Advertisement

Muslim ಮಹಿಳೆಯರ ಪರವಾಗಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

05:32 PM Sep 27, 2023 | Team Udayavani |

ವಡೋದರಾ(ಗುಜರಾತ್): ವಿರೋಧ ಪಕ್ಷದವರಿಗೆ ನಿಜವಾಗಿಯೂ ಮಹಿಳಾ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದಿದ್ದರೆ, ಅವರು ದಶಕಗಳಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕಿಡಿ ಕಾರಿದ್ದಾರೆ.

Advertisement

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ‘ನಾನು ಮಹಿಳೆಯರಿಗೆ ಶೌಚಾಲಯದ ಬಗ್ಗೆ ಮಾತನಾಡುವಾಗ ಇದೇ ಜನರು ನನ್ನನ್ನು ಅಣಕಿಸಿದ್ದರು. ನಾನು ಮಹಿಳೆಯರಿಗೆ ಜನ್ ಧನ್ ಖಾತೆಯ ಬಗ್ಗೆ ಮಾತನಾಡುವಾಗ, ಉಜ್ವಲಾ ಯೋಜನೆಯನ್ನು ಘೋಷಿಸಿದಾಗ ಲೇವಡಿ ಮಾಡಿದರು’ ಎಂದು ಆಕ್ರೋಶ ಹೊರ ಹಾಕಿದರು.

‘ನಾವು ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ನಿಂದ ವಿಮೋಚನೆ ಮಾಡುವ ಬಗ್ಗೆ ಮಾತನಾಡುವಾಗ ಅವರು ತಮ್ಮ ರಾಜಕೀಯ ಸಮೀಕರಣಗಳ ಬಗ್ಗೆ ಕಾಳಜಿ ವಹಿಸಿದ್ದರು.ಅವರಿಗೆ ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ಇರಲಿಲ್ಲ. ಅವರು ಕೇವಲ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಕಾಳಜಿ ವಹಿಸುತ್ತಿದ್ದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಾಗ ಅವರು ಮಹಿಳೆಯರ ಪರವಾಗಾಗಿ ಏಕೆ ನಿಲ್ಲಲಿಲ್ಲ’ ಎಂದು ಪ್ರಶ್ನಿಸಿದರು.

‘ನಾರಿ ಶಕ್ತಿ ವಂದನ್ ಅಧಿನಿಯಮದ ಐತಿಹಾಸಿಕ ಮಸೂದೆ ಅಂಗೀಕಾರದಿಂದ ಇಡೀ ರಾಷ್ಟ್ರವು ಸಂಭ್ರಮಿಸಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next