Advertisement

ಎರಡು ಪ್ರಶಸ್ತಿ ಗೆದ್ದ ರಾಹುಲ್: ಈ ಬಾರಿ ಆಲ್ಟ್ರೋಜ್ ಕಾರು ಗೆದ್ದಿದ್ದು ಯಾರು?

01:02 PM Nov 11, 2020 | keerthan |

ದುಬೈ: ಕೋವಿಡ್ -19 ಅಡೆತಡೆಗಳ ನಡುವೆಯೂ ಈ ಬಾರಿಯ ಐಪಿಎಲ್ ಯಶಸ್ವಿಯಾಗಿ ಸಮಾಪ್ತಿಯಾಗಿದೆ. ಮಂಗಳವಾರ ದುಬೈ ಅಂಗಳದಲ್ಲಿ ನಡೆದ ಅಂತಿಮ ಕದನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಮತ್ತೊಮ್ಮೆ ಕಪ್ ತಮ್ಮದಾಗಿಸಿಕೊಂಡಿದೆ.

Advertisement

ಕೂಟದ ಪೂರ್ತಿ ಗಮನ ಸೆಳೆದಿದ್ದ ಆಲ್ಟ್ರೋಜ್ ಕಾರು ಯಾರಿಗೆ ಸಿಕ್ಕಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಆರಂಭವಾಗಿದೆ. ಸೀಸನ್ ನ ಸೂಪರ್ ಸ್ಟ್ರೈಕರ್ ಈ ಕಾರು ನೀಡಲಾಗಿದೆ. ಕೂಟದುದ್ದಕ್ಕೂ ಅತೀ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದ ಮುಂಬೈ ಇಂಡಿಯನ್ಸ್ ನ ಕೈರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ಇತ್ತು. ಆದರೆ ಕೊನೆಯಲ್ಲಿ ಕಾರನ್ನು ಪೊಲಾರ್ಡ್ ತಮ್ಮದಾಗಿಸಿಕೊಂಡರು.

ಉಳಿದ ಪ್ರಶಸ್ತಿ ವಿಜೇತರ ಪಟ್ಟಿ

ಆರೆಂಜ್ ಕ್ಯಾಪ್: ಕೆ ಎಲ್ ರಾಹುಲ್ (ಪಂಜಾಬ್)

ಪರ್ಪಲ್ ಕ್ಯಾಪ್: ಕಗಿಸೋ ರಬಾಡ (ಡೆಲ್ಲಿ)

Advertisement

ವಾಲ್ಯುಯೇಬಲ್ ಪ್ಲೇಯರ್: ಜೋಫ್ರಾ ಆರ್ಚರ್ (ರಾಜಸ್ಥಾನ)

ಪವರ್ ಪ್ಲೇಯರ್ : ಟ್ರಂಟ್ ಬೌಲ್ಟ್ (ಮುಂಬೈ)

ಅತೀ ಹೆಚ್ಚು ಸಿಕ್ಸ್: ಇಶಾನ್ ಕಿಶಾನ್ (ಮುಂಬೈ)

ಗೇಮ್ ಚೇಂಜರ್ : ಕೆ ಎಲ್ ರಾಹುಲ್ (ಪಂಜಾಬ್)

ಫೇರ್ ಪ್ಲೇ: ಮುಂಬೈ ಇಂಡಿಯನ್ಸ್

ಎಮರ್ಜಿಂಗ್ ಪ್ಲೇಯರ್ : ದೇವದತ್ತ್ ಪಡಿಕ್ಕಲ್ (ಆರ್ ಸಿಬಿ)

Advertisement

Udayavani is now on Telegram. Click here to join our channel and stay updated with the latest news.

Next