ಬೀಜಿಂಗ್: ತುರ್ತು ಬಳಕೆಗಾಗಿ ಚೀನಾದ ಸಿನೋಫಾರ್ಮ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಶರತ್ತುಬದ್ಧ ಅನುಮತಿ ನೀಡಿದೆ.
ಫೈಜರ್ /ಬಯೋಎನ್ ಟೆಕ್, ಆಸ್ಟ್ರಾಜೆನೆಕಾ-ಎಸ್ ಕೆ ಬಯೋ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಜಾನ್ಸೆನ್ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದ್ದರೆ, ಡೇಟಾ ಸಂಬಂಧಿತ ಸಮಸ್ಯೆಗಳಿಂದಾಗಿ ಚೀನಾದ ಲಸಿಕೆಗೆ ಮಾನ್ಯತೆ ವಿಳಂಬವಾಗಿತ್ತು.
ಇದನ್ನೂ ಓದಿ:ಕರಾವಳಿ ಆಸ್ಪತ್ರೆಗಳಲ್ಲಿಯೂ ಈಗ ಬೆಡ್ ನಿರ್ವಹಣೆ ಸವಾಲು
ಸಿನೋಫಾರ್ಮ್ ಲಸಿಕೆಯನ್ನು 45 ದೇಶಗಳು ಬಳಸಲು ವ್ಯಾಪ್ತಿ ಹೊಂದಿದ್ದು, 65 ದಶಲಕ್ಷ ಪ್ರಮಾಣವನ್ನು ನೀಡಲಾಗಿದೆ. ಆದರೆ ಲಸಿಕೆಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆಯದ ಕಾರಣ ಅನೇಕ ದೇಶಗಳು ಅದನ್ನು ಬಳಸಲು ಹಿಂಜರಿಯುತ್ತವೆ. ಹೀಗಾಗಿ ಇದೀಗ ಒಪ್ಪಿಗೆ ಪಡೆದಿರುವುದು ಚೀನಾಗೆ ಲಸಿಕೆ ವಿಚಾರದಲ್ಲಿ ದೊಡ್ಡ ಮುನ್ನಡೆ ಸಿಕ್ಕಿದಂತಾಗಿದೆ.
ಚೀನಾ ತನ್ನ ಐದು ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಅದರಲ್ಲೂ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳನ್ನು ವಿದೇಶಗಳಲ್ಲೂ ಬಳಸಲಾಗುತ್ತಿದೆ.
ಇದನ್ನೂ ಓದಿ:ಕೋವಿನ್‌ನಲ್ಲಿ ಇಂದಿನಿಂದ 4 ಅಂಕಿಗಳ ಸೆಕ್ಯುರಿಟಿ ಕೋಡ್