Advertisement

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

12:13 AM Apr 24, 2024 | Team Udayavani |

ಬಸ್ರೂರು: ಬಸ್ರೂರು ಐತಿಹಾಸಿಕ ನಾಡು; ಇಲ್ಲಿರುವ ಪ್ರತಿಯೊಂದು ಕಲ್ಲುಗಳೂ ಕಥೆ ಹೇಳುತ್ತಿವೆ. ಬಸ್ರೂರು ಬಂದರು ನಗರಿಯಾಗಿತ್ತು ಮಾತ್ರವಲ್ಲದೇ ರಾಜಧಾನಿಯೂ ಆಗಿತ್ತು. ಇದಕ್ಕೆಲ್ಲ ಸಾಕ್ಷಿ ಹೇಳುವ ಹಲವಾರು ಶಿಲಾ ಶಾಸನಗಳು ಇಲ್ಲಿವೆ. ಆದರೆ ಅವೆಲ್ಲ ಈಗಲೂ ಬಚ್ಚಲು ಮನೆಯ ಕಲ್ಲುಗಳಾಗಿಯೇ ಉಳಿದಿವೆ ಎಂದರೆ ಆಶ್ಚರ್ಯವಾಗಬಹುದು.

Advertisement

ಇಲ್ಲಿ ನೂರಾರು ವರ್ಷಗಳ ಹಿಂದೆ ಆಳಿದ ರಾಜ ಮಹಾರಾಜರು ಬರೆಸಿದ ಶಿಲಾ ಶಾಸನಗಳನ್ನು ಇವೆ. ಆದರೆ ಅವುಗಳನ್ನು ಸರಿಯಾಗಿ ಉಳಿಸಿಕೊಂಡಿಲ್ಲ.

ಶ್ರೀ ಶಾರದಾ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ| ಕನರಾಡಿ ವಾದಿರಾಜ ಭಟ್‌ ಅವರು ಕೆಲವು ವರ್ಷಗಳ ಹಿಂದೆ 10 ಶಿಲಾ ಶಾಸನಗಳನ್ನು ಗೊಬ್ಬರದ ಗುಂಡಿ, ಚರಂಡಿ, ಒಗೆಯುವ ಕಲ್ಲು ಇತ್ಯಾದಿಗಳಿಂದ ಬಿಡಿಸಿ ತಂದು ಕಾಲೇಜಿನಲ್ಲಿ ಸಂರಕ್ಷಿಸಿದ್ದಾರೆ. ದುರಂತವೆಂದರೆ ಇದರ ಮಹತ್ವ ಅರಿಯದ ಯಾರೋ ಒಬ್ಬರು ಇತ್ತೀಚೆಗೆ 4 ಶಿಲಾಶಾಸನಗಳನ್ನು ಕಾಲೇಜಿನ ಮೈದಾನಕ್ಕೆ ತಂದು ಹಾಕಿದ್ದಾರೆ.

ಡಾ| ಪಿ.ಎನ್‌. ಗುರುಮೂರ್ತಿ ಅವರು ಬಸ್ರೂರಿನ ಶಿಲಾ ಶಾಸನಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. 1928ರ ಅನಂತರ 50 ವರ್ಷಗಳ ಕಾಲ ಶಿಲಾ ಶಾಸನಗಳ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ. ನಖರದವರು, ಹಲರು, ಸೆಟ್ಟಿಕಾರರು ಮತ್ತು ಹಂಜಮಾನರ ಉಲ್ಲೇಖ ಇಲ್ಲಿನ ಶಾಸನಗಳಲ್ಲಿದೆ.

ಇಲ್ಲಿ ದೊರೆತಿರುವ ಶಾಸನ ಗಳಿಂದಲೇ ಇದೊಂದು ಖ್ಯಾತ ಬಂದರು ಪ್ರದೇಶವಾಗಿತ್ತು ಎಂದುತಿಳಿದು ಬರುತ್ತದೆ. ಇಲ್ಲಿನ ಅರ್ಥಿಕ ಸ್ಥಿತಿಗತಿ ಬಗ್ಗೆ ಯಾವುದೇ ಶಾಸನಗಳ ಮಾಹಿತಿ ಸಾಲದಾಗಿದೆ. ಇಲ್ಲಿಗೆ ಬರುತ್ತಿದ್ದ ಹಡಗು, ನಾವೆ, ಆಮದು ವ್ಯವಹಾರದ ಬಗ್ಗೆ ಇನ್ನೂ ಶಾಸನಗಳ ಉಲ್ಲೇಖ ದೊರೆತಿಲ್ಲ.

Advertisement

ವೀರಗಲ್ಲು, ಮಾಸ್ತಿಗಲ್ಲು, ವೀರಕಂಬ, ವಿಜಯನಗರ ಕಲ್ಲು ಇತ್ಯಾದಿಗಳೂ ಇಲ್ಲಿವೆ. ಬಸೂÅರಿನ ಆಸುಪಾಸಿನಲ್ಲಿ ಇರುವ 40ಕ್ಕೂ ಹೆಚ್ಚು ಶಾಸನಗಳನ್ನು ಪತ್ತೆಹಚ್ಚಿ ಸಂರಕ್ಷಿಸಿ ಇಡಬೇಕು ಎನ್ನುವುದು ಇತಿಹಾಸ ಆಸಕ್ತರ ಆಗ್ರಹವಾಗಿದೆ.

ಬಸ್ರೂರು ಒಂದು ರಾಜಧಾನಿಯಾಗಿ ಗುರುತಿಸಿಕೊಂಡಷ್ಟೇ ಖ್ಯಾತ ಬಂದರು ಪ್ರದೇಶವಾಗಿತ್ತು. ಮುಖ್ಯವಾಗಿ ಅಳುಪರು, ವಿಜಯನಗರ ರಾಜರು ಅಳ್ವಿಕೆ ಮಾಡಿದ್ದರು. ಬಸೂÅರಿನ ಶಾರದಾ ಕಾಲೇಜಿನಲ್ಲಿ ಸುಮಾರು 10 ಶಿಲಾ ಶಾಸನಗಳನ್ನು ಈಗಾಗಲೇ ರಕ್ಷಿಸಿ ಇಡಲಾಗಿದೆ. 40ಕ್ಕೂ ಹೆಚ್ಚು ಶಿಲಾ ಶಾಸನಗಳು ಈ ಪ್ರದೇಶದಲ್ಲಿದ್ದು ಅವುಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ ಹಾಗೂ ಅವುಗಳನ್ನು ಒಂದೆಡೆ ಸೇರಿಸಿಡಬೇಕಾದ ಆವಶ್ಯಕತೆ ಇದೆ.
– ಡಾ| ಕನರಾಡಿ ವಾದಿರಾಜ ಭಟ್‌, ನಿವೃತ್ತ ಉಪನ್ಯಾಸಕರು

ಪ್ರಸ್ತುತ ಎಲ್ಲೆಲ್ಲೋ ಬಿದ್ದಿರುವ ಅಪೂರ್ವ ಶಿಲಾ ಶಾಸನಗಳು ಮುಂದಿನ ತಲೆಮಾರಿಗೆ ಇತಿಹಾಸದ ಕುರುಹುಗಳಾಗಿದ್ದು ಇವುಗಳ ರಕ್ಷಣೆ ಮುಖ್ಯವಾಗಿದೆ. ಬಸ್ರೂರಿನ ಶಿಲಾ ಶಾಸನಗಳೆಲ್ಲವನ್ನು ಒಂದೆಡೆ ಸೇರಿಸಿ ಇಡುವುದಕ್ಕೆ ಗ್ರಾವ ಪಂಚಾಯತ್‌ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು.
– ಬೇಳೂರು ದಿನಕರ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ. ಬಸ್ರೂರು

ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next