ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅವಕಾಶ ಅನಿರೀಕ್ಷಿತವಾಗಿ ಜೆಡಿಎಸ್‌ಗೆ ದೊರೆತಿದ್ದು, ಆ ಪಕ್ಷದ ಅಭ್ಯರ್ಥಿ ಯಾರಾಗಬಹುದು ಎಂಬ ಚರ್ಚೆಕ್ಷೇತ್ರದಲ್ಲಿ ಆರಂಭವಾಗಿದೆ.
ಕ್ಷೇತ್ರ ಪುನರ್ ವಿಂಗಡಣೆಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾದಾಗಿನಿಂದ ಈವರೆಗೆ 3 ಬಾರಿ ಚುನಾವಣೆ ನಡೆದಿದ್ದು, ಮೂರೂ ಚುನಾ ವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಅಭ್ಯರ್ಥಿ ಎದುರು ಭಾರೀ ಕಡಿಮೆ ಮತ ಪಡೆದುಕೊಂಡಿದ್ದಾರೆ. ಜೆಡಿ ಎಸ್‌ಗಿಂತಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಪ್ರಾಬಲ್ಯ ಹೊಂದಿರುವುದರಿಂದ ಆ ಪಕ್ಷಕ್ಕೇ ಕ್ಷೇತ್ರ ದೊರೆಯಬಹುದು ಎನ್ನಲಾಗುತ್ತಿತ್ತು. ಆದರೆ, ಅನಿರೀಕ್ಷಿತವಾಗಿ ಕ್ಷೇತ್ರ ಜೆಡಿಎಸ್ ಪಾಲಿಗೆ ಬಂದಿರುವುದರಿಂದ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಜೆಡಿಎಸ್‌ನಿಂದ ಎಂಎಲ್‌ಸಿ ಎಸ್.ಎಲ್.ಭೋಜೇಗೌಡ, ಪಕ್ಷದ ರಾಜ್ಯಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಮಾಜಿ ಶಾಸಕರಾದ ವೈಎಸ್‌ವಿ ದತ್ತ ಹಾಗೂ ಬಿ.ಬಿ.ನಿಂಗಯ್ಯ ಟಿಕೆಟ್ ಆಕಾಂಕ್ಷಿ ಗಳು. ಆದರೂ, ಎಸ್.ಎಲ್.ಭೋಜೇ ಗೌಡ ಅಭ್ಯರ್ಥಿ ಆಗಬಹುದು ಎನ್ನಲಾಗುತ್ತಿದೆ. ಈ ನಡುವೆ, ಬಿಜೆಪಿಯಿಂದ ಹಾಲಿ ಸಂಸದರಿಗೆ ಟಿಕೆಟ್ ಸಿಗಲಿದೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಅಲ್ಲಿನ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಕರೆ ತರುವ ಪ್ರಯತ್ನ ಜೆಡಿಎಸ್‌ನಿಂದ ನಡೆಯುತ್ತಿದೆ.
ಬಲಾಬಲ ಹೇಗಿದೆ?
ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚಿಕ್ಕ ಮಗಳೂರು ಜಿಲ್ಲೆಯ 4 ಹಾಗೂ ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ 3 ಹಾಗೂ ಉಡುಪಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಶೃಂಗೇರಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್‌ನ ಯಾವುದೇ ಶಾಸಕರೂ ಇಲ್ಲ. ಈ ಕ್ಷೇತ್ರದಲ್ಲಿ ನಡೆದಿರುವ 3 ಚುನಾವಣೆಗಳಲ್ಲಿಯೂ ಜೆಡಿಎಸ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಒಮ್ಮೆಯೂ ಆ ಪಕ್ಷದ ಅಭ್ಯರ್ಥಿ 1 ಲಕ್ಷ ಮತ ಪಡೆದುಕೊಂಡಿಲ್ಲ.
ಚುನಾ ವಣೆ ಕುರಿತು ನಾನು ಯಾವುದೇ ಹೇಳಿಕೆ ಗಳನ್ನು ಕೊಡುವುದಿಲ್ಲ. ಜೆಡಿಎಸ್ ಸೇರ್ಪಡೆ ಕುರಿತು ನನ್ನ ಅಭಿಪ್ರಾಯ ವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದೇನೆ.
● ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
ಎಸ್.ಕೆ.ಲಕ್ಷ್ಮೀ ಪ್ರಸಾದ್