ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಹಯೋಗದಲ್ಲಿ ಇತ್ತೀಚೆಗೆ “ಮಹಾಭಾರತ ಸಂದೇಶ’ ಕುರಿತ 5 ದಿನ ಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ, ಕಾದಂಬರಿ ಕಾರ ಎಸ್.ಎಲ್. ಭೈರಪ್ಪ ಮಾತನಾಡಿದರು. ಅದರ ಆಯ್ದ ಭಾಗ ಇಲ್ಲಿದೆ…
ಧರ್ಮರಾಯನನ್ನು ನಮ್ಮ ಇಡೀ ಪರಂಪರೆ, “ಧರ್ಮದ ಎನಾºಡಿಮೆಂಟ್’ ಅಂತ ಕರೆ ಯುತ್ತೆ. ಆದರೆ, ನಾವು ಪ್ರಾಕ್ಟಿ ಕಲ್ ಆಗಿ ನೋಡೋದಾದ್ರೆ, ಎಷ್ಟರಮಟ್ಟಿಗೆ ಅವನು ಧರ್ಮದ ಸಾಕಾರ ಆಗ್ತಾ ನೆ? ಅವನು ಜೂಜಿನ ಅಡಿ ಕ್ಟರ್. ಇಸ್ಪೀಟ್ ಆಡುತ್ತಿದ್ದ ವ್ಯಸನಿ. ಒಂದ್ಸಲ ಹೋಗ್ತಾನೆ, ಇಡೀ ರಾಜ್ಯ ಕಳ್ಕೊಳ್ತಾನೆ. ಆಮೇಲೆ ಧೃತರಾಷ್ಟ್ರ ಅದನ್ನು ವಾಪಸ್ ಕೊಡಿಸ್ತಾನೆ. ಮತ್ತೆ ಶಕುನಿ ಬಂದು, ಇವನನ್ನು ಕರೀತಾನೆ… “ಇನ್ನೊಂದ್ಸಲಿ ಆಡ್ಬೇಕು’ ಅಂತ. ಒಂದ್ಸಲ ಎಲ್ಲವನ್ನೂ ಕಳ್ಕೊಂಡಿದ್ದೀನಿ, ಮತ್ತೆ ಹೋಗ್ಬಾರ್ದು ಅಂತ ವಿವೇಚನೆ ಇರಲಿಲ್ಲ ಆತನಿಗೆ. ಮತ್ತೆ ಹೋಗಿºಡ್ತಾನೆ. ಹೋದಾಗ, ಅಲ್ಲಿ ಇದ್ದಂಥ ಪಣ ಏನು? 12 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ. ಆ ವನವಾಸದೊಳಗೆ ಏನೇನು ಫಜೀತಿ ಪಟ್ಟಿದ್ದಾರೆ ಅಂತ ಅನ್ನೋದು ಮೂಲ ಮಹಾಭಾರತದೊಳಗಿದೆ. ಅಲ್ಲಿಂದ ಅಜ್ಞಾತವಾಸಕ್ಕೆ ಬರ್ತಾರೆ. ಅಜ್ಞಾತವಾಸಕ್ಕೆ ಬಂದ್ರೆ, ವಿರಾಟನ ರಾಜ್ಯದಲ್ಲಿ ಅಥವಾ ವಿರಾಟ ನಗರದಲ್ಲಿ ಈ ಐದು ಜನರು, ಮರೆ ಮಾಡ್ಕೊಂಡು ತಮ್ಮ ಹೊಟ್ಟೆಪಾಡು ನೋಡ್ಕೊಂಡು ಇರ್ಬೇಕು. ಅದನ್ನು ಹ್ಯಾಗ್ ಮಾಡ್ತಾರೆ? ಭೀಮ ಅಡುಗೆಯವನಾಗಿ ಸೇರ್ಕೊಳ್ತಾನೆ. ಯಾಕಂತಂದ್ರೆ ಅವನಿಗೆ ಊಟ ಜಾಸ್ತಿ ಬೇಕು. ಅಡುಗೆಯವನಾಗಿದ್ರೆ ಊಟ ಚೆನ್ನಾಗಿ ಮಾಡಬಹುದಲ್ಲ! ಅರ್ಜುನ ಡ್ಯಾನ್ಸ್ ಮಾಸ್ಟರ್ ಆಗ್ತಾನೆ. ನಕುಲ, ಸಹದೇವರು ಕುದುರೆ ಮತ್ತು ದನಗಳನ್ನು ಕಾಯ್ಕೊಂಡು ಇರ್ತಾರೆ.
ಧರ್ಮರಾಜ ಏನು ಮಾಡ್ತಾನೆ? ವಿರಾಟನ ಆಸ್ಥಾನಕ್ಕೆ ಸೇರ್ಕೊಂಡು ವಿರಾಟನಿಗೂ ಪಗಡೆ ಆಟಕ್ಕೆ ಎಳೆದುಕೊಳ್ತಾನೆ. ಈ ಕಳ್ಕೊಂಡವರು ಒಬ್ಬರಿಗೊಬ್ಬರಿಗೆ ಪರಸ್ಪರ ಚೆನ್ನಾಗಿ ಅರ್ಥ ಆಗ್ತಾರೆ. ನಮ್ಮಲ್ಲಿ, ಇವಾ ಗ ಹ್ಯಾಗಿದೆಯೋ ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗ, ನಮ್ಮೂರು ಕಡೆ ನೋಡಿದ್ದೆ. ಎಲ್ಲಾದರೂ ಒಂದು ಮದುವೆ ನಡೆಯಿತು ಅಂತಂದ್ರೆ, ಇಸ್ಪೀಟ್‌ನೊವ್ರು ಎರಡು ಜೇಬಿಗೂ ಎರಡು ಇಸ್ಪೀಟ್ ಪ್ಯಾಕ್ ಇಟ್ಕೊಂಡ್ಹೊಗ್ತಿದ್ರು. ಅಲ್ಲಿ ಒಬ್ರಿಗೊಬ್ರು ಮುಖ ನೋಡ್ತಿದ್ದಂಗೆ ಗೊತ್ತಾಗುತ್ತೆ, ಇವನು ಆಟಗಾರ ಅಂತ. ತಕ್ಷಣ ಸ್ನೇಹ ಬಂದ್ಬಿಡುತ್ತೆ ಅವ್ರಿಗೆ. ನಂತರ ಅಷ್ಟೇ ಅವ್ರ ಕೆಲ್ಸ.. ಮುಹೂರ್ತ ನೋಡೋ ಕೆ ಹೋಗೋದೇ ಇಲ್ಲ. ಊಟಕ್ಕೂ ಸರಿಯಾದ ಟೈಮ್‌ಗೆ ಹೋಗೋದೇ ಇಲ್ಲ. ಎರಡೂ¾ರು ದಿವಸ ಅದನ್ನೇ ಆಡ್ಕೊಂಡ್ಹೊàಗ್ತಾರೆ. ವಾಪಸ್ ಹೊರಡುವಾಗ ಹ್ಯಾಗೂ, ಮದುವೆ ಮನೆಯಲ್ಲಿ ಉಂಡೆ, ಚಕ್ಲಿ ಎಲ್ಲ ಕೊಡ್ತಾರೆ. ಅದನ್ನ ತಗೊಂಡು ಮನೆಗೆ ಬರ್ತಾರೆ. ಮನೆಗೆ ಬಂದ್ರೆ ಇವರ ಹೆಂಡ್ತಿ ಕೇಳ್ತಾಳೆ, “ಹುಡುಗಿ ಹ್ಯಾಗಿದ್ಲು ನೋಡೋಕೆ?’ ಅಂತವ. ಇವನು ನೋಡೇ ಇರಲ್ಲ. “ಚೆನ್ನಾಗಿದ್ಲು ‘ ಅಂತಾ ನೆ. “ಅಲ್ಲಾ, ಚೆನ್ನಾಗಿದ್ಲು ಅಂದ್ರೆ ಹ್ಯಾಗಿದ್ಲು .. ಉದ್ದಕ್ಕಿದ್ಲಾ? ಯಾವ್ ಬಣ್ಣ?’ ಅಂತ. “ಅದೆಲ್ಲಾನೂ ಹೇಳ್ಬೇಕಾ? ಚೆನ್ನಾಗಿದ್ಲು ಅಂದ್ರೆ ಚೆನ್ನಾಗಿದ್ಲು, ಮುಚ್ಚುಬಾಯ್’ ಅಂತಾನೆ. ಯಾಕಂದ್ರೆ ಅವ್ನು ನೋಡೇ ಇರಲ್ಲ. ಇದೂ ಅಡಿಕ್ಷನ್ನಲ್ಲಿ ಬರುವಂಥದ್ದು. ಯುದಿಷ್ಠಿರ ಅಲ್ಲೂ ಪಗಡೆಗೆ ಸೇರಿ ಕೊಳ್ತಾ ನೆ. ಅದನ್ನು ಮಾಡಬಾರದು ಅಂತ ಅವನಿಗೆ ಅನ್ನಿಸುವುದೇ ಇಲ್ಲ.
(ಸಮನ್ವಯ: ಭಾರತೀಯ ವಿದ್ಯಾಭವನ, ಬೆಂಗಳೂರು)