Advertisement
2007-08ರಲ್ಲೇ ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ವೃತ್ತದ ನಡುವೆ ನಿರ್ಮಿಸ ಲಾದ ಮೆಟ್ರೋ ಮಾರ್ಗದ ಸಿವಿಲ್ ಕಾಮ ಗಾರಿಗೆ ನವ ಯುಗ ಕಂಪನಿಯು ಅತ್ಯಂತ ನುರಿತ ಎಂಜಿ ನಿಯರ್‌ಗಳನ್ನು ನಿಯೋಜಿಸಿತ್ತು (ಡಿಎಲ್‌ಪಿ ಅವಧಿ ಎರಡು ವರ್ಷ ಇತ್ತು). ಆ ಕಾಮಗಾರಿ ಯನ್ನು ಇಂಚಿಂಚೂ ಪರಿಶೀಲಿಸಿ “ಓಕೆ’ ಎಂದು ಹೇಳಿದ್ದು ರೈಟ್ಸ್ ಸಂಸ್ಥೆ.
Related Articles
Advertisement
ಒಂದು ಮಾದರಿ ಯನ್ನು ಆ ಅಧಿಕಾರಿಗಳು ಪರಿಶೀಲಿಸ ಬಹುದು. ಅದೇನೇ ಇರಲಿ, ಘಟನೆಗೆ ಹೊಣೆಗಾರರನ್ನು ಹುಡುಕುವ ಬದಲಿಗೆ ಪರೀಕ್ಷಾ ವಿಧಾನಗಳನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ, ಪುನರಾವರ್ತನೆ ಆಗದಂತೆ ಉಳಿದೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೆಸರು ಹೇಳ ಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಕಾಂಕ್ರೀಟ್ ಶಿಥಿಲಗೊಂಡಿರುವ ಸಾಧ್ಯತೆ: ನಿಗಮದ ಮೂಲಗಳ ಪ್ರಕಾರ, ಟ್ರಿನಿಟಿ ನಿಲ್ದಾಣದ ಸಮೀಪದ ವಯಾಡಕ್ಟ್ ಕೆಳಗೆ ಅಳವಡಿಸಲಾಗಿರುವ ನಾಲ್ಕು ಗರ್ಡರ್‌ಗಳನ್ನು ಜೋಡಿಸಿ ಹಾಕಲಾಗಿ ರುವ 200 ಟನ್ ತೂಕದ ಡಯಾಫ್ರೆಮ್ (diaphragm)ನಲ್ಲಿ ಕಾಂಕ್ರೀಟ್ ಶಿಥಿಲಗೊಂಡಿರುವ ಸಾಧ್ಯತೆ ಇದೆ.
ಪರಿಣಾಮ ಆ ಕಾಂಕ್ರೀಟ್ ಮೇಲಿದ್ದ ಬೇರಿಂಗ್ ಸುಮಾರು 15 ಮಿ.ಮೀ.ನಷ್ಟು ಕೆಳಗೆ ಕುಸಿದಿದೆ. ಅದಕ್ಕೆ ಕಬ್ಬಿಣದ ಕಂಬಿಗಳನ್ನು ಆಧಾರವಾಗಿ ಇಡಲಾಗಿದೆ. ಇನ್ನು ಆ ಮಾರ್ಗದಲ್ಲಿ ರೈಲು ಹಾದುಹೋದಾಗ, ಅದರ ಭಾರ ಕಂಬದ ಮೇಲೆ ಬೀಳುವ ಕಾರಣ, ಉದ್ದೇಶಿತ ಮಾರ್ಗದಲ್ಲಿ ಗಂಟೆಗೆ ಕೇವಲ 20 ಕಿ.ಮೀ. ವೇಗದಲ್ಲಿ ಮೆಟ್ರೋ ಸಂಚರಿಸುತ್ತಿದೆ.
ಸಾಮಾನ್ಯವಾಗಿ ಮೆಟ್ರೋ ಮಾರ್ಗದಲ್ಲಿ ಪ್ರಿ-ಕಾಸ್ಟ್ ಸ್ಪ್ಯಾನ್ (ಮೊದಲೇ ನಿರ್ಮಿಸಿದ ವಯಾಡಕ್ಟ್ಗಳು)ಗಳನ್ನು ಹಾಕಲಾಗುತ್ತದೆ. ಆದರೆ, ಮೊದಲ ಹಂತದ ರೀಚ್-1 (ಎಂ.ಜಿ. ರಸ್ತೆ-ಬೈಯಪ್ಪನಹಳ್ಳಿ) ಮತ್ತು 2 (ಕುಷ್ಟರೋಗ ಆಸ್ಪತ್ರೆ-ಮೈಸೂರು ರಸ್ತೆ)ರಲ್ಲಿ ನಿಲ್ದಾಣಗಳ ಅಂಚಿನಲ್ಲಿ ಸಣ್ಣ ಸ್ಪ್ಯಾನ್‌ಗಳನ್ನು ಅಲ್ಲಿಯೇ “ಮೋಲ್ಡ್’ ಮಾಡಿ ನಿರ್ಮಿಸಲಾಗಿದೆ. ಇದು ದೆಹಲಿ ಮೆಟ್ರೋದ ಮಾದರಿ. ಈಗ ಈ ಪದ್ಧತಿಯನ್ನು ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದೆಹಲಿ ಮೆಟ್ರೋ ವಯಾಡಕ್ಟ್‌ನಲ್ಲೂ ಕಾಣಿಸಿತ್ತು ಸಮಸ್ಯೆ: ಈ ಹಿಂದೆ ದೆಹಲಿ ಮೆಟ್ರೋದ ವಯಾಡಕ್ಟ್‌ನಲ್ಲಿ ಕೂಡ ಸಮಸ್ಯೆ ಕಾಣಿಸಿಕೊಂಡಿತ್ತು. ಏರ್‌ಪೋರ್ಟ್ ಮಾರ್ಗದ ಮೆಟ್ರೋ ಸೇತುವೆಯ ವಯಾಡಕ್ಟ್ ಮತ್ತು ಕಂಬದ ನಡುವಿನ ಬೇರಿಂಗ್ ಕಿತ್ತು ಹೊರ ಬಂದಿತ್ತು. ಇದರಿಂದ ಏರ್‌ಪೋರ್ಟ್ ಮಾರ್ಗದ ಮೆಟ್ರೋ ಸೇವೆ ಕೆಲ ದಿನಗಳ ಮಟ್ಟಿದೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ದೆಹಲಿ ಮೆಟ್ರೋದಲ್ಲಿ ಆಗ ಕಾಣಿಸಿಕೊಂಡಿದ್ದ ಸಮಸ್ಯೆಗೆ ಹೋಲಿಸಿದರೆ, “ನಮ್ಮ ಮೆಟ್ರೋ’ದಲ್ಲಿ ಈಗ ಉದ್ಭವಿಸಿರುವ ಸಮಸ್ಯೆಯ ಗಂಭೀರತೆ ತೀವ್ರ ಸ್ವರೂಪದ್ದಲ್ಲ ಎನ್ನಲಾಗಿದೆ.