Advertisement

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

09:51 PM Mar 25, 2024 | Team Udayavani |

ರಾಮನಗರ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದ್ದಂತೆ, ಚನ್ನಪಟ್ಟಣದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಯಾರು ಎಂಬ ಚರ್ಚೆ ಜಿಲ್ಲೆಯಲ್ಲಿ ಆರಂಭಗೊಂಡಿದೆ.

Advertisement

ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲಿ ದಳಪತಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂಬುದು ಜೆಡಿಎಸ್‌ ಕಾರ್ಯಕರ್ತರ ವಿಶ್ವಾಸ. ಈ ಕಾರಣದಿಂದಾಗಿ ಕುಮಾರಸ್ವಾಮಿ ಮಂಡ್ಯದಿಂದ ಗೆದ್ದು ಲೋಕಸಭೆಗೆ ಹೋದರೆ, ಅವರ ರಾಜೀನಾಮೆಯಿಂದ ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆ ಎದುರಾಗಲಿದ್ದು, ಅಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.

ಯೋಗೇಶ್ವರ್‌ಗೆ ಅವಕಾಶ?
ಕುಮಾರಸ್ವಾಮಿ ವಿರುದ್ಧ ಎರಡು ಚುನಾವಣೆಯಲ್ಲಿ ಪರಾಜಿತರಾಗಿರುವ ಸಿ.ಪಿ. ಯೋಗೇಶ್ವರ್‌ ಈಗ ದೇವೇಗೌಡರ ಕುಟುಂಬದ ಜತೆಗೆ ಸಖ್ಯ ಬೆಳೆಸಿದ್ದಾರೆ. ದಳಪತಿಗಳ ಜತೆಗೆ ಸೈನಿಕ ಬೆಳೆಸಿಕೊಂಡಿರುವ ಹೊಸ ಬಾಂಧವ್ಯ ಕಳೆದುಕೊಂಡಿರುವ ಶಾಸಕ ಸ್ಥಾನವನ್ನು ಮತ್ತೆ ತಂದುಕೊಡಲಿದೆಯೇ ಎಂಬ ನಿರೀಕ್ಷೆ ಯೋಗೇಶ್ವರ್‌ ಬೆಂಬಲಿಗರಲ್ಲಿ ಮೂಡಿದೆ.

ಸೋಮವಾರ ನಡೆದ ಸಭೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾಗಿ ಆ ಪಕ್ಷದ ಮುಖಂಡರು ತಿಳಿಸುತ್ತಿದ್ದಾರೆ. ಎರಡೂ ಪಕ್ಷಗಳು ಮೈತ್ರಿಯಾಗಿದ್ದು, ಕುಮಾರಸ್ವಾಮಿ ಜೆಡಿಎಸ್‌ಗೆ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರಾ ಅಥವಾ ಯೋಗೇಶ್ವರ್‌ಗೆ ಬಿಟ್ಟುಕೊಡುತ್ತಾರಾ ಎಂಬ ಚರ್ಚೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next