Advertisement
ಜ. 7ರಂದು ಪಕ್ಷದ ಪ್ರಮುಖರ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಗಟ್ಟಿ ಧ್ವನಿ ಯಲ್ಲಿ ಈ ಬಗ್ಗೆ ಹೇಳಲಿದ್ದಾರೆ ಎಂದು ಶನಿವಾರ ದೇವೇಗೌಡರು ತಿಳಿಸಿದರು. ವಿಲೀನದ ಕುರಿತು ಪ್ರಸ್ತಾವಿಸಿ, “ಯಾರು ಹಾಗೆ ಭವಿಷ್ಯ ಹೇಳಿರುವುದು? ಇದೊಂದು ಬಾಲಿಶ ಹೇಳಿಕೆ. ಪ್ರಧಾನಿ ಯನ್ನು ಕೊಟ್ಟ ಪಕ್ಷವನ್ನು ಇನ್ನೊಬ್ಬರ ಮನೆ ಬಾಗಿಲಿಗೆ ಒಯ್ಯುತ್ತೇನೆಯೇ? ಸಾಮಾನ್ಯ ಜ್ಞಾನ ಬೇಡವೇ’ ಎಂದು ಸಿಡಿಮಿಡಿಗೊಂಡರು.
ಕಾಂಗ್ರೆಸ್ ವಿರುದ್ಧವೂ ವಾಗ್ಧಾಳಿ ನಡೆಸಿದ ಗೌಡರು, ಕಾಂಗ್ರೆಸ್ ಏನು ಎಂಬುದು ಗೊತ್ತಿದೆ. ಆ ಪಕ್ಷಕ್ಕೆ ಶಕ್ತಿ ತುಂಬಲು ಪ್ರಯತ್ನಿಸಿದ್ದೆ. ಈಗ ನನ್ನ ಬಗ್ಗೆಯೇ ಲಘುವಾಗಿ ಮಾತನಾಡುತ್ತಿದ್ದಾರೆ. ಸಭಾಪತಿ ಸ್ಥಾನದ ಹೆಸರಿನಲ್ಲಿ ನನ್ನ ಜಾತ್ಯತೀತ ನಿಲುವನ್ನು ಪರೀಕ್ಷಿಸುವ ನಾಟಕವಾಡಿದ್ದಾರೆ. ಅಂಥ ಪರೀಕ್ಷೆ ಆಗಿಯೇ ಬಿಡಲಿ, ಅನಂತರ ಏನಾಗು ತ್ತದೆಯೋ ನೋಡೋಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.