಅದನ್ನು ಹಿಡಿತಕ್ಕೆ ತರುವುದು ಖಂಡಿತಾ ಸುಲಭವಲ್ಲ. ಅದರಲ್ಲೂ ಇಂದಿನ ಜಗತ್ತಿನಲ್ಲಿ ಮನಸ್ಸು ದೇವಾಲಯದಲ್ಲಿ¨ªಾಗಲೂ ಹೊರಗೆಲ್ಲೂ ಸುತ್ತುವ ಪರಿಸ್ಥಿತಿಯಿದೆ. ಅಂದರೆ, ಅಷ್ಟೊಂದು ಸಂಗತಿಗಳು ನಮ್ಮ ಮನಸ್ಸಿನ ಚಾಂಚಲ್ಯಕ್ಕೆ ಕಾರಣವಾಗುತ್ತಲೇ ಇರುತ್ತವೆ. ವಾಂಛೆಗಳು ಭ್ರಮೆಯ ರೂಪವನ್ನು ತಾಳಲು ಈಗಿನ ವಾತಾವರಣ ಅನುಕೂಲಕರವಾಗಿರುವುದು ಬೇಸರದ ವಿಷಯ. ಮಂತ್ರಗಳು ನಮ್ಮ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿ.
ಪೂಜಾವಿಧಾನಗಳಲ್ಲಿ ಮಂತ್ರಗಳಿ¨ªಾಗ ನಮ್ಮ ಕಿವಿ ಕಣ್ಣು ಅದರತ್ತಲೇ ಇರುವುದರಿಂದ ನಾವು ಶುದ್ಧಭಕ್ತಿಯಿಂದ ಪೂಜೆಯಲ್ಲಿ ತೊಡಗಿಕೊಳ್ಳಬಹುದು. ನಮ್ಮ ಮನಸ್ಸನ್ನು ನಿಯಂತ್ರಿಸುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಈ ಮನಸ್ಸಿನ ನಿಯಂತಣಕ್ಕೆಂದೇ ಪೂಜೆಪುನಸ್ಕಾರಗಳು ಮತ್ತು ಮಂತ್ರಗಳು ಹುಟ್ಟಿಕೊಂಡಿದ್ದು. ಅದರ ನಿಜಾರ್ಥವನ್ನು ಅರಿತು ಆಚರಿಸಿದರೆ ಪ್ರತಿಯೊಂದು ಮನಸ್ಸೂ, ಆ ಮೂಲಕ ಇಡಿಯ ಜಗತ್ತೇ ಶುದ್ಧವಾಗಲು ಸಾಧ್ಯ.
ಮಂತ್ರಮುಗ್ಧತೆ ಎಂಬ ಪದವಿದೆ. ಈ ಮಂತ್ರಗಳಿಗೆ ಮಾರುಹೋಗಿ ಆದರ ಆಳವನ್ನು ಸೇರಿ ಅನುಭವಿಸುವುದು ಮಂತ್ರಮುಗ್ಧತೆ ಅಥವಾ ತನ್ಮಯತೆ. ಆ ತನ್ಮಯತೆಗೆ ಮಂತ್ರಗಳು ಬೇಕು. ಮಂತ್ರಗಳಿ¨ªಾಗ ತಂತ್ರಗಳೂ ತಪ್ಪುವುದಿಲ್ಲ; ಬಾಳಿನ ಹಾದಿಯೂ ತಪ್ಪುವುದಿಲ್ಲ.
ವಿಷ್ಣು ಭಟ್ಟ, ಹೊಸ್ಮನೆ