Advertisement

CM ಆಗ್ತೀರಾ ಅಂದ್ರೆ ಬೇಡ ಯಾಕೆ ಹೇಳ್ಬೇಕು? ಸಚಿವ ಡಾIಜಿ.ಪರಮೇಶ್ವರ್‌

09:33 PM Sep 10, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಆಗುತ್ತೀರಾ ಅಂತಾ ಕೇಳಿದಾಗ ಸಹಜವಾಗಿಯೇ ಕೆಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಹಾಗಂತ ಅಭಿವ್ಯಕ್ತಿ ಸ್ವಾತಂತ್ರ್ಯವೇ ಬೇಡ ಅಂದರೆ ಹೇಗೆ? ಎಂದು ಗೃಹ ಸಚಿವ ಡಾಣ ಜಿ.ಪರಮೇಶ್ವರ್‌ ಕೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ. ಯಾವ ಸಂದರ್ಭದಲ್ಲೂ ಮುಖ್ಯಮಂತ್ರಿ ಬದಲಾಗುವುದಿಲ್ಲ ಎಂದು ನಾನೇ ಈ ಹಿಂದೆ ಅನೇಕ ಬಾರಿ ಹೇಳಿದ್ದೇನೆ. ಮುಖ್ಯಮಂತ್ರಿ ಆಗುತ್ತೀರಾ ಅಂತಾ ಮಾಧ್ಯಮದವರು ಕೇಳಿದಾಗ, ನಾವು ಬೇಡ ಅಂತಾ ಯಾಕೆ ಹೇಳಬೇಕು ಎಂದು ನನಗೆ ಆ ಸ್ನೇಹಿತರು ಹೇಳಿದ್ದಾರೆ. ಅಷ್ಟು ಬಿಟ್ಟರೆ, ಇದರಲ್ಲಿ ಬೇರೇನೂ ಇಲ್ಲ ಎಂದರು.

ಸಚಿವ ಎಂ.ಬಿ. ಪಾಟೀಲ್‌ ದಿಲ್ಲಿಗೆ ಹೋಗಿರುವ ಬಗ್ಗೆ ಕೇಳಿದಾಗ, ಇಲಾಖೆ ಕೆಲಸಕ್ಕೆ ಹೋಗಿರಬಹುದು. ಅದಕ್ಕೆ ಸಿಎಂ ಚರ್ಚೆಗೆ ಅಂದುಕೊಂಡರೆ ಹೇಗೆ? ನಾನೂ ಇಲಾಖೆ ಕೆಲಸದ ಮೇಲೆ ಹೋಗುತ್ತೇನೆ. ಹಾಗಂತ ಮುಖ್ಯಮಂತ್ರಿ ಹುದ್ದೆಗೆ ಲಾಬಿ ಮಾಡಲು ಹೋಗಿದ್ದರು ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.