ಮುಂಡರಗಿ: ಕಾಡುಗಳ ಸಂರಕ್ಷಣೆಯಂತೆ ವನ್ಯಜೀವಿಗಳ ಸಂರಕ್ಷಣೆ ಕೂಡ ನಮ್ಮ ಹೊಣೆಗಾರಿಕೆಯಾಗಬೇಕು. ಕಾಡಿನಲ್ಲೆ
ವನ್ಯಜೀವಿಗಳ ಸಂರಕ್ಷಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಬೇಕು. ಬಸವಾದಿ ಶರಣರು 12ನೇ ಶತಮಾನದಲ್ಲೇ ಮರಗಳು, ಪ್ರಾಣಿಗಳ ಸಂರಕ್ಷಣೆಗೆ ಮಹತ್ವ ನೀಡಿದ್ದರು ಎಂದು ಜಗದ್ಗುರು ಡಾ| ಅನ್ನದಾನೀಶ್ವರ ಮಹಾಶಿವಯೋಗಿಗಳು ಅಭಿಪ್ರಾಯಪಟ್ಟರು.
Advertisement
ಪಟ್ಟಣದಲ್ಲಿ ಅರಣ್ಯ ಇಲಾಖೆ ಗದಗ , ಕಪ್ಪತ್ತ ಹಿಲ್ಸ್ ಅರಣ್ಯ ವಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಹಮ್ಮಿಕೊಂಡಿದ್ದ 70ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ವಾಟಿಸಿ ಅವರು ಆರ್ಶೀವಚನ ನೀಡಿದರು.
ಸಂರಕ್ಷಣೆಯಿಂದ ವನ್ಯಜೀವಿಗಳು ಸಂರಕ್ಷಣೆ ಕೂಡ ಆಗಲಿದೆ. ವನ್ಯಜೀವಿ ಸಂಕುಲ ಮಾನವ ಸಂಘದಿಂದ ಪ್ರತ್ಯೇಕ ಇರಬಯಸುತ್ತವೆ. ಆದ್ದರಿಂದ ಮಾನವ ಮತ್ತು ವನ್ಯಜೀವಿಗಳ ಮಧ್ಯ ಸಂಘರ್ಷ ಹೆಚ್ಚಾಗುತ್ತಿದೆ. ಮಾನವ ವನ್ಯಜೀವಿಗಳ ಜೊತೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಸಹ ಅಸ್ತಿತ್ವದ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಪ್ಪತಗುಡ್ಡ ನಮ್ಮೆಲ್ಲರಿಗೆ ಸಂಜೀವಿನಿಯಾಗಿದೆ. ಕಪ್ಪತ್ತಗುಡ್ಡದ ಪ್ರಾಣಿ-ಪಕ್ಷಿಗಳ ಸಂರಕ್ಷಣೆಯ ಜೊತೆಗೆ ಮರಗಿಡಗಳನ್ನು ಬೆಳೆಸಬೇಕು. ಗದಗ ಜಿಲ್ಲೆಯಲ್ಲಿ ಕಪ್ಪತಗುಡ್ಡ ಇರುವುದರಿಂದಲೇ ಪರಿಶುದ್ಧ ಗಾಳಿಗೆ ಏಷಿಯಾದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
Related Articles
ಹೋಗಬೇಕಾಗಿದೆ ಎಂದರು.
Advertisement
ತಹಶೀಲ್ದಾರ್ ಎರ್ರೀಸ್ವಾಮಿ ಪಿ.ಎಸ್. ಮಾತನಾಡಿದರು. ವೇದಿಕೆಯಲ್ಲಿ ಉರಗ ತಜ್ಞರಾದ ಜಲಾಲಸಾಬ್ ಕೊಪ್ಪಳ, ಫಿರೋಜಖಾನ್ ಘೋರಿ ಮತ್ತು ವನ್ಯಜೀವಿ ಛಾಯಾಚಿತ್ರಗಾರ ಸುನೀಲ ಯಾಳಗಿ ಮುಂತಾದವರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಪ್ರಭಾರ ಎಸಿಎಫ್ ವೀರೇಂದ್ರ ಮರಿಬಸಣ್ಣವರ, ಸಿಪಿಐ ಮಂಜುನಾಥ ಕುಸುಗಲ್ಲ, ಕಪ್ಪತಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ ಬಿ.ಎಸ್., ಸಮಾಜಕಲ್ಯಾಣ ಇಲಾಖೆ ಅರುಣಾ ಸೋರಗಾಂವಿ ಮುಂತಾದವರಿದ್ದರು.
ಕ.ರಾ. ಬೆಲ್ಲದ ಕಾಲೇಜ್, ಎಸ್.ಬಿ.ಎಸ್ ಆಯುರ್ವೇದಿಕ ಮೆಡಿಕಲ್ ಕಾಲೇಜು ಮತ್ತು ಪ್ರೀಯದರ್ಶಿನಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಕೊಂಚಿಗೇರಿ ಕಲಾವಿದರು ಪ್ರಾರ್ಥಿಸಿದರು. ಶಿರಹಟ್ಟಿ ಆರ್.ಎಫ್.ಒ ರಾಮಣ್ಣ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಆರ್.ಎಚ್. ಜಂಗಣವಾರಿ ನಿರೂಪಿಸಿದರು.