ಕೊಲಂಬೊ: ಏಷ್ಯಾ ಕಪ್ 2023ರ ಕೂಟವು ಇದೀಗ ಅಂತ್ಯವಾಗುವ ಸಂದರ್ಭ ಬಂದಿದೆ. ಸೂಪರ್ ಫೋರ್ ಹಂತದಲ್ಲಿ ಕೊನೆಯ ಎರಡು ಪಂದ್ಯಗಳು ನಡೆಯಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆ.
ಸೂಪರ್ ಫೋರ್ ಹಂತದಲ್ಲಿ ಸತತ ಎರಡು ಪಂದ್ಯ ಗೆದ್ದಿರುವ ಭಾರತ ತಂಡವು ಈಗಾಗಲೇ ಫೈನಲ್ ತಲುಪಿದೆ. ಮತ್ತೊಂದು ಸ್ಥಾನಕ್ಕೆ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ನಡುವೆ ಪೈಪೋಟಿಯಿದೆ.
ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ತಮ್ಮ ಸೂಪರ್ ಫೋರ್ ಹಂತದ ಅಂತಿಮ ಪಂದ್ಯವಾಡುತ್ತಿದೆ. ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿದೆ. ಹೀಗಾಗಿ ಇದು ಅನಧಿಕೃತ ಸೆಮಿ ಫೈನಲ್ ಕಾದಾಟವಾಗಿರಲಿದೆ.
ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು ಪಂದ್ಯ ನಡೆಯಲಿದೆ. ಕೊಲಂಬೊದಲ್ಲಿ ಮಳೆಯ ಭೀತಿ ಇನ್ನೂ ಮುಂದುವರಿದಿದೆ. ಒಂದು ಮಳೆ ಇಂದಿನ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾದರೆ ಶ್ರೀಲಂಕಾ ತಂಡವು ಇದರ ಲಾಭ ಪಡೆಯಲಿದೆ.
ಇದನ್ನೂ ಓದಿ:Drought ; ಉಡುಪಿ ಜಿಲ್ಲೆಯ ಕಾರ್ಕಳ ಸೇರಿ ರಾಜ್ಯದ 161 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ
ಸೂಪರ್ ಫೋರ್ ಹಂತದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದು ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಆದರೆ ಶ್ರೀಲಂಕಾದ ನೆಟ್ ರನ್ ರೇಟ್ ಪಾಕ್ ಗಿಂತ ಉತ್ತಮವಾಗಿದೆ. ಹೀಗಾಗಿ ಪಂದ್ಯ ರದ್ದಾದರೆ ಲಂಕಾ ಫೈನಲ್ ಗೆ ಲಗ್ಗೆಯಿಡಲಿದೆ.