Advertisement

INDvsAFG; ಟಿ20 ಸರಣಿಗೆ ಕೆಎಲ್ ರಾಹುಲ್ ಯಾಕಿಲ್ಲ? ಇಲ್ಲಿದೆ ಕಾರಣ

10:59 AM Jan 08, 2024 | Team Udayavani |

ಬೆಂಗಳೂರು: ಅಫ್ಘಾನಿಸ್ಥಾನದ ವಿರುದ್ಧದ ಟಿ20 ಸರಣಿಗೆ ಕೊನೆಗೂ ಅಳೆದು ತೂಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ಅವರು ಮತ್ತೆ ಟಿ20 ತಂಡಕ್ಕೆ ಆಗಮಿಸಿದ್ದಾರೆ. ಕಳೆದ ಟಿ20 ವಿಶ್ವಕಪ್ ಬಳಿಕ ಒಂದೂ ಪಂದ್ಯವಾಡದ ರೋಹಿತ್ ಶರ್ಮಾ ಮತ್ತೆ ನಾಯಕನಾಗಿ ಮರಳಿದ್ದಾರೆ.

Advertisement

ಇದೇ ವೇಳೆ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿಲ್ಲ. ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮತ್ತು ಸೆಂಚೂರಿಯನ್ ನ ಟಫ್ ಪಿಚ್ ನಲ್ಲಿ ಶತಕ ಬಾರಿಸಿದ್ದ ರಾಹುಲ್ ಅವರು ಟಿ20 ಸರಣಿ ಆಡಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇದನ್ನು ಉಲ್ಟಾ ಮಾಡಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿನ ವರದಿಯ ಪ್ರಕಾರ, ಆಯ್ಕೆದಾರರು ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಸ್ಥಾನಗಳಿಗೆ ಇತರ ಆಯ್ಕೆಗಳನ್ನು ಬಯಸಿದ್ದರಿಂದ ರಾಹುಲ್‌ ಗೆ 3 ಪಂದ್ಯಗಳ ಟಿ20 ಸರಣಿಗೆ ಅನುಮತಿ ನೀಡಲಾಗಿಲ್ಲ. ರಾಹುಲ್ ತನ್ನ ಹೆಚ್ಚಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆರಂಭಿಕ ಆಟಗಾರನಾಗಿ ಆಡಿದ್ದಾರೆ. ಆದರೆ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಜೊತೆಗೆ ರೋಹಿತ್ ಶರ್ಮಾ ಇರುವ ಕಾರಣ ಆರಂಭಿಕರಾಗಿ ರಾಹುಲ್ ಗೆ ಜಾಗವಿಲ್ಲದಾಗಿದೆ.

ವಿಕೆಟ್ ಕೀಪರ್ ಸ್ಥಾಕ್ಕೆ ಆಯ್ಕೆಗಾರರು ಉತ್ತಮ ಫಿನಿಶರ್ ಗಳಾದ ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ರನ್ನು ಆಯ್ಕೆ ಮಾಡಿದ್ದಾರೆ. ರಾಹುಲ್ ಚುಟುಕು ಮಾದರಿಯಲ್ಲಿ ಇದುವರೆಗೆ ಮಧ್ಯಮ ಕ್ರಮಾಂಕದಲ್ಲಿ ಆಡಿಲ್ಲ. ಹೀಗಾಗಿ ಆಯ್ಕೆಗಾರರು ಕನ್ನಡಿಗನ ಪರವಾಗಿ ಮನಸ್ಸು ಮಾಡಿಲ್ಲ.

Advertisement

ಇಶಾನ್ ಕಿಶನ್ ಅನುಪಸ್ಥಿತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲ. ವಿಕೆಟ್ ಕೀಪರ್ ಬ್ಯಾಟರ್ ವೈಯಕ್ತಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವುದಾಗಿ ಕೇಳಿಕೊಂಡಿದ್ದರು. ಅವರು ಮುಂದೆ ಯಾವಾಗ ಲಭ್ಯವಾಗುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next