Advertisement

ಪಾಕ್‌ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದರ್ಶನ್‌ ಲಾಲ್‌

06:20 AM Aug 06, 2017 | Team Udayavani |

ನವದೆಹಲಿ: ಪಾಕಿಸ್ತಾನದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಹಿಂದೂ ಧರ್ಮೀಯ ವ್ಯಕ್ತಿಯೊಬ್ಬರು ಸಚಿವ ಸ್ಥಾನಕ್ಕೇರಿ ದಾಖಲೆ ನಿರ್ಮಿಸಿದ್ದಾರೆ. ಸಚಿವರಾಗಿ ನೇಮಕವಾಗಿರುವ ವ್ಯಕ್ತಿ ದರ್ಶನ್‌ ಲಾಲ್‌(65). ಇವರು ಪಾಕಿಸ್ತಾನದ 4 ಪ್ರಾಂತ್ಯಗಳ ಪರಸ್ಪರ ಹೊಂದಾಣಿಕೆಯ ಉಸ್ತುವಾರಿ ವಹಿಸಲಿರುವರು ಎನ್ನಲಾಗಿದೆ.

Advertisement

ಪನಾಮ ಪೇಪರ್‌ ಹಗರಣದಲ್ಲಿ ಸಿಲುಕಿರುವ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹಂಗಾಮಿ ಪ್ರಧಾನಿಯಾಗಿ ನೇಮಕವಾಗಿರುವ ಶಾಹಿದ್‌ ಖಾಖನ್‌ ಅಬ್ಟಾಸಿ ಶುಕ್ರವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಅವರು ತಮ್ಮ ಸಂಪುಟದ ಸಚಿವರಾಗಿ ದರ್ಶನ್‌ ಲಾಲ್‌ರನ್ನು ನೇಮಕ ಮಾಡಿರುವುದನ್ನು ಘೋಷಿಸಿದರು. ವೃತ್ತಿಯಲ್ಲಿ ವೈದ್ಯರಾಗಿರುವ ದರ್ಶನ್‌, ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಘೋಟಿR ಜಿಲ್ಲೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರು ಲೋಕಸಭೆ ಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್‌-ಎನ್‌ ಪಕ್ಷದಿಂದ ಅಲ್ಪಸಂಖ್ಯಾತರ ಮೀಸಲಾತಿ ಅಡಿಯಲ್ಲಿ ಟಿಕೆಟ್‌ ಪಡೆದು ಎರಡನೇ ಬಾರಿಗೆ ಲೋಕಸಭೆಗೆ ಎಂಟ್ರಿ ಪಡೆದಿದ್ದರು. ಆದರೆ, ಈಗ ಅವರು ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. 2018ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಅಬ್ಟಾಸಿ ಸಂಪುಟ ರಚಿಸಿದ್ದಾರೆ. ಆಡಳಿತಾರೂಢ ಪಿಎಂಎಲ್‌-ಎನ್‌ನ ಮೈತ್ರಿ ಪಕ್ಷಗಳ ಸದಸ್ಯರು ಮತ್ತು ಷರೀಫ್ರ ಸಹವರ್ತಿಗಳಿಗೆ ಸಂಪುಟದಲ್ಲಿ ಹೆಚ್ಚಿನ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next