Advertisement

ದೇಶದಲ್ಲಿ ಇಷ್ಟೆಲ್ಲಾ ಕಾಡುಗಳಿದ್ದರೂ ಆಫ್ರಿಕನ್ ಚೀತಾಗಳ ನೆಲೆಯಾಗಿ ‘ಕುನೋ’ಆಯ್ಕೆ ಯಾಕೆ?

10:57 AM Sep 17, 2022 | Team Udayavani |

ಗ್ವಾಲಿಯರ್: ಮಧ್ಯಪ್ರದೇಶದ ವಿಶಾಲವಾದ ಅರಣ್ಯ ಭೂಭಾಗದಲ್ಲಿ 748 ಚದರ ಕಿಲೋ ಮೀಟರ್‌ ಗಳಷ್ಟು ಹರಡಿರುವ ಕುನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವು ಶನಿವಾರದಂದು ಎಂಟು ಆಫ್ರಿಕನ್ ಚೀತಾಗಳಿಗೆ ಹೊಸ ನೆಲೆಯಾಗಿದೆ.

Advertisement

ಯಾವುದೇ ಮಾನವ ಸಂಚಾರವಿಲ್ಲದ ಈ ಪ್ರದೇಶವು ಈಗ ಛತ್ತೀಸ್‌ ಗಢದ ಭಾಗವಾಗಿರುವ ಕೊರಿಯಾದ ಸಾಲ್ ಕಾಡುಗಳಿಗೆ ಬಹಳ ಹತ್ತಿರದಲ್ಲಿದೆ. ಅಲ್ಲಿಯೇ ಸ್ಥಳೀಯ ಏಷ್ಯಾಟಿಕ್ ಚೀತಾ ಸುಮಾರು 70 ವರ್ಷಗಳ ಹಿಂದೆ ಕೊನೆಯದಾಗಿ ಕಂಡುಬಂದಿದೆ.

ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಿ ಎತ್ತರದ ಪ್ರದೇಶಗಳು, ಕರಾವಳಿಗಳು ಮತ್ತು ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗವನ್ನು ಚೀತಾಗಳ ಆವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಒಂದು ದಶಕದ ಹಿಂದೆ ಯೋಜನೆಗಾಗಿ ಹಲವಾರು ಇತರ ಸೈಟ್‌ಗಳನ್ನು ಪರಿಗಣಿಸಲಾಗಿತ್ತು.

2010 ಮತ್ತು 2012 ರ ನಡುವೆ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಾದ್ಯಂತ ಹತ್ತು ಸೈಟ್‌ಗಳನ್ನು ಸಮೀಕ್ಷೆ ಮಾಡಲಾಗಿದೆ. ನಂತರ, ಕುನೋ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಲಾಯಿತು. ವೈಲ್ಡ್‌ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್‌ ಲೈಫ್ ಟ್ರಸ್ಟ್ ಆಫ್ ಇಂಡಿಯಾವು ಹವಾಮಾನ ಬದಲಾವಣೆಗಳು, ಬೇಟೆಯ ಅವಕಾಶಗಳು, ಪರಭಕ್ಷಕಗಳ ಜನಸಂಖ್ಯೆ ಮತ್ತು ಐತಿಹಾಸಿಕ ವ್ಯಾಪ್ತಿಯ ಆಧಾರದ ಮೇಲೆ ನಡೆಸಿದ ಮೌಲ್ಯಮಾಪನವನ್ನು ಆಧರಿಸಿ ಕುನೋ ಕಾಡನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:ಮಾನ್ಸೂನ್‌ ರಾಗ ಚಿತ್ರ ವಿಮರ್ಶೆ: ಮಾನ್ಸೂನ್‌ ನಲ್ಲಿ ಅರಳಿದ ಕ್ಲಾಸ್‌ ಲವ್‌ ಸ್ಟೋರಿ

Advertisement

ಕುನೋ ವನ್ಯಜೀವಿ ತಾಣದ ವ್ಯಾಪ್ತಿಯ ಸುಮಾರು 24 ಹಳ್ಳಿಗಳನ್ನು ಅಲ್ಲಿನ ಸಾಕುಪ್ರಾಣಿಗಳನ್ನು ಸೇರಿದಂತೆ ವರ್ಷದ ಹಿಂದೆ ಸಂಪೂರ್ಣ ಸ್ಥಳಾಂತರ ಮಾಡಲಾಗಿದೆ. ಹಳ್ಳಿಯ ಜಾಗಗಳು ಮತ್ತು ಅಲ್ಲಿನ ಕೃಷಿ ಪ್ರದೇಶಗಳು ಈಗ ಹುಲ್ಲುಗಾವಲಾಗಿ ಪರಿವರ್ತನೆಯಾಗಿದೆ.

ಸರ್ಕಾರದ ಯೋಜನೆಯ ಪ್ರಕಾರ ಹುಲಿ, ಸಿಂಹ, ಚಿರತೆ ಮತ್ತು ಚೀತಾಗಳು ಈ ಹಿಂದಿನಂತೆ ಕುನೋ ಅರಣ್ಯದಲ್ಲಿ ಸಹಬಾಳ್ವೆ ನಡೆಸುತ್ತವೆ. ಈ ಕಾಡಿನಲ್ಲಿ ಚಿರತೆಗಳ (ಲೆಪರ್ಡ್) ಸಂಖ್ಯೆ ಹೆಚ್ಚಿದ್ದು, ಪ್ರತಿ ನೂರು ಚದರ ಕಿ.ಮೀಗೆ ಒಂಬತ್ತು ಚಿರತೆಗಳಿವೆ. ಚೀತಾಗಳಿಗೆ ಹೋಲಿಸಿದರೆ ಚಿರತೆಗಳು ಹೆಚ್ಚು ಶಕ್ತಿಯುತವಾಗಿರುವಂತವು. ಚೀತಾಗಳು ತಮ್ಮ ವೇಗದ ಓಟಕ್ಕೆ ಹೆಸರು ಪಡೆದಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next