Advertisement

C.T.Ravi Case: ಕಾನೂನು ಚೌಕಟ್ಟಿನಲ್ಲೇ ನಮ್ಮ ತನಿಖೆ: ಜಿ.ಪರಮೇಶ್ವರ್

03:15 AM Jan 13, 2025 | Team Udayavani |

ಬೆಂಗಳೂರು: “ಯಾರೂ ಕಾನೂನಿಗಿಂತ ಮಿಗಿಲಲ್ಲ. ಸಭಾಪತಿಗಳೂ ಅದೇ ಚೌಕಟ್ಟಿನಲ್ಲಿ ತೀರ್ಪು ಕೊಡುತ್ತಾರೆ; ನಾವೂ ಅದೇ ಚೌಕಟ್ಟಿನಲ್ಲಿ ತನಿಖೆ ಮಾಡುತ್ತೇವೆ’ ಎಂದು ಗೃಹ ಸಚಿವ ಡಾ.ಪರಮೇಶ್ವರ ತಿಳಿಸಿದರು.

Advertisement

ಸಿ.ಟಿ. ರವಿ ಪ್ರಕರಣಕ್ಕೆ ಸಂಬಂಧಿಸಿ ಸಭಾಪತಿ ಹೊರಟ್ಟಿ ಅವರ ಪತ್ರದಲ್ಲಿ ಏನಿದೆ ಎಂದು ನೋಡುತ್ತೇನೆ. ಅನಂತರ ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ. ಶಾಸಕಾಂಗದ ಸಾರ್ವಭೌಮತ್ವ ಉಲ್ಲಂಘನೆ ಆಗಿದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ರವಿವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ದೂರಿನ ಮೇರೆಗೆ ಪೊಲೀಸರು ಹೇಗೆ ನಡೆದುಕೊಂಡರು ಎಂಬುದರ ಸಹಿತ ಎಲ್ಲವನ್ನೂ ಪರಿಶೀಲಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಶಾಸಕಾಂಗದ ಸಾರ್ವಭೌಮತ್ವ ಉಲ್ಲಂಘನೆ ಆಗಿದೆಯೇ ಎಂದು ಪರಿಶೀಲಿಸುತ್ತೇವೆ. ಅನವಶ್ಯಕ ಗೊಂದಲ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಒಡಿಗೆ ಪ್ರಕರಣ ಕೊಟ್ಟೆವು. ಸತ್ಯಾಸತ್ಯ ಪತ್ತೆ ಹಚ್ಚಲು ಸಿಒಡಿಗೆ ವಹಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ಸಿ.ಟಿ. ರವಿಗೆ ಅನಾಮಿಕರಿಂದ ಬೆದರಿಕೆ ವಿಷಯಕ್ಕೆ ಪ್ರತಿಕ್ರಿಯಿಸಿ, ಬೆದರಿಕೆ ಪತ್ರದ ಬಗ್ಗೆ ಪರಿಶೀಲಿಸಲಾಗುವುದು. ಈಗಾಗಲೇ ಸಿಐಡಿಯವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪತ್ರದ ವಿಷಯವೂ ಪರಿಶೀಲಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.