Advertisement

ಅಸ್ಸಾಂ ನಲ್ಲಿ ಬಿಜೆಪಿ ಜಾಹೀರಾತಿಗಾಗಿ ಕೋಟಿಗಟ್ಟಲೆ ವ್ಯಯಿಸಿದ್ದೇಕೆ ..? : ಕಾಂಗ್ರೆಸ್

06:00 PM Mar 29, 2021 | Team Udayavani |

ಗುವಾಹಟಿ : ಮಾರ್ಚ್ 27 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದ ಅಪ್ಪರ್ ಅಸ್ಸಾಂನ ಎಲ್ಲಾ ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪತ್ರಿಕೆಗಳ ಜಾಹೀರಾತಿಗಾಗಿ ಕೋಟಿ ಕೋಟಿರೂಪಾಯಿಗಳನ್ನು ಖರ್ಚು ಮಾಡಿರುವ ಅಗತ್ಯದ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ರಿಪುನ್ ಬೋರಾ ಪ್ರಶ್ನಿಸಿದ್ದಾರೆ.

Advertisement

ಅಪ್ಪರ್ ಅಸ್ಸಾಂ ನಲ್ಲಿ ಭಾರತೀಯ ಜನತಾ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಸುದ್ದಿ ರೂಪದ ಜಾಹಿರಾತುಗಳನ್ನು ಪ್ರಕಟಿಸಿರುವುದಕ್ಕೆ ಸಂಬಂಧಿಸಿದಂತೆ   ಅಸ್ಸಾಂ ನ ಮುಖ್ಯಮಂತ್ರಿ ಸರಬಾನಂದ ಸೋನೊವಾಲ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ರಂಜಿತ್ ಕುಮಾರ್ ದಾಸ್ ಹಾಗೂ ಅಸ್ಸಾಂ ನ ಎಂಟು ದಿನ ಪತ್ರಿಕೆಗಳ ವಿರುದ್ಧ ಕಾಂಗ್ರೆಸ್ ಪ್ರಕರಣ ದಾಖಲಿಸಿದೆ.

ಓದಿ : ಶೋವಾ ಮಜುಂದಾರ್ ಜಿ ಕುಟುಂಬದ ನೋವು ದೀದಿಯನ್ನು ದೀರ್ಘಕಾಲ ಕಾಡುತ್ತದೆ : ಅಮಿತ್ ಶಾ

ಮಾದರಿ ನೀತಿ ಸಂಹಿತೆ (ಎಂಸಿಸಿ), ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ಸೆಕ್ಷನ್ 126 ಎ ಮತ್ತು ಮಾರ್ಚ್ 26 ರಂದು ಹೊರಡಿಸಿದ ಇಸಿಐ ನಿರ್ದೇಶನಗಳನ್ನು ಬಿಜೆಪಿ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ತಮ್ಮ ಭವಿಷ್ಯದ ಬಗ್ಗೆ ಬಿಜೆಪಿ ನಾಯಕರಲ್ಲಿ ಯಾವುದೇ ಒಮ್ಮತವಿಲ್ಲ ಮತ್ತು ಅಂತಹ ಜಾಹೀರಾತುಗಳನ್ನು ಹಾಕುವ ಮೂಲಕ ಅವರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಬೋರಾ ಆರೋಪಿಸಿದ್ದಾರೆ.

Advertisement

ಮೊದಲ ಹಂತದ ಚುನಾವಣೆಯಲ್ಲಿ 46 ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿ ಹೇಳಿತ್ತು, ಎಲ್ಲಾ 47 ಕ್ಷೇತ್ರಗಳನ್ನು ಕೇಸರಿ ಪಕ್ಷ ಗೆಲ್ಲುತ್ತದೆ ಎಂದು ಬಿಜೆಪಿಯ ಪತ್ರಿಕೆಗಳ ಜಾಹೀರಾತು ಹೇಳಿತ್ತು, ತದನಂತರ, 42 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಭರವಸೆ ವ್ಯಕ್ತ ಪಡಿಸಿದರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ 37 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದರು. ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ ಎನ್ನುವುದರ ಬಗ್ಗೆ ಪಕ್ಷದ ನಾಯಕರುಗಳ ನಡುವೇ ಒಮ್ಮತವಿಲ್ಲ.   ಜನರನ್ನು ತಪ್ಪುದಾರಿಗೆಳೆದು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವುದು ಅವರ ಮುಖ್ಯ ಉದ್ದೇಶವೆಂದು ಅವರು ಹೇಳಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ಅವರಲ್ಲಿದ್ದರೇ, ಯಾಕೆ ಪತ್ರಿಕೆಗಳಿಗೆ ಕೋಟಿ ಕೋಟಿ ಹಣವನ್ನು ಜಾಹಿರಾತುಗಳಿಗಾಗಿ ವ್ಯಯ ಮಾಡಬೇಕಿತ್ತು ಎಂದು ಬೋರಾ ಕೇಳಿದ್ದಾರೆ.

ಓದಿ : ಏಪ್ರಿಲ್‌ 2ರಿಂದ ಓದು-ಬರಹ ಅಭಿಯಾನ ಆರಂಭ: ಸಚಿವ ಸುರೇಶ್‌ ಕುಮಾರ್

 

Advertisement

Udayavani is now on Telegram. Click here to join our channel and stay updated with the latest news.

Next