Advertisement

ಗ್ಯಾಸ್‌ ಸಂಪರ್ಕ ಇರುವವರಿಗೂ ಸೀಮೆಎಣ್ಣೆ: ಸಚಿವ ಖಾದರ್‌

10:59 AM Feb 24, 2017 | |

ಮಂಗಳೂರು: ರಾಜ್ಯದಲ್ಲಿ ನಗರ ಪ್ರದೇಶಗಳನ್ನು ಹೊರತು ಪಡಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಗ್ಯಾಸ್‌ ಹೊಂದಿರುವ ಪಡಿತರ ಚೀಟಿದಾರರಿಗೆ 1 ಲೀ. ಸೀಮೆಎಣ್ಣೆ ವಿತರಿಸಬೇಕೆಂಬ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಗ್ರಾಮಾಂತರ ಪ್ರದೇಶಗಳಲ್ಲಿ , ಅದರಲ್ಲೂ ಮುಖ್ಯವಾಗಿ ಮಲೆನಾಡು ಜಿಲ್ಲೆಗಳಲ್ಲಿ ಗ್ಯಾಸ್‌ ಇದ್ದವರಿಗೂ ಸೀಮೆಎಣ್ಣೆಯ ಆವಶ್ಯಕತೆ ಇರುವುದನ್ನು ಮನಗಂಡು ತಿಂಗಳಿಗೆ 1 ಲೀ. ಸೀಮೆಎಣ್ಣೆಯನ್ನಾದರೂ ವಿತರಿಸಲು ವ್ಯವಸ್ಥೆ ಆಗಬೇಕೆಂದು ಆಹಾರ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅದನ್ನು ಮುಖ್ಯಮಂತ್ರಿ ಅನುಮೋದಿಸಿದ್ದಾರೆ. ಇದರಿಂದ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಒಪ್ಪಿಗೆ ಪತ್ರ ಕೊಡಬೇಕು: ಗ್ಯಾಸ್‌ ಹೊಂದಿದವರು ಈ 1 ಲೀ. ಸೀಮೆ ಎಣ್ಣೆಯನ್ನು ಪಡೆಯಲು ಒಪ್ಪಿಗೆ ಪತ್ರವನ್ನು (ವಿಲ್ಲಿಂಗ್‌ನೆಸ್‌ ಲೆಟರ್‌) ಗ್ರಾ.ಪಂ.ಗೆ ಸಲ್ಲಿಸಬೇಕು. ಒಂದು ಬಾರಿ ಈ ಪತ್ರವನ್ನು ಕೊಟ್ಟರೆ ಸಾಕು ಎಂದು ಸಚಿವರು ತಿಳಿಸಿದರು.ಕೇಂದ್ರ ಸರಕಾರವು ಉಜ್ವಲ ಯೋಜನೆಯಡಿ ಸೀಮೆಎಣ್ಣೆ ಮುಕ್ತ ವಲಯ ಸೃಷ್ಟಿಸಬೇಕೆಂದು ಸಲಹೆ ನೀಡಿದೆ ಎಂದು ಅವರು ತಿಳಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next