Advertisement
ಇದನ್ನೂ ಓದಿ:ಅತ್ಯಾಚಾರವೆಸಗಿ, ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವ ಅಂದರ್…!
Related Articles
Advertisement
ಪ್ರಧಾನಿ ಮೋದಿ ಅವರಿಗೆ ಲಸಿಕೆ ನೀಡಿದ್ದ ಸಿಸ್ಟರ್ ನಿವೇದಾ ಮಾಧ್ಯಮದವರ ಜತೆ ಮಾತನಾಡುತ್ತ, ಲಸಿಕೆ ಪಡೆದ ನಂತರ ಪ್ರಧಾನಿಯವರು, ಓಹ್..ಲಸಿಕೆ ಕೊಟ್ಟಾಯ್ತಾ, ಇದು ನನ್ನ ಅನುಭವಕ್ಕೂ ಕೂಡಾ ಬರಲಿಲ್ಲ” ಎಂದು ಉದ್ಗರಿಸಿರುವುದಾಗಿ ತಿಳಿಸಿದರು.
ಪ್ರಧಾನಿ ಮೋದಿ ಅವರು ಲಸಿಕೆ ಹಾಕಿಸಿಕೊಳ್ಳಲು ಏಮ್ಸ್ ಗೆ ಬರುತ್ತಾರೆ ಎಂಬ ವಿಚಾರ ಇಂದು(ಸೋಮವಾರ, ಮಾರ್ಚ್ 01) ಬೆಳಗ್ಗೆಯಷ್ಟೇ ತಿಳಿಯಿತು. ಪ್ರಧಾನಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರುವುದು ತುಂಬಾ ಸಂತಸ ತಂದಿದೆ. ಇದೊಂದು ಮರೆಯಲಾರದ ದಿನ ಎಂದು ಸಿಸ್ಟರ್ ನಿವೇದಾ ಹಾಗೂ ಸಿಸ್ಟರ್ ರೋಸಮ್ಮ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಾನು ಕೋವಿಡ್ 19 ಮೊದಲ ಲಸಿಕೆಯನ್ನು ಪಡೆದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ತಿಳಿಸಿದ್ದು, 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ.