ಜ.28ರಂದು ನಿಧರಾಗಿರುವ ಮಾಜಿ ಸಚಿವ, ಸಿಂದಗಿ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಸ್ಥಾನಕ್ಕೆ ಉಪ ಚುನಾವಣೆ ಎದುರಾಗಲಿದೆ. ಹೀಗಾಗಿ ಸಹಜವಾಗಿ ಕ್ಷೇತ್ರದಲ್ಲಿಮುತ್ಯಾನ ಉತ್ತರಾ ಧಿಕಾರಿ ಯಾರು ಎಂಬ ಚರ್ಚೆ ಏರ್ಪಟ್ಟಿದೆ. ಆದರೆ ಯಾರೂ ಮುಕ್ತವಾಗಿ ಚರ್ಚೆಗೆ ಸಿದ್ಧರಾಗಿಲ್ಲ. ಎಂ.ಸಿ.ಮನೂಳಿ ಅವರ ಕುಟುಂಬದಲ್ಲಿ ಸದ್ಯ ಸೂತಕದ ಛಾಯೆ ಇರುವುದರಿಂದ ಕುಟುಂಬದಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿಲ್ಲ.
Advertisement
13 ದಿನಗಳ ದೈವಿ ಕಾರ್ಯ ಮುಗಿಸಿದ ಬಳಿಕ ಮನಗೂಳಿ ಅವರ ಕುಟುಂಬದಲ್ಲಿ ಉತ್ತರಾ ಧಿಕಾರಿ ಯಾರು ಎಂಬ ಚರ್ಚೆ ಆರಂಭಗೊಳ್ಳುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಮನಗೂಳಿ ಅವರ ಪುತ್ರರಾದ ಅಶೋಕ ಹಾಗೂ ಡಾ| ಶಾಂತವೀರ ಅವರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟ ಕಾರಣ ಜೆಡಿಎಸ್ ವರಿಷ್ಠರು ವೃದ್ಧಾಪ್ಯದಲ್ಲೂ ಎಂ.ಸಿ. ಮನಗೂಳಿ ಅವರನ್ನೇ ಸ್ಪರ್ಧೆಗೆ ಇಳಿಸಿದ್ದರು. ಇದು ನನ್ನ ಅಂತಿಮ ಚುನಾವಣೆ ಎಂದು ಪ್ರಚಾರ ಸಭೆಯಲ್ಲಿ ಆಡಿದ ಭಾವನಾತ್ಮಕ ಮಾತುಗಳು ಎಂ.ಸಿ.ಮನಗೂಳಿ ಅವರನ್ನು 80 ಇಳಿವಯಸ್ಸಲ್ಲೂ ಗೆಲ್ಲಿಸಿದ್ದವು.
Related Articles
Advertisement
ಭೂಸನೂರು, ಶಾಬಾದಿ ಪೈಪೋಟಿ: ಭೂಸನೂರ ಅವರ ಹೊರತಾಗಿಯೂ ಬಿಜೆಪಿಯಲ್ಲಿ ಮುತ್ತು ಶಾಬಾದಿ ಅವರಿಗೆ ಟಿಕೆಟ್ ಪಡೆಯಲು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇದರ ಮಧ್ಯೆ ಬಿಜೆಪಿ ಮೇಲ್ಮನೆ ಶಾಸಕರಾದ ಹನುಮಂತ ನಿರಾಣಿ ಹಾಗೂ ಅರುಣ ಶಹಾಪುರ ಅವರು ಸಾಂತ್ವನ ಹೇಳುವ ನೆಪದಲ್ಲಿ ಮನಗೂಳಿ ಅವರ ಮನೆಗೆ ಎರಡು ದಿನಗಳ ಹಿಂದೆ ನೀಡಿದ ಭೇಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಒಂದೊಮ್ಮೆ ಮನಗೂಳಿ ಕುಟುಂಬದಲ್ಲಿ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಪೈಪೋಟಿ ಏರ್ಪಟ್ಟಲ್ಲಿ ಅದರ ಲಾಭ ಪಡೆಯಲು ಬಿಜೆಪಿ ನಾಯಕರು ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಸದಸ್ಯ ಬಲದ ಶಕ್ತಿ ಪಡೆಯಲು ಸಿಂದಗಿ ಉಪ ಚುನಾವಣೆ ಸಹಾಯಕ್ಕೆ ಬರಲಿದೆ. ಕ್ಷೇತ್ರವನ್ನು ಮರಳಿ ವಶಕ್ಕೆ ಪಡೆಯಲು ಮನಗೂಳಿ ಕುಟುಂಬದ ರಾಜಕೀಯ ಪೈಪೋಟಿ ಬಿಜೆಪಿ ರಾಜಕೀಯ ಅಸ್ತ್ರವಾಗಿಸಿಕೊಂಡರೂ ಅಚ್ಚರಿ ಇಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇಂಥ ಬೆಳವಣಿಗೆ ಕಂಡು ಬಂದಲ್ಲಿ ಭೂಸನೂರ ಅವರನ್ನು ಕೈ ಹಿಡಿದು ಮನೆಗೆ ಸ್ವಾಗತಿಸಲು ಕಾಂಗ್ರೆಸ್ ಕೂಡ ಗುಪ್ತ ಚಿಂತನೆಯಲ್ಲಿದೆ ಎಂಬ ಮಾತಿದೆ.ಏಕೆಂದರೆ ಭೂಸನೂರ ಹಾಗೂ ಅವರ ಪತ್ನಿ ಸ್ಥಳೀಯ ಗ್ರಾಮೀಣ ಸಂಸ್ಥೆ ಹಿನ್ನೆಲೆಯಿಂದಲೇ ರಾಜಕೀಯ ಪ್ರವೇಶ ಮಾಡಿದ್ದರು. ಕಾರಣ ಇಂತ ಒಂದು ರಾಜಕೀಯ ಲೆಕ್ಕಾಚಾರದ ಚರ್ಚೆಯೂನಡೆದಿದೆ. ಹೀಗಾಗಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಎಂ.ಸಿ. ಮನಗೂಳಿ ಅವರಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಇನ್ನು ಜೋರು ಪಡೆಯಲಿದೆ ಎಂಬುದಂತೂ ಸತ್ಯ.
ಜಿ.ಎಸ್. ಕಮತರ