Advertisement
ಕೇಂದ್ರ ಸರಕಾರ ಹೇಳುವ ಪ್ರಕಾರ, ಸದ್ಯ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುತ್ತಿರುವುದರಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಚಾ ತೈಲದ ದರ ಏರಿಕೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಮೂರು ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿವೆ. ಆದರೂ ಕಳೆದ 15 ದಿನಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯ ಏರಿಳಿಕೆ ಸ್ಥಗಿತವಾಗಿದೆ. ಅಲ್ಲದೆ ತೈಲ ಬೆಲೆ ಏರಿಕೆ ಬಗ್ಗೆ ಸ್ಪಷ್ಟನೆ ಕೊಡುತ್ತಿರುವ ಕೇಂದ್ರ ಸರಕಾರ ಬೆಟ್ಟು ಮಾಡಿ ತೋರುತ್ತಿರುವುದು ಯುದ್ಧದ ಕಡೆ. ಇದರಿಂದಾಗಿ ಒಪೆಕ್ ಸೇರಿದಂತೆ ತೈಲ ಮಾರುಕಟ್ಟೆದಾರರು ಬೇಡಿಕೆಗೆ ತಕ್ಕಂತೆ ಕಚ್ಚಾತೈಲ ಒದಗಿಸುತ್ತಿಲ್ಲ. ಹೀಗಾಗಿಯೇ ಬೆಲೆ ಹೆಚ್ಚಳವಾಗುತ್ತಿದೆ. ಅದೂ ಅಲ್ಲದೇ ರಷ್ಯಾದಿಂದಲೂ ತೈಲವನ್ನು ಖರೀದಿ ಮಾಡಲು ನಿರ್ಬಂಧ ಹೇರಲಾಗಿದೆ. ಈ ಎಲ್ಲ ಕಾರಣದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಸತತವಾಗಿ ಏರಿಕೆಯಾಗಿ, ಇಲ್ಲಿಯೂ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಗನಮುಖೀ ಮಾಡಿದ್ದರಿಂದ ಕೇಂದ್ರ ಸರಕಾರ ನವೆಂಬರ್ ತಿಂಗಳಲ್ಲಿ ಈ ಎರಡರ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ. ಮತ್ತು 10 ರೂ.ನಷ್ಟು ಕಡಿಮೆ ಮಾಡಿತ್ತು. ಆಗ ರಾಜ್ಯಗಳಿಗೂ ವ್ಯಾಟ್ ಕಡಿತಗೊಳಿಸುವಂತೆ ಮನವಿ ಮಾಡಿತ್ತು. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಮಾತ್ರ ಕಡಿಮೆ ಮಾಡಿದ್ದವು. ಪ್ರಮುಖವಾಗಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ 7 ರಾಜ್ಯಗಳು ಆಗ ವ್ಯಾಟ್ ಇಳಿಕೆ ಮಾಡಿರಲಿಲ್ಲ. ವ್ಯಾಟ್ ಕಡಿತ ಮಾಡಲು ಹಿಂಜರಿಕೆ ಏಕೆ?
ಕೊರೊನೋತ್ತರದಲ್ಲಿ ರಾಜ್ಯಗಳಿಗೆ ಬರುತ್ತಿರುವ ಆದಾಯ ಕುಸಿತವಾಗಿದೆ. ಹೀಗಾಗಿ ಹೆಚ್ಚು ಕಡಿಮೆ ಎಲ್ಲ ರಾಜ್ಯಗಳು ಮದ್ಯದ ಮೇಲಿನ ಅಬಕಾರಿ ತೆರಿಗೆ ಮತ್ತು ತೈಲದ ಮೇಲಿನ ವ್ಯಾಟ್ ಇಳಿಕೆ ಮಾಡಲು ಹೋಗುವುದಿಲ್ಲ. ರಾಜ್ಯಗಳು ಹೇಳುವುದು, ನಮಗಿಂತ ಕೇಂದ್ರ ಸರಕಾರದ ಅಬಕಾರಿ ತೆರಿಗೆ ಹೆಚ್ಚಾಗಿದೆ. ಇದನ್ನೇ ಕಡಿತ ಮಾಡಲಿ. ನಮ್ಮ ಆದಾಯ ಮೂಲವನ್ನು ಕಿತ್ತುಕೊಳ್ಳುವುದು ಬೇಡ ಎಂಬುದು. ಆದರೆ ಕೇಂದ್ರ ಸರಕಾರ ನಾವು ಕಳೆದ ನವೆಂಬರ್‌ನಲ್ಲಿ ಅಬಕಾರಿ ತೆರಿಗೆ ಇಳಿಕೆ ಮಾಡಿದ್ದೆವು. ಇದಕ್ಕೆ ಕೈಜೋಡಿಸಬೇಕಿತ್ತು ಎಂಬುದು. ಇನ್ನು ನಷ್ಟದ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿಯವರೇ ಹೇಳಿದ ಹಾಗೆ ನವೆಂಬರ್‌ನಿಂದ ಇಲ್ಲಿವರೆಗೆ ಕರ್ನಾಟಕಕ್ಕೆ ಬರಬಹುದಾಗಿದ್ದ 5 ಸಾವಿರ ಕೋಟಿ ರೂ. ಆದಾಯ ತಪ್ಪಿದೆ. ಕರ್ನಾಟಕದ ಮಾತೇ ಇಷ್ಟಾಗಿದ್ದರೆ ದೊಡ್ಡ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚೇ ಇರಲಿದೆ. ಹೀಗಾಗಿಯೇ ರಾಜ್ಯಗಳು ವ್ಯಾಟ್ ಕಡಿತ ಮಾಡಲು ಹಿಂಜರಿಯುತ್ತವೆ ಎಂದು ತಜ್ಞರು ಹೇಳುತ್ತಾರೆ.
Related Articles
(2021ರ ಎಪ್ರಿಲ್‌ನಿಂದ ಡಿಸೆಂಬರ್ ವರೆಗೆ-ಕೋ.ರೂ.ಗಳಲ್ಲಿ)
ಕರ್ನಾಟಕ – 14,182
ತಮಿಳುನಾಡು – 15,291
ಕೇರಳ – 5,977
ಆಂಧ್ರ ಪ್ರದೇಶ – 10,920
ತೆಲಂಗಾಣ – 9,751
ಮಹಾರಾಷ್ಟ್ರ – 24,886
ಮಧ್ಯಪ್ರದೇಶ – 10,279
ರಾಜಸ್ಥಾನ – 13,372
ಉತ್ತರ ಪ್ರದೇಶ – 18,998
ಪಶ್ಚಿಮ ಬಂಗಾಲ – 6,923
Advertisement
ಕರ್ನಾಟಕ ಗುಜರಾತ್ ನಷ್ಟ?ನವೆಂಬರ್ ತಿಂಗಳಲ್ಲಿ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ವ್ಯಾಟ್ ಕಡಿತ ಮಾಡಿದ್ದರಿಂದ ಕ್ರಮವಾಗಿ 5 ಸಾವಿರ ಮತ್ತು 4 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೂ ಜನರ ಹಿತದೃಷ್ಟಿಯಿಂದ ಈ ರಾಜ್ಯಗಳು ವ್ಯಾಟ್ ಕಡಿತ ಮಾಡಿದ್ದವು. ಉಳಿದ ರಾಜ್ಯಗಳು ಇದೇ ಮಾದರಿ ಅನುಸರಿಸಬಹುದಿತ್ತು ಎಂಬುದು ಪ್ರಧಾನಿ ಮೋದಿ ಅವರ ಅಭಿಪ್ರಾಯವಾಗಿತ್ತು. ರಾಜ್ಯಗಳು ವಿಧಿಸುವ ತೆರಿಗೆ (ಎಲ್ಲ ರೂ.ಗಳಲ್ಲಿ)
ಕರ್ನಾಟಕ 48.1
ತಮಿಳುನಾಡು 48.6
ಕೇರಳ 50.2
ಆಂಧ್ರ ಪ್ರದೇಶ 52.4
ತೆಲಂಗಾಣ 51.6
ಮಹಾರಾಷ್ಟ್ರ 52.5
ಮಧ್ಯ ಪ್ರದೇಶ 50.6
ರಾಜಸ್ಥಾನ 50.8
ಉತ್ತರ ಪ್ರದೇಶ 45.2
ಪಶ್ಚಿಮ ಬಂಗಾಲ 48.8 ದರ ಕಡಿಮೆ ಮಾಡಿದ್ದ ರಾಜ್ಯಗಳು
ಕೇಂದ್ರ ಸರಕಾರದ ಮನವಿ ಮೇರೆಗೆ ಆಗ ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಗೋವಾ, ಉತ್ತರಾಖಂಡ, ಅಸ್ಸಾಂ, ಮಣಿಪುರ, ತ್ರಿಪುರಾ, ಬಿಹಾರ ರಾಜ್ಯಗಳು ವ್ಯಾಟ್ ಕಡಿತ ಮಾಡಿದ್ದವು. ವ್ಯಾಟ್ ಕಡಿತಗೊಳಿಸದ ರಾಜ್ಯಗಳು
ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ. ಈ ರಾಜ್ಯಗಳನ್ನೇ ಉಲ್ಲೇಖೀಸಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಇಳಿಕೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಲ, ತೆಲಂಗಾಣ, ಕೇರಳ ಝಾರ್ಖಂಡ್ ರಾಜ್ಯಗಳು ತೆರಿಗೆ ಇಳಿಕೆ ಮಾಡಲು ಒಪ್ಪಲಿಲ್ಲ‡. ಕೇಂದ್ರ ಮತ್ತು ರಾಜ್ಯದ ತೆರಿಗೆ ವಿವರ (ದಿಲ್ಲಿ)(ಪ್ರತೀ ಲೀ.ಗೆ)
ಪೆಟ್ರೋಲ್
ಮೂಲ ಬೆಲೆ- 56.32 ರೂ.
ಸರಕು ಸಾಗಣೆ – 0.20 ರೂ.
ಅಬಕಾರಿ ಸುಂಕ – 27.90 ರೂ.
ಡೀಲರ್ ಕಮಿಷನ್ – 3.86 ರೂ.
ವ್ಯಾಟ್ – 17.13 ರೂ.
(ಡೀಲರ್ ಕಮಿಷನ್ ಮೇಲಿನ ವ್ಯಾಟ್ ಸೇರಿ)
ಒಟ್ಟಾರೆ ಬೆಲೆ- 105.41 ರೂ. ಜಾಗತಿಕ ತೈಲ ಬೆಲೆ (ಪ್ರತೀ ಬ್ಯಾರೆಲ್‌ಗೆ ಡಾಲರ್‌ನಲ್ಲಿ)
2021ರ ಡಿಸೆಂಬರ್ ಪೆಟ್ರೋಲ್ – 85.7
ಡೀಸೆಲ್ – 83.5
2022ರ ಮಾರ್ಚ್
ಪೆಟ್ರೋಲ್ – 127.4
ಡೀಸೆಲ್ – 138.1 ಡೀಸೆಲ್
ಮೂಲ ಬೆಲೆ – 57.94 ರೂ.
ಸರಕು ಸಾಗಣೆ – 0.22 ರೂ.
ಅಬಕಾರಿ ಸುಂಕ – 21.80 ರೂ.
ಡೀಲರ್ ಕಮಿಷನ್ – 2.59 ರೂ.
ವ್ಯಾಟ್ – 14.12 ರೂ.
(ಡೀಲರ್ ಕಮಿಷನ್ ಮೇಲಿನ ವ್ಯಾಟ್ ಸೇರಿ)
ಒಟ್ಟಾರೆ ಬೆಲೆ – 96.67 ರೂ.