Advertisement

ಇಸ್ರೋಗೆ ಸೋಮನಾಥ್‌ ನೂತನ ಮುಖ್ಯಸ್ಥ

10:34 AM Jan 13, 2022 | Team Udayavani |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನ ಸಂಸ್ಥೆ(ಇಸ್ರೋ) ನೂತನ ಮುಖ್ಯಸ್ಥರನ್ನಾಗಿ ರಾಕೆಟ್‌ ವಿಜ್ಞಾನ ತಜ್ಞ ಎಸ್‌. ಸೋಮನಾಥ್‌ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ.

Advertisement

ಹಾಲಿ ಅಧ್ಯಕ್ಷ ಕೆ. ಶಿವನ್‌ ಅವರ ಅಧಿಕಾರಾವಧಿ ಮುಗಿದ ಬಳಿಕ ಕೇರಳ ಮೂಲದ ಸೋಮನಾಥ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಿಎಸ್‌ಎಲ್‌ವಿ ಎಂಕೆ-3 ಉಡಾವಣ ವಾಹಕವನ್ನು ಅಭಿವೃದ್ಧಿಪಡಿಸುವಲ್ಲಿ ಸೋಮನಾಥ್‌ ಪ್ರಮುಖ ಪಾತ್ರ ವಹಿಸಿದ್ದರು. ಅವರು ಇಸ್ರೋ ಅಧ್ಯಕ್ಷರಾಗಿ ಮಾತ್ರವಲ್ಲದೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರಲಿದ್ದಾರೆ.

ಇದನ್ನೂ ಓದಿ:ಪಾದಯಾತ್ರೆ: ಹೈಕೋರ್ಟ್‌ ಆದೇಶದಂತೆ ನಡೆದುಕೊಳ್ಳುತ್ತೇವೆ: ಸಿದ್ದರಾಮಯ್ಯ

ಕೇರಳದಲ್ಲಿ ಜನಿಸಿದ್ದ ಸೋಮನಾಥ್‌ ಕೊಲ್ಲಂನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. ಬಳಿಕ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. 2010ರಿಂದ 2014ರ ವರೆಗೆ ಜಿಎಸ್‌ಎಲ್‌ವಿ ಎಂಕೆ-3 ವಾಹಕದ ಪ್ರಾಜೆಕ್ಟ್ ಡೈರೆಕ್ಟರ್‌ ಆಗಿ ಸೇವೆ ಸಲ್ಲಿಸಿದ್ದರು.

Koo App

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next