Advertisement
“ರಾಗವೊಂದನ್ನು ಕಲಿಯಲು ಎಷ್ಟು ದಿನಗಳು ಬೇಕು? ಎಷ್ಟು ದಿನಗಳಲ್ಲಿ ವೇದಿಕೆಯನ್ನೇರಬಹುದು? ರಿಯಾಲಿಟಿ ಷೋಗೆ ತಯಾರು ಮಾಡಬಹುದಾ? ಕಛೇರಿ ಕೊಡುವಷ್ಟೆಲ್ಲ ಬೇಡ, ಸುಮ್ಮನೆ ಸಂಜೆ ಹೊತ್ತು ಒಂದು ತಾಸು ತೊಡಗಿಕೊಂಡಿದ್ದರೆ ಸಾಕು. ನಮ್ಮ ಸಂಬಂಧಿಕರ ಮಗು ಕಲೀತಿದೆ, ಅದಕ್ಕೇ ನಮ್ಮ ಮಗೂನೂ ಕಲೀಲಿ ಅಂತಷ್ಟೇ…’
ಕಲೆ ಅಥವಾ ಸಂಗೀತ ಎನ್ನುವುದು ಸೃಜನಶೀಲ ಒ¨ªಾಟ. ನಮ್ಮೊ ಳಗಿನ ಗದ್ದಲವ ಕಡೆದು ಶಬ್ದವನ್ನಾಗಿಸಿ ಮಳಲಿದ ನಾದವನ್ನಷ್ಟೇ ಎತ್ತಿ ಮತ್ತೆಮತ್ತೆ ಅದನ್ನು ಸೀಳುವುದು, ಆ ಸೀಳಿನೊಳಗೆ ಹೊಮ್ಮಿದ ಸುರೀಲಿ ಪದರವನ್ನಷ್ಟೇ ಎದೆಗಂಟಿಸಿಕೊಂಡು ನಿರಂತರ ಅನು ಸಂಧಾನಕ್ಕಿಳಿಯುವುದು ಮತ್ತು ಪ್ರಸ್ತುತಿಯ ಮೂಲಕ ಸಂವಾದ ಕ್ಕಿಳಿಯುವುದು; ಕಲಾವಿದರು ಯಾವ ಕಾಲದÇÉೇ ಇರಲಿ ಯಾವ ದೇಶದÇÉೇ ಇರಲಿ, ಅಡಿಗಡಿಗೂ ಈ ಗಡಿಗೆಯೊಳಗೆ ಮಥನಕ್ಕಿಳಿ ಯಲೇಬೇಕಾಗುತ್ತದೆ. ಇದೇ ಅವರ ರೀತಿಯೂ ನೀತಿಯೂ ಪ್ರೀತಿಯೂ ಮತ್ತು ತೀವ್ರತುಡಿತದ ಸಂಕೀರ್ಣತೆಯೂ.
Related Articles
Advertisement
ಹೀಗೆ ರಿಯಾಝ್ನ ಈ ಅಮೂರ್ತ ಪರಿ ವಿವರಿಸಿಬಿಟ್ಟರೆ, ವೇಗಯುಗದ ವಿದ್ಯಾಕಾಂಕ್ಷಿಗಳಿಗೆ ಅರ್ಥವಾಗುವುದೆ? ಹಾಗಾ ದರೆ, ಕನಿಷ್ಟ ಅರ್ಹತೆಯುಳ್ಳ ಸಂಗೀತಾಸಕ್ತರು ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲವೆ? ಕಲಾವಂತ ಕುಟುಂಬದವರು ಮಾತ್ರ ಅರ್ಹರೆ? ಗುರುಕುಲ ಪದ್ಧತಿಯಲ್ಲಿದ್ದು ಎಂಟØತ್ತು ತಾಸು ರಿಯಾಝ್ ಮಾಡಿದರಷ್ಟೇ ಸಂಗೀತ ಒಲಿ ಯುವುದೆ? ಇಂಥ ಪ್ರಶ್ನೆಗಳು ಅದೆಷ್ಟು ವರ್ಷಗಳಿಂದ ಅದೆಷ್ಟು ಜನರನ್ನು ಇನ್ನೂ ಕಾಡುತ್ತಿಲ್ಲ? ಇನ್ನು, ತಲೆಮಾರುಗಳಿಂದ ಅದದೇ ಖಯಾಲ್, ಪುನರಾ ವರ್ತಿತ ಆಲಾಪ, ತಾನುಗಳ ವೈಖರಿಯನ್ನು ಅದೆಷ್ಟಂತ ಕೇಳು ವುದು? ಅದಕ್ಕಾಗಿ ಕಛೇರಿಗಳಿಗೇ ಯಾಕೆ ಹೋಗಬೇಕು ಎಂಬ ಸಣ್ಣ ನಿರಾಸಕ್ತಿಯ ಎಳೆ ಎಂಥ ಶ್ರದ್ಧಾವಂತ ಕೇಳುಗನಲ್ಲಿಯೂ ಒಂದಿÇÉಾ ಒಂದು ಸಲ ಹಾಯ್ದು ಹೋಗೇ ಹೋಗುತ್ತದೆ. ಹೀಗಾಗಿಯೇ ಆಸ್ವಾದಕರೂ ಕೂಡ ಒಂದು ಹಂತದ ನಂತರ ನಾದದ ಹೊಸ ಪುಳಕಗಳ ಹುಡುಕಾಟಕ್ಕೆ ತೊಡಗುತ್ತಾರೆ. ಅಂತೆಯೇ ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಭವಿಷ್ಯದ ಕಲಾವಿದರನ್ನು ಮತ್ತು ಕೇಳುಗರನ್ನೂ ಸೃಷ್ಟಿಸುವ ಜವಾಬ್ದಾರಿ ಇಂದಿನ ಕಲಾವಿದರಿಗೆ ಸವಾಲೇ. ಹಾಗಾಗಿ ಕಲಾವಿದರೇ ಆಯೋಜಕರೂ ಆಗುತ್ತಿ¨ªಾರೆನ್ನುವುದು ಒಳ್ಳೆಯ ಬೆಳವಣಿಗೆಯೇ ಆದರೂ ಇದು ಎಲ್ಲ ಕಲಾವಿದರಿಗೂ ಸಾಧ್ಯವಾಗುತ್ತಿಲ್ಲ, ಯಾಕೆ? ಇಂದು ಮುಂಚೂಣಿಯಲ್ಲಿರುವ ಕೆಲವರು ಕಲಿಕಾ ತಂತ್ರಗಳನ್ನು ಸ್ವಂತಕ್ಕೆ ಮಾತ್ರ ಸಿದ್ಧಿಸಿಕೊಂಡು ಯಶಸ್ಸು ಸಾಧಿ ಸುತ್ತಿ¨ªಾರೆ, ಆದರೆ ಕಲೆಯನ್ನು ಸಾಮಾಜಿಕ ದೃಷ್ಟಿಕೋನ
ದಿಂದಲೇ ನೋಡಬೇಕಲ್ಲ, ಸಮಾಜವು ಕೊಡುಗೆಯ ರೂಪದಲ್ಲಿ ಕಲಾವಿದರನ್ನು ಸ್ವೀಕರಿಸಿದೆ ಎಂದಮೇಲೆ? ಇದಕ್ಕೆ ಉತ್ತರವೆಂಬಂತಿ¨ªಾರೆ ಧಾರವಾಡದ ಹಿಂದೂಸ್ತಾನಿ ಕಲಾವಿದ ಪಂಡಿತ್ ಕೈವಲ್ಯಕುಮಾರ್ ಗುರವ್. ಇಡೀ ದೇಶದಲ್ಲಿ “ಶಾಸ್ತ್ರೀಯ ಸಂಗೀತ-ಧ್ವನಿ ಸಂಸ್ಕಾರ’ ತರಬೇತಿ ನೀಡುತ್ತಿರುವ ಏಕೈಕ ಕಲಾವಿದರಿವರು. ಧಾರವಾಡದ ಅವರ ಮನೆಯಲ್ಲಿ ಭೇಟಿಯಾದ ಸಂಜೆ, ವಿದ್ಯಾರ್ಥಿನಿಯೊಬ್ಬರಿಗೆ ಯಮನ್ ಹೇಳಿಕೊಡುತ್ತಿದ್ದರು. ಮುಕ್ಕಾಲು ತಾಸಿನ ನಂತರ ಆಕೆ ಹೊರಟರು. ನೋಡಿ ಹೀಗೆ ಸಿಗುವ ತಾಸು-ಅರ್ಧತಾಸಿನೊಳಗೇ ನಾವು ಕಲಿಸಬೇಕು, ಕಲಿಯಬೇಕು ಪ್ರಸ್ತುತಿಯನ್ನೂ ಮಾಡಬೇಕು. ಇಂದು ನಮಗಿರುವುದು ಸಣ್ಣ ಆಯಸ್ಸು, ಕವಲೊಡೆದ ಗುರಿಗಳು ಮತ್ತವುಗಳನ್ನು ತಲುಪುವ ಧಾವಂತ. ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡೇ ಶಾಸ್ತ್ರೀಯ ಕಲೆಗಳನ್ನು ಕಲಿಸಬೇಕು. ಅದಕ್ಕಾಗಿ ಮೊದಲು ನಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು. ಶಾಲೆ- ಕಾಲೇಜು- ಉದ್ಯೋಗ- ಸಂಸಾರದ ಜತೆಜತೆಗೇ ಜನ ಆಸಕ್ತಿ ತೋರಿಸುತ್ತಿ¨ªಾರೆ ಎಂದಾಗ, ನಮ್ಮ ಒಳಗನ್ನು ಎÇÉಾ ರೀತಿಯಿಂದ ಹಿಗ್ಗಿಸಿಕೊಳ್ಳಬೇಕು. ಅದಕ್ಕಾಗಿ ಹಳೇ ತಲೆಮಾರಿನ ಸಾಂಪ್ರದಾಯಿಕ ಕಲಿಕಾ ಪದ್ಧತಿಯನ್ನು ಮೊಟಕುಗೊಳಿಸಲೇಬೇಕು.
“”ಸುಮಾರು ಹತ್ತು ವರ್ಷದವನಾಗಿ¨ªಾಗ ಒಮ್ಮೆ ಪ್ರಸಿದ್ಧ ಗಾಯಕರೊಬ್ಬರ ಕಛೇರಿಗೆ ಹೋಗಿ¨ªೆ. ಅಕ್ರಾಳವಿಕ್ರಾಳ ಮುಖ ಮಾಡಿ ಹಾಡುತ್ತಿದ್ದರು. “ಶಾಸ್ತ್ರೀಯ ಸಂಗೀತವೆಂದರೆ ಇಷ್ಟು ಕಷ್ಟ¨ªಾ?’ ಎಂದು ತಂದೆಯವರಿಗೆ ಕೇಳಿದ್ದಕ್ಕೆ, “ಹೌದು ಮಾರಾಯಾ ಇದು ಭಾಳಾ ಕಠಿಣ ಎಲ್ಲರಿಗೂ ಒಲಿಯೂದಿಲ್ಲ’ ಅಂತೆಲ್ಲ ಹೇಳಿದ್ದರು. ಅಯ್ಯೋ ಇದರ ಸಹವಾಸವೇ ಬೇಡ ಎಂದು ಇಪ್ಪತ್ತೂಂದು ವರ್ಷ ತುಂಬುವವರೆಗೂ ಲಘು, ಸಿನೆಮಾ, ಪಾಪ್ ರ್ಯಾಪ್ ಹಾಡಿಕೊಂಡು ಬಹುಮಾನಗಳನ್ನು ಪಡೆದುಕೊಂಡಿ¨ªೆ. ಒಂದು ದಿನ ತಂದೆಯ ಸ್ನೇಹಿತ ದಾಂಡೇಕರ್, “ನೀ ಯಾಕೆ ಶಾಸ್ತ್ರೀಯ ಸಂಗೀತ ಕಲಿಯಬಾರದು?’ ಎಂದರು. ಹೌದೆನಿಸಿ ತಂದೆಯವರಿಗೆ (ಪಂಡಿತ್ ಸಂಗಮೇಶ್ವರ ಗುರವ) ಹೇಳಿಕೊಡು ವಂತೆ ಕೇಳಿಕೊಂಡೆ. ಅರ್ಥವಾಗದ್ದನ್ನು ಕೇಳಿದಾಗೆಲ್ಲ, “ಕೇಳ್ತಾ, ರಿಯಾಝ… ಮಾಡ್ತಾ ಹೋಗು ನಿನ್ ನಿನಗ ಅರ್ಥ ಆಗ್ತದ’ ಎಂದು ಹೇಳುವುದೇ ಅವರ ನಿರಂತರ ಮಂತ್ರವಾಗಿತ್ತು. ಕ್ರಮೇಣ ತಾಕಲಾಟ ಹೆಚ್ಚಾಗಿ, ನಮ್ಮ ಮನೆಗೆ ಬರುತ್ತಿದ್ದ (ಮದಿಹಾಳದಲ್ಲಿದ್ದ ದತ್ತ ಪರಂಪರೆಯ ಆಶ್ರಮದ) ಗುರುಗಳನ್ನು ಕಂಡೆ. ಸುಮಾರು ಎರಡು ವರ್ಷಗಳ ತನಕ ಅವರೊಂದಿಗಿದ್ದು ಕೇವಲ ಓಂಕಾರ ಸಾಧನೆ ಮಾಡಿದೆ. ಅಲ್ಲಿಗೆ ಎಂಜಿನಿಯರಿಂಗ್ ಪಕ್ಕಕ್ಕೆ ಸರಿಯಿತು. ಶಾಸ್ತ್ರೀಯ ಸಂಗೀತದ ಅಮಲು ಪುಣೆ, ಮುಂಬೈನ ನಂಟು ಬೆಳೆಸಿತು. ಸಂಪೂರ್ಣ ಕಛೇರಿಗಳಲ್ಲಿ ಮುಳು ಗಿದೆ. ಆಗಲೇ ಧ್ವನಿಸಂಸ್ಕಾರದ ಬಗ್ಗೆ ನನ್ನೊಳಗೇ ನಡೆಯುತ್ತಿದ್ದ ಸಂಶೋಧನೆಗೆ ಒಂದು ರೂಪು ಕೊಡಬೇಕು ಎಂದು ನಿರ್ಧರಿಸಿದೆ. ಈ ಮೂಲಕ ಧ್ವನಿಸಂಸ್ಕಾರವು ಅತ್ಯಂತ ಖಾಸಗಿ ಮತ್ತು ಸ್ವಯಂ ಸಿದ್ಧಿಗೆ ಸಂಬಂಧಿಸಿದ್ದು ಎನ್ನುವ ಹಳೇ ನಂಬಿಕೆಯನ್ನು ಕಾರ್ಯಾ ಗಾರಗಳ ಮೂಲಕ ಮುರಿಯುತ್ತ ಬಂದೆ. ಇಂದು ದೇಶವಿದೇಶ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಾಯೋಗಿಕ ಪ್ರಯೋಜನ ಪಡೆದುಕೊಳ್ಳುತ್ತಿ¨ªಾರೆ. ಲೀಲಾಜಾಲವಾಗಿ ಮೂರು ಸ್ಥಾಯಿಗಳಲ್ಲಿ ಸಂಚರಿಸುತ್ತ ಸುಶ್ರಾವ್ಯವಾಗಿ ಭಾವಪೂರ್ಣವಾಗಿ ರಾಗವನ್ನು ಕಟ್ಟಿಕೊಡುವುದನ್ನು ಸಾಧಿಸಿಕೊಂಡಿ¨ªಾರೆ. ರಿಯಾಲಿಟಿ ಷೋ ಮತ್ತು ಅನೇಕ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಲಿ¨ªಾರೆ. ಒಂದು ವಾರದ ಅವಧಿಯ ಈ ಕಾರ್ಯಾಗಾರಕ್ಕೆ ಯೋಗ, ಪ್ರಾಣಾಯಾಮ ಮತ್ತು ಓಂಕಾರ ಸಾಧನೆಯೇ ತಳಪಾಯ. ದಿನದ ಅರ್ಧಗಂಟೆಯನ್ನು ಧ್ವನಿ ಸಂಸ್ಕರಿಸಿಕೊಳ್ಳಲು ಮೀಸಲಿಟ್ಟರೆ ಸಾಕು, ಶಾರೀರ ತನ್ನಿಂತಾನೇ ಹದಗೊಂಡುಬಿಡುತ್ತದೆ. ಆಮೇಲೆ, ಶಿಷ್ಯ ಎಂದರೆ ಗುರುವಿನ ನಕಲಲ್ಲ. ಪ್ರತಿಯೊಬ್ಬ ರದೂ ಪ್ರತ್ಯೇಕ ವ್ಯಕ್ತಿತ್ವ. ಗುರುವಾದವರು ಮೊದಲಿಗೇ ಸ್ಪಷ್ಟವಾಗಿ ಹೇಳಿಬಿಡಬೇಕು, ನನ್ನ ದನಿ-ಬಾನಿ-ಹಾವ-ಭಾವವನ್ನು ಅನುಕರಿ ಸದೇ ನಿನ್ನ ಒಳಗನ್ನು ಗಮನಿಸಿಕೋ, ನಿನ್ನದೇ ಸ್ವತಂತ್ರ ಶೈಲಿ ವೃದ್ಧಿಸಿಕೋ ಎಂದು. ಏಕೆಂದರೆ ಒಂದು ಮರದ ಕೆಳಗೆ ಇನ್ನೊಂದು ಮರ ಬೆಳೆಯದು ನೋಡಿ?” ಇದು ಕೈವಲ್ಯಕುಮಾರರ ಸ್ಪಷ್ಟ ನೇರ ಮತ್ತು ಮುನ್ನೋಟದ ಹಾದಿ. ನಿಜ. ಇನ್ನಾÂರೋ ಬಂದು ನಮ್ಮನ್ನು ಉದ್ಧರಿಸುವುದಿಲ್ಲ. ರಚನಾ ತ್ಮಕ ವಾಗಿ ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಮಾತ್ರ, ಸಂಪ್ರ ದಾಯ ಎಂಬ ಕೋಶ ಒಡೆದು ಹೊರಬರುತ್ತೇವೆ. ಕೆ ವಿ ಸುಬ್ಬಣ್ಣ, ಇಪ್ಪತ್ತು ವರ್ಷಗಳ ಹಿಂದೆ ಹೇಳಿದ್ದು ಇಂದಿಗೂ ಪ್ರಸ್ತುತ. “ಕುಶಲರಾದ ನಮ್ಮ ತರುಣರಲ್ಲಿ ಪರಂಪರೆಯ ಬಗ್ಗೆ ಆಸಕ್ತಿಯೂ ಅನುಮಾನವೂ ಅತೃಪ್ತಿ ಅಸಹನೆಗಳು ಒಟ್ಟೊಟ್ಟಿಗೆ ಬೆಳೆಯುತ್ತಿರುವುದೇ ಒಳ್ಳೆಯ ಸೂಚನೆ. ಇದು ಅವರ ಸಂವೇ ದನೆಯ ಜೀವಂತಿಕೆಗೆ ದೊಡ್ಡ ಸಾಕ್ಷಿ’. ನಿಜ, ಹೀಗೊಂದು ಸಂಘರ್ಷ ವಿ¨ªಾಗಲೇ ಹೊಸತು ಹುಟ್ಟಿಕೊಳ್ಳುತ್ತದೆ. ಎಂಟØತ್ತು ಸ್ವರಗಳಲ್ಲಿ ಇಡೀ ಜೀವ ತೇಯುವುದೆಂದರೆ ಸಾಮಾನ್ಯವೆ? ನಮಗರಿವಿಲ್ಲದೆ ನಿರ್ಮಾಣಗೊಳ್ಳುವ ಚೌಕಟ್ಟುಗಳನ್ನು ಬುದ್ಧಿ, ಭಾವದಿಂದ ಸ್ಥಿತಪ್ರಜ್ಞರಾಗಿ ನಿರಂತರ ಭೇದಿಸುತ್ತಲೇ ಇರಬೇಕು. ಅಂದಾಗ ಮಾತ್ರ ಸಮಕಾಲೀನಕ್ಕೆ ಸ್ಪಂದಿಸುವ, ಸಂಪ್ರದಾಯವನ್ನು ಪ್ರಶ್ನಿ
ಸುವ, ಅವಶ್ಯವೆನ್ನಿಸಿದಲ್ಲಿ ಅದನ್ನು ಮೀರುವ ಮತ್ತೂ ಹೊಸತನ್ನು ಕಟ್ಟಿಕೊಡುವ ಚಾಕಚಕ್ಯತೆ ನಮ್ಮಲ್ಲಿ ಬೆಳೆಯುತ್ತದೆ. ಆಗ ಹರಿವು ತಾನಾಗೇ ಹೆಚ್ಚುತ್ತದೆ. ಅಂದಹಾಗೆ ಈ ನೀತಿ-ನಿಯಮ, ಪರಂಪರೆ-ಸಂಪ್ರದಾಯದ ಹಗ್ಗಜಗ್ಗಾಟದಲ್ಲಿ ಕಲಾವಿದರು ನಲುಗುವುದುಂಟು. ಈ ನೋವು, ಕಾವು ಇರುವ ಅವಿಶ್ರಾಂತ ಹೋರಾಟದ ಹಾದಿಯÇÉೇ ಕಲೆಯ ಹುಟ್ಟು. ಇಲ್ಲವಾದರೆ ಕಲಾ ಸ್ವಾತಂತ್ರÂದ ರುಚಿ ಕಲಾವಿದರಿಗೆ ದಕ್ಕುವುದಾದರೂ ಹೇಗೆ? – ಶ್ರೀದೇವಿ ಕಳಸದ