Advertisement
ದೇಶಾದ್ಯಂತ ಕೋವಿಡ್ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಿದ ಎರಡು ದಿನದ ನಂತರದ ಫ್ಯಾಕ್ಟ್ ಚೆಕ್ ಬಳಿಕ ಭಾರತ್ ಬಯೋಟೆಕ್ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
- ನೀವು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೀರಾ? ಹೌದು ಎಂದಾದರೆ ಎಷ್ಟು ಸಮಯದಿಂದ ಮತ್ತು ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಬೇಕು. ಈ ನಿಟ್ಟಿನಲ್ಲಿ ಕೆಳಗೆ ನಮೂದಿಸಿದ ಯಾವುದೇ ಲಕ್ಷಣಗಳಿದ್ದರೂ ಲಸಿಕೆ ಪಡೆಯದಂತೆ ಸೂಚನೆ ನೀಡಿದೆ.
- ಯಾವುದೇ ಅಲರ್ಜಿ ಇದ್ದರೆ ಲಸಿಕೆ ತೆಗೆದುಕೊಳ್ಳಬೇಡಿ
- ಜ್ವರದಿಂದ ಬಳಲುತ್ತಿದ್ದರೆ ಲಸಿಕೆ ಹಾಕಿಸಿಕೊಳ್ಳಬೇಡಿ
- ರಕ್ತಸ್ರಾವ ಸಮಸ್ಯೆ ಅಥವಾ ತೆಳು ರಕ್ತ ಹೊಂದಿರುವವರು ಲಸಿಕೆ ತೆಗೆದುಕೊಳ್ಳಬೇಡಿ
- ರೋಗ ನಿರೋಧಕ ಶಕ್ತಿ ಹೊಂದಾಣಿಕೆಯಾಗದ ಅಥವಾ ರೋಗ ನಿರೋಧ ಶಕ್ತಿ ಕಡಿಮೆ ಇದ್ದಲ್ಲಿ ಲಸಿಕೆ ಬೇಡ
- ಗರ್ಭಿಣಿಯರಿಗೆ ಲಸಿಕೆ ಬೇಡ
- ಮಗುವಿಗೆ ಸ್ತನಪಾನ ಮಾಡಿಸುವ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳುವುದು ಬೇಡ
- ಕೋವಿಡ್ 19 ಸೋಂಕಿಗೆ ಬೇರೆ ಲಸಿಕೆ ಹಾಕಿಸಿಕೊಂಡಿದ್ದರೆ ಕೋವ್ಯಾಕ್ಸಿನ್ ಲಸಿಕೆ ಪಡೆಯುವುದು ಬೇಡ