Advertisement

ಲುಕಾ ರೊಮೆರೊ: ಲಾ ಲೀಗಾ ಇತಿಹಾಸದ ಕಿರಿಯ ಆಟಗಾರ

10:33 PM Jun 25, 2020 | Sriram |

ಮ್ಯಾಡ್ರಿಡ್‌: ರಿಯಲ್‌ ಮಲ್ಲೋರ್ಕ ತಂಡದ ಫಾರ್ವರ್ಡ್‌ ಆಟಗಾರ ಲೂಕಾ ರೊಮೆರೊ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಲಾ ಲೀಗಾ ಇತಿಹಾಸದ ಅತೀ ಕಿರಿಯ ಆಟಗಾರನಾಗಿದ್ದಾರೆ. ರೊಮೆರೊ ವಯಸ್ಸು 15 ವರ್ಷ, 229 ದಿನ.

Advertisement

ಬುಧವಾರ ರಿಯಲ್‌ ಮ್ಯಾಡ್ರಿಡ್‌ ಎದುರಿನ ಪಂದ್ಯದ 83ನೇ ನಿಮಿಷದಲ್ಲಿ ಲೂಕಾ ರೊಮೆರೊ ಕಣಕ್ಕಿಳಿದರು. ಇದರೊಂದಿಗೆ 81 ವರ್ಷಗಳಷ್ಟು ಹಿಂದೆ ಫ್ರಾನ್ಸಿಸ್ಕೊ ಬೊ ರಾಡ್ರಿಗೆಜ್‌ ನಿರ್ಮಿಸಿದ ದಾಖಲೆ ಪತನಗೊಂಡಿತು. ಅವರು 15 ವರ್ಷ, 255ನೇ ದಿನದಲ್ಲಿ ಮೊದಲ ಲಾ ಲೀಗಾ ಪಂದ್ಯವನ್ನು ಆಡಿದ್ದರು.

ಕಳೆದ 3 ಪಂದ್ಯಗಳಲ್ಲಿ ರೊಮೆರೊ ಬದಲಿ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇವರನ್ನು ಆಡಿಸುವ ಅವಕಾಶ ತಂಡಕ್ಕೆ ಎದುರಾಗಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next