Advertisement

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

07:25 PM Nov 23, 2024 | Team Udayavani |

ಮುಂಬಯಿ: ನಟಿ ಸ್ವರಾ ಭಾಸ್ಕರ್ ಅವರ ಪತಿ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅಭ್ಯರ್ಥಿಯಾಗಿದ್ದ ಫಹಾದ್ ಅಹ್ಮದ್ ಅವರು ಮಹಾರಾಷ್ಟ್ರದ ಅನುಶಕ್ತಿ ನಗರ ಕ್ಷೇತ್ರದಲ್ಲಿ ಅನುಭವಿಸಿದ್ದಾರೆ. ಸೋಲಿನ ಬಳಿಕ ಸ್ವರಾ ಭಾಸ್ಕರ್ ಚುನಾವಣಾ ಆಯೋಗಕ್ಕೆ ಇವಿಎಂ ಸಂಬಂಧಿತ ಪ್ರಶ್ನೆಯನ್ನು ಕೇಳಿದ್ದಾರೆ.

Advertisement

ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಭ್ಯರ್ಥಿ ಸನಾ ಮಲಿಕ್ ಫಹಾದ್ ಅಹ್ಮದ್ ಅವರನ್ನು 3378 ಮತಗಳಿಂದ ಸೋಲಿಸಿದರು.

ಫಲಿತಾಂಶದ ನಂತರ, ಸ್ವರಾ ಅವರು ಇವಿಎಂ ಟ್ಯಾಂಪರಿಂಗ್ ಅನ್ನು ಆಪಾದಿಸಿದ್ದಾರೆ. ಫಹಾದ್ ಅವರ ಸ್ಥಿರ ಮುನ್ನಡೆಯ ನಂತರ 17, 18, 19 ನೇ ಸುತ್ತಿನಲ್ಲಿ ಇದ್ದಕ್ಕಿದ್ದಂತೆ 99% ಬ್ಯಾಟರಿ ಚಾರ್ಜರ್ ಇವಿಎಂಗಳು ತೆರೆದುಕೊಂಡಿವೆ ಮತ್ತು ಬಿಜೆಪಿ ಬೆಂಬಲಿತ ಎನ್‌ಸಿಪಿ-ಅಜಿತ್ ಪವಾರ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಎಲ್ಲಾ ದಿನದಲ್ಲಿ ಮತ ಚಲಾಯಿಸಿದ ಯಂತ್ರಗಳು 99% ಚಾರ್ಜ್ ಆಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಹ್ಮದ್ ವಿದ್ಯಾರ್ಥಿ ಕಾರ್ಯಕರ್ತ ಮತ್ತು ರಾಜಕಾರಣಿಯಾಗಿದ್ದು, ಅವರು ಎನ್‌ಸಿಪಿ (ಎಸ್‌ಪಿ) ಗೆ ಸೇರುವ ಮೊದಲು ಸಮಾಜವಾದಿ ಪಕ್ಷದ ಮುಖಂಡರಾಗಿದ್ದರು. ಶಾಸಕಿಯಾಗಿ ಆಯ್ಕೆಯಾಗಿರುವ ಸನಾ ಅವರು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next