ಮುಂಬೈ: ಜನಪ್ರಿಯ ಕ್ಯಾಮ್ಲಿನ್ ಪೆನ್ಸಿಲ್, ಕಂಪಾಸ್ ಬಾಕ್ಸ್ ಸಂಸ್ಥಾಪಕ ಸುಭಾಶ್ ದಾಂಡೇಕರ್ (ದಾದಾಸಾಹೇಬ್ ದಿಗಂಬರ್ ದಾಂಡೇಕರ್@85) ತೀವ್ರ ಅನಾರೋಗ್ಯದಿಂದ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ದಾಂಡೇಕರ್ ಅವರು ಪುತ್ರ ಆಶೀಶ್ ಮತ್ತು ಪುತ್ರಿ ಅನಘಾ ಅವರನ್ನು ಅಗಲಿದ್ದಾರೆ. ದಾಂಡೇಕರ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಸೋಮವಾರ (ಜುಲೈ 15) ಹಿಂದುಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
ಮುಂಬೈನ ದಾದರ್ ನಲ್ಲಿರುವ ಶಿವಾಜಿ ಪಾರ್ಕ್ ಶ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಕ್ಯಾಮ್ಲಿನ್ ಸಮೂಹ ಸಂಸ್ಥೆಯ ಉದ್ಯೋಗಿಗಳು, ಗಣ್ಯರು ಹಾಜರಿದ್ದರು ಎಂದು ವರದಿ ಹೇಳಿದೆ.
ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದ ದಾಂಡೇಕರ್ ಅವರು, ನೌಕರರಿಗೆ ಯಾವತ್ತೂ ಗೌರವ ಸಿಗಬೇಕೆಂದು ಅವರು ಪ್ರತಿಪಾದಿಸುತ್ತಿದ್ದು, ಮರಾಠಿ ಮೂಲದ ದಾಂಡೇಕರ್ ತಮ್ಮ ಉದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಸಂತಾಪ ವ್ಯಕ್ತಪಡಿಸಿದ್ದಾರೆ.
1931ರಲ್ಲಿ ಡಿಪಿ ದಾಂಡೇಕರ್ ಮತ್ತು ಜಿಪಿ ಡಾಂಡೇಕರ್ ಸಹೋದರರು ಕ್ಯಾಮ್ಲಿನ್ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಈ ಸ್ಟೇಷನರಿ ಸಂಸ್ಥೆ ಡಾಂಡೇಕರ್ & co. ಎಂದೇ ಜನಪ್ರಿಯವಾಗಿತ್ತು. 1946ರಲ್ಲಿ ಕ್ಯಾಮ್ಲಿನ್ ಅನ್ನು ಖಾಸಗಿ ಕಂಪನಿ ಎಂದು ಗುರುತಿಸಲಾಗಿದ್ದು, 1998ರಲ್ಲಿ ಅದು ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿತ್ತು. 1980-90ರ ದಶಕದಲ್ಲಿ ಕ್ಯಾಮ್ಲಿನ್ ಪೆನ್ಸಿಲ್, ಕಂಪಾಸ್ ಬಾಕ್ಸ್ , ಪೆನ್ ಶಾಲಾ ವಿದ್ಯಾರ್ಥಿಗಳ ನೆಚ್ಚಿನ ಬ್ರ್ಯಾಂಡ್ ಆಗಿತ್ತು.
ಇದನ್ನೂ ಓದಿ:Max Teaser: I Will Finsh the.. Game.. ‘ಮ್ಯಾಕ್ಸ್ʼ ಟೀಸರ್‌ನಲ್ಲಿ ಮಚ್ಚು ಹಿಡಿದ ಕಿಚ್ಚ