Advertisement

ಒಡಿಶಾ ಜನರ ಒಲವು ಯಾರತ್ತ? 

12:30 AM Mar 07, 2019 | |

ಕರಾವಳಿ ರಾಜ್ಯ ಒಡಿಶಾದಲ್ಲಿ ಈ ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯುವ ಸಾಧ್ಯತೆ ಇದೆ. ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳ(ಬಿಜೆಡಿ) ಅಜಮಾಸು 2 ದಶಕಗಳಿಂದ ಅಲ್ಲಿ ಆಡಳಿತದಲ್ಲಿದೆ. ಭಾರತೀಯ ಜನತಾ ಪಾರ್ಟಿ ಒಡಿಶಾದಲ್ಲಿ ತನ್ನ ಛಾಪು ಮೂಡಿಸಲು ಈ ಬಾರಿ ಬಹಳ ಪ್ರಯತ್ನ ನಡೆಸಿದೆ. ರೈತರ ಸಮಸ್ಯೆ, ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ಮತ್ತು ಮುಖ್ಯವಾಗಿ ಶಾರದಾ ಚಿಟ್‌ ಫ‌ಂಡ್‌ ಹಗರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕದಿರುವ ವಿಚಾರವನ್ನು ಮುಂದಿಟ್ಟು ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ.  

Advertisement

ಬಿಜೆಡಿ ಅಧ್ಯಕ್ಷ ನವೀನ್‌ ಪಟ್ನಾಯಕ್‌ 2009ರಲ್ಲೇ ಎನ್‌ಡಿಎದೊಂದಿಗೆ ಮೈತ್ರಿ ಕಡಿದುಕೊಂಡರು. ಅಂದಿನಿಂದಲೂ ಒಡಿಶಾದಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯಬೇಕೆಂದು ಬಿಜೆಪಿ ಬಯಸುತ್ತಿದೆಯಾದರೂ, ಆ ರಾಜ್ಯದಲ್ಲಿ ಅದರ ಸಂಘಟನಾ ಸಾಮರ್ಥ್ಯ ಇಂದಿಗೂ ದುರ್ಬಲವಾಗಿಯೇ ಇದೆ. ಒಡಿಶಾದಲ್ಲಿ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆ 21. ಕಳೆದ ಬಾರಿಯ ಚುನಾವಣೆಯಲ್ಲಿ ನವೀನ್‌ ಪಟ್ನಾಯಕ್‌ರ ಪಾರ್ಟಿ 20 ಸ್ಥಾನಗಳಲ್ಲಿ ಗೆದ್ದಿತ್ತು. ಅಂದು ಬಿಜೆಪಿಗೆ ದಕ್ಕಿದ್ದು ಕೇವಲ 1 ಸ್ಥಾನ. ಸದ್ಯಕ್ಕಂತೂ ಬಿಜೆಪಿಯ ಗುರಿ ಕಾಂಗ್ರೆಸ್‌ ಅನ್ನು ಹಿಂದಿಕ್ಕಿ, ಒಡಿಶಾÏದ ಪ್ರಮುಖ ಪ್ರತಿಪಕ್ಷವಾಗಬೇಕು ಎಂಬುದಾಗಿದೆ. 

ಆದಾಗ್ಯೂ 2016ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡಿತ್ತು. ಒಡಿಶಾದ 849 ಜಿಲ್ಲಾ ಪರಿಷತ್‌ ಸ್ಥಾನಗಳಲ್ಲಿ 297 ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್‌ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿತ್ತು.  ಈ ಬಾರಿಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅದು ಕಾಂಗ್ರೆಸ್‌ ಅನ್ನು ಹಿಂದಿಕ್ಕಲಿದೆಯೇ ಎನ್ನುವುದನ್ನು ನೋಡಬೇಕಿದೆ. 

ಪ್ರಮುಖ ನಾಯಕರು 
ನವೀನ್‌ ಪಟ್ನಾಯಕ್‌(ಬಿಜೆಡಿ), ಭಾತೃಹರಿ ಮೆಹ್ತಾಬ್‌(ಬಿಜೆಡಿ), ಧರ್ಮೇಂದ್ರ ಪ್ರಧಾನ್‌(ಬಿಜೆಪಿ), ಬೈಜಯಂತ್‌ ಪಾಂಡಾ(ಬಿಜೆಪಿ), ನಿರಂಜನ್‌ ಪಟ್ನಾಯಕ್‌ (ಕಾಂಗ್ರೆಸ್‌), ನರಸಿಂಗ್‌ ಮಿಶ್ರಾ(ಕಾಂಗ್ರೆಸ್‌)

ಆಡಳಿತ ಪಕ್ಷ : ಬಿಜು ಜನತಾ ದಳ
21ಲೋಕಸಭಾ ಸ್ಥಾನಗಳು
3.18 ಕೋಟಿ ಒಟ್ಟು ಮತದಾರರು
147 ವಿಧಾನಸಭಾ ಸ್ಥಾನಗಳು

Advertisement

2014ರ ಲೋಕಸಭೆ
20 ಬಿಜೆಡಿ
01 ಬಿಜೆಪಿ

ವಿಧಾನ ಸಭೆಯಲ್ಲಿ
118 ಬಿಜೆಡಿ
16 ಕಾಂಗ್ರೆಸ್‌
10 ಬಿಜೆಪಿ
03 ಇತರೆ

ಮತ ಮಾಹಿತಿ
2014ರಲ್ಲಿ  ಅಭ್ಯರ್ಥಿಗಳ ಚುನಾವಣಾ ವೆಚ್ಚ
ಗೌರವ್‌ ಗೊಗೊಯ್‌ 82.40 ಲಕ್ಷ  (ಕಾಂಗ್ರೆಸ್‌)
ಮನ್‌ಸುಖ್‌ಭಾಯ್‌ ವಾಸವಾ 61.31 ಲಕ್ಷ  (ಬಿಜೆಪಿ)
ಸುಗತಾ ರಾಯ್‌ 65.53 ಲಕ್ಷ (ಟಿಎಂಸಿ)
ಇ.ಟಿ. ಮೊಹಮ್ಮದ್‌ ಬಷೀರ್‌ 64.96 ಲಕ್ಷ (ಐಯುಎಂಎಲ್‌)
ಸಿ. ಮಹೇಂದ್ರನ್‌ 64.39 ಲಕ್ಷ (ಎಐಎಡಿಎಂಕೆ)
ಸುಪ್ರಿಯಾ ಸುಳೆ 64.29 ಲಕ್ಷ  (ಎನ್‌ಸಿಪಿ)
ದಿ. ವಿನೋದ್‌ ಖನ್ನಾ 63.95 ಲಕ್ಷ (ಬಿಜೆಪಿ)
ಹೇಮಾಮಾಲಿನಿ 63.35 ಲಕ್ಷ (ಬಿಜೆಪಿ)
ಅರ್ಜುನ್‌ಲಾಲ್‌ ಮೀನಾ 62.44 ಲಕ್ಷ (ಬಿಜೆಪಿ)
ಅಪರೂಪ  ಪೋತಾªರ್‌  62.31 ಲಕ್ಷ (ಟಿಎಂಸಿ)

ಇಂದಿನ ಕೋಟ್‌

ಪಾಕ್‌ ಜಿಹಾದ್‌ ನಿಲ್ಲಿಸಬೇಕು ಎನ್ನುವುದಕ್ಕಿಂತ, ಸತ್ತ ಉಗ್ರರೆಷ್ಟೆಂದು ನಾವು ಚರ್ಚಿಸುತ್ತಿದ್ದೇವೆ. ಮೋದಿ ಸರ್ಕಾರ ಚರ್ಚೆ ಕೈಜಾರುವಂತೆ ಮಾಡಿಕೊಂಡಿತು. 
ತವಿನ್‌ ಸಿಂಗ್‌ 

ಇಂದು ವಿಶ್ವಕ್ಕೆ ಬೇಕಿರುವುದು ಯುದ್ಧವಲ್ಲ, ಗೌತಮ ಬುದ್ಧ. ಇಡೀ ಪ್ರಪಂಚಕ್ಕೆ ಇಂದು ಬೇಕಿರುವುದು ಶಾಂತಿ. 
ಜಿಗ್ನೇಶ್‌ ಮೇವಾನಿ

ಸಿದ್ದರಾಮಯ್ಯನವರೇ ಹಿಂದೂಗಳಿಗೆ ದೇಶದಲ್ಲಿ ಉಸಿರಾಡಲು ಬಿಡಿ. ಕುಂಕುಮವೆನ್ನುವುದು ಪವಿತ್ರವಾದದ್ದು ಎನ್ನುವುದು ಅರ್ಥಮಾಡಿಕೊಳ್ಳಿ. 
ಗರಿಮಾ ಸೆಹಗಲ್‌ 

ಪ್ರಶಾಂತ್‌ ಭೂಷಣ್‌ ಬಳಸಿದ ಮತ್ತು ಆಂಗ್ಲಪತ್ರಿಕೆಯೊಂದರಲ್ಲಿ ಪ್ರಕಟವಾದ ರಫೆಲ್‌ ಕುರಿತ ದಾಖಲೆಗಳು ಕಳುವಾದದ್ದು ಎಂದು 
ಸರ್ಕಾರ ಹೇಳುತ್ತಿದೆ!  
ನೂಪುರ್‌ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next