Advertisement
ಅ.6 ರಂದು ಸಂಜೆ ಘಾಟ್ಕೊàಪರ್ ಪಶ್ಚಿಮದ ಅಸಲ್ಫಾದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಸಭಾ ಗೃಹದಲ್ಲಿ ಮುಂಬಯಿ ವಿಶ್ವ ವಿದ್ಯಾ ಲಯದ ಕನ್ನಡ ವಿಭಾಗ ಮತ್ತು ನೃತ್ಯ ಅಭಿನಯ ಕಲಾಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ನಡೆದ “ನಾನೇಕೆ ಬರೆಯುತ್ತಿದ್ದೇನೆ’ ವಿಚಾರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಹಿನ್ನೆಲೆಯಿಲ್ಲದೆ ಸಾಹಿತ್ಯ ಲೋಕಕ್ಕೆ ಅಂಟಿಕೊಂಡ ನಾನು ಕವಿಯಾಗಿ ಗುರುತಿಸಿಕೊಂಡಿರುವೆ. ಸಾಹಿತ್ಯಕ ವಾತಾವರಣ ಇಲ್ಲದೇ ಈ ತನಕ ಮುನ್ನಡೆದು ಬಂದು ಸಾಹಿತ್ಯವನ್ನು ಎದೆಯಾಳದಲ್ಲಿ ತಿಳಿದುಕೊಂಡು ಅದರ ಜೊತೆಗೆನೇ ಬದುಕು ಕಟ್ಟಿಕೊಂಡೆ ಎಂದರು.
ವೇದಿಕೆಯಲ್ಲಿ ಹಿರಿಯ ಹೆಸರಾಂತ ಕವಿ ಪ್ರಕಾಶ ಕಡಮೆ, ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ-ಮುಂಬಯಿ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಉಪಸ್ಥಿತರಿದ್ದರು. ಕಾಳನಾಯಕ ವಿ. ಮೈಸೂರು, ಗಿರಿ ಸೂರ್ಯರಾಮ ಉಡುಪಿ, ಹೇಮಾ ಸದಾನಂದ ಅಮೀನ್, ಪತ್ರಕರ್ತ ಸೋಮನಾಥ್ ಕರ್ಕೇರ, ಕೆ. ನಾರಾಯಣ, ಜಯಲಕ್ಷಿ ¾à ಜೋಕಟ್ಟೆ, ರಮಾ ಉಡುಪ, ಕುಮುದಾ ಆಳ್ವ, ಜ್ಯೋತಿ ಶೆಟ್ಟಿ, ವಿನೋದ್ ಹುಬ್ಬಳ್ಳಿ, ಚಂದ್ರಶೇಖರ್ ಬೆಳಗಾವಿ, ಡಾ| ಕರುಣಾಕರ್ ಶೆಟ್ಟಿ, ಸಾ. ದಯಾ, ಅಶೋಕ್ ಎಸ್. ಸುವರ್ಣ, ನಂದಾ ಶೆಟ್ಟಿ ಕಲ್ಯಾಣ್, ಡಾ| ಉಮಾ ರಾವ್, ಅನುಪಮಾ ಎನ್. ಎಸ್. ಗೌಡ, ಸದಾನಂದ ಅಮೀನ್, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಸುರೇಖಾ ಶೆಟ್ಟಿ ಪಾಲ್ಗೊಂಡರು. ಲೇಖಕಿ ಹೇಮಾ ಸದಾನಂದ ಅಮೀನ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸಂವಾದ ನಡೆಸಿದರು. ಸುರೇಖಾ ಎಸ್. ದೇವಾಡಿಗ ವಂದಿಸಿದರು. ಚಿತ್ರ- ವರದಿ: ರೋನ್ಸ್ ಬಂಟ್ವಾಳ್