Advertisement

ವುಹಾನ್‌ ಸಂಶೋಧಕರಿಗೇ ಮೊದಲ ಕೋವಿಡ್ ಸೋಂಕು?

02:21 AM May 25, 2021 | Team Udayavani |

ವಾಷಿಂಗ್ಟನ್‌/ ಬೀಜಿಂಗ್‌: ಜಗದಗಲ ವ್ಯಾಪಿಸಿರುವ ಕೊರೊನಾ ವೈರಸ್‌ ಚೀನದ ವುಹಾನ್‌ ಲ್ಯಾಬ್‌ ನಲ್ಲೇ ಸೃಷ್ಟಿಯಾಗಿದೆ ಎಂಬ ವಾದಕ್ಕೆ ಪುಷ್ಟಿ ನೀಡುವಂಥ ಮತ್ತೂಂದು ಅಂಶ ಬಹಿರಂಗವಾಗಿದೆ.

Advertisement

ಕೋವಿಡ್‌-19 ಸೋಂಕಿನ ವಿಚಾರವನ್ನು ಚೀನ ಬಹಿರಂಗ ಪಡಿಸುವುದಕ್ಕೂ ಮುನ್ನವೇ ವುಹಾನ್‌ ಪ್ರಯೋಗಾಲಯದ ಮೂವರು ಸಂಶೋಧಕರು ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದಿದ್ದರು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. 2019 ನವೆಂಬರ್‌ ನಲ್ಲೇ ಈ ಸಂಶೋಧಕರು ಚಿಕಿತ್ಸೆ ಪಡೆದಿರುವ ದಾಖಲೆಗಳನ್ನು ಉಲ್ಲೇಖೀಸಿ “ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ
ಮಂಡ ಳಿಯ ಸಭೆಗೂ ಮುನ್ನ ಈ ಸುದ್ದಿ ಸ್ಫೋಟ ಗೊಂಡಿದೆ. ಕೊರೊನಾ ಸೋಂಕಿನ ಮೂಲ ಯಾವುದು ಎಂಬ ಕುರಿತು 2ನೇ ಹಂತದ ತನಿಖೆಗೆ ಆದೇಶ ನೀಡುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಒಂದು ಹಂತದ ತನಿಖೆ ನಡೆಸಿದ್ದು, ಕೊರೊನಾ ಸೋಂಕು ಲ್ಯಾಬ್‌ ನಿಂದ ಸೋರಿಕೆಯಾಗಿದೆ ಎನ್ನುವುದಕ್ಕೆ ಸೂಕ್ತ ಪುರಾವೆ ದೊರೆತಿಲ್ಲ ಎಂದಿದೆ. ಆದರೆ ಅಮೆರಿಕ, ನಾರ್ವೆ, ಕೆನಡ, ಬ್ರಿಟನ್‌ ಸಹಿತ ಹಲವು ದೇಶಗಳು ಈ ಕುರಿತು ಮತ್ತಷ್ಟು ತನಿಖೆಗೆ ಆಗ್ರಹಿಸಿವೆ.

ತಿಂಗಳು ಮೊದಲು ಚಿಕಿತ್ಸೆ
ಚೀನ ಸರಕಾರವು ತನ್ನಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಜಗಜ್ಜಾಹೀರು ಮಾಡಿದ್ದು 2019ರ ಡಿಸೆಂಬರ್‌ ನಲ್ಲಿ. ಆದರೆ ಅದಕ್ಕೂ ಒಂದು ತಿಂಗಳ ಮುನ್ನ, 2019ರ ನವೆಂಬರ್‌  ನಲ್ಲೇ ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾ ಲಜಿಯ ಮೂವರು ಸಂಶೋಧಕರಿಗೆ ಜ್ವರ ಬಂದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು ಎಂದು ಅಮೆರಿಕದ ಗುಪ್ತ ಚರ ವರದಿ ತಿಳಿಸಿತ್ತು. ಅಲ್ಲದೆ ಲ್ಯಾಬ್‌ ನಲ್ಲಿರುವ ಹಲವು ಸಿಬಂದಿ ಅನಾರೋಗ್ಯಕ್ಕೀಡಾಗಿದ್ದು, ಅವರ ಸಂಖ್ಯೆ ಎಷ್ಟು ಎಂಬ ನಿಖರ ಮಾಹಿತಿ ಸಿಕ್ಕಿಲ್ಲ ಎಂದೂ ಹೇಳ ಲಾಗಿತ್ತು.

Advertisement

ಅಲ್ಲಗಳೆದ ಚೀನ
ವಾಲ್‌ ಸ್ಟ್ರೀಟ್‌ ಜರ್ನಲ್‌ನ ವರದಿಯನ್ನು ಚೀನ ಅಲ್ಲಗಳೆದಿದೆ. ಅಮೆರಿಕವುವೈಭ ವೀಕೃತ ವರದಿ ಮಾಡುತ್ತಿದೆ. ಸೋಂಕು ಬಹಿರಂಗವಾಗುವುದಕ್ಕೂ ಮುನ್ನ ಚೀನದ ಸಂಶೋಧಕರು ಕೊರೊ ನಾಕ್ಕೆ ಚಿಕಿತ್ಸೆ ಪಡೆದಿದ್ದರು ಎಂಬ ಸುದ್ದಿ ಸತ್ಯಕ್ಕೆ ದೂರ ವಾದದ್ದು ಎಂದು ಚೀನದ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯನ್‌ ಹೇಳಿದ್ದಾರೆ. ಜತೆಗೆ ಅಮೆರಿಕಕ್ಕೆ ನಿಜಕ್ಕೂ ಕೊರೊನಾದ ಮೂಲ ಕಂಡು ಹಿಡಿಯುವ ಉದ್ದೇಶ ವಿದೆಯೋ ಅಥವಾ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿದೆಯೋ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಕೊರೊನಾ ಮೂಲದ ಬಗ್ಗೆ ಬೈಡನ್‌ ಆಡಳಿತಕ್ಕೂ ಗಂಭೀರ ಪ್ರಶ್ನೆಗಳು ಮೂಡಿವೆ. ಈ ಕುರಿತು ತಜ್ಞರಿಂದ ಯಾವುದೇ ಹಸ್ತ ಕ್ಷೇಪವಿಲ್ಲದ ನಿಷ್ಪಕ್ಷ ತನಿಖೆ ನಡೆಯಬೇಕೆಂದು ಬಯಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಯುತ್ತಿದೆ.
– ಎಮಿಲಿ ಹಾರ್ನ್, ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next